ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಐತಿಹಾಸಿಕ ಪ್ರವಾಸಿತಾಣ ಹುತ್ರಿದುರ್ಗ ಬೆಟ್ಟದಲ್ಲಿ ಕಾಡು ಮರಗಳ ಮಾರಣಹೋಮ ನಿಲ್ಲದಂತಾಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ!
ಕುಣಿಗಲ್ ತಾಲ್ಲೂಕಿನ ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಐತಿಹಾಸಿಕ ಪ್ರವಾಸಿತಾಣ ಹುತ್ರಿದುರ್ಗ ಬೆಟ್ಟದ ಬುಡದಲ್ಲಿ ಕಾಡು ಮರಗಳ ಮಾರಣಹೋಮ ನಡೆಯುತ್ತಿದ್ದರು ಸಹ ಅರಣ್ಯ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಕಂದಾಯ ಇಲಾಖೆಯ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ ಇತ್ತಿಚೆಗೆ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿಯಂದೆ ಹುತ್ರಿದುರ್ಗ ಬೆಟ್ಟದ ತಪ್ಪಲಿನಲ್ಲಿ ಕೊಟೆ ಬಾಗಿಲಿಗೆ ಹೊಂದಿಕೊಂಡಂತೆ ಇರುವ ಮರ ಗಿಡಗಳನ್ನು ಕಡಿಯಲಾಗಿತ್ತು ಈ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ಸ್ಥಳಿಯ ಶಾಸಕರ ಗಮನಕ್ಕೂ ತಂದರು ಸಹ ತಪ್ಪಿತಸ್ಥರ ವಿರುದ್ಧ ಕ್ರಮವಾಗಿಲ್ಲ ಈ ಘಟನೆ ಮಾಸುವ ಮುನ್ನವೆ ಬೆಟ್ಟದ ತಪ್ಪಲಿನಲ್ಲಿ ಮತ್ತೆ ಮರಗಳನ್ನು ಕಡಿಯುತ್ತಿರುವುದು ಬೆಳಕಿಗೆ ಬಂದಿದೆ ಈ ಹಿಂದೆ ಯಾವುದೆ ರೀತಿಯ ಅನುಮತಿ ಪಡೆದೆ ಕಲ್ಲು ಬಂಡೆಯನ್ನು ಸ್ಪೋಟಿಸಿ ಮರಗಿಡಗಳನ್ನು ಕತ್ತರಿಸಿದವರ ವಿರುದ್ದ ಇದುವರೆಗೂ ಕ್ರಮವಾಗಿಲ್ಲ ಐತಿಹಾಸಿಕ ಪ್ರವಾಸಿತಾಣದ
ಅಭಿವೃದ್ದಿಗಾಗಿ ಕೋಟ್ಯಾಂತರ ವೆಚ್ಚದಲ್ಲಿ ಅಭಿವೃದ್ದಿಕಾರ್ಯ ಮಾಡಲಾಗಿದೆ ಆದರೆ ಪಾರಂಪರಿಕ ತಾಣದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಖಡಿವಾಣ ಹಾಕದ ಹೊರತು ಅಭಿವೃದ್ದಿ ಸಾಧ್ಯವಿಲ್ಲ ಈ ಬಗ್ಗೆ ಗಮನ ಹರಿಸದ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಯಾವ ಪುರುಷಾರಕ್ಕೆ ನಾಡಪ್ರಭುಗಳ ಜಯಂತಿಯನ್ನು ಹುತ್ರಿದುರ್ಗ ಬೆಟ್ಟದಲ್ಲಿ ಆಚರಿಸುತ್ತಿದ್ದಾರೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಪ್ರತಿಯೊಂದಕ್ಕೂ ಸಾರ್ವಜನಿಕರೆ ಭಾಗಿಯಾಗುವುದಾದರೆ ಅಧಿಕಾರಿಗಳು ಏಕೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಇನ್ನೂ ಹುತ್ರಿದುರ್ಗ ಬೆಟ್ಟದ

ಮೇಲೆ ಭೂ ಮಾಫಿಯಾ ಕಣ್ಣು ಬಿದ್ದಿದ್ದು ಹಲವು ಪ್ರಭಾವಿಗಳು ಹುತ್ರಿದುರ್ಗದಲ್ಲಿ ಭೂಮಿ ಖರಿದಿಸಿದ್ದಾರೆ ಎಂಬ ವಿಷಯ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುವ ಹುತ್ರಿದುರ್ಗ ಬೆಟ್ಟದ ತಪ್ಪಲಿನಲ್ಲಿ ಭೂಗಳ್ಳರ ಹಾವಳಿ ಹೆಚ್ಚುತ್ತಿದ್ದು ಇತ್ತಿಚೆಗೆ ಬೆಟ್ಟದ ಬುಡದಲ್ಲಿ ಜೆಸಿಬಿ ಯಂತ್ರ ಬಳಸಿ ಭೂಮಿ ಸಮತಟ್ಟು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಭೂ ಕುಸಿತ ಉಂಟಾದರು ಆಶ್ಚರ್ಯ ಪಡಬೇಕಿಲ್ಲ ಕಂದಾಯ ಇಲಾಖೆಯಲ್ಲಿ ನೀಡಿರುವ ಸಾಗುವಳಿ ಪತ್ರ ಇಟ್ಟುಕೊಂಡು ಇತ್ತಿಚೇಗೆ ಭೂಮಿ ಸಮತಟ್ಟು ಮಾಡಲು ಮುಂದಾಗಿರುವ ಕೆಲವರಿಗೆ ಕಂದಾಯ ಇಲಾಖೆಯ, ತಾಲ್ಲೂಕು ಆಡಳಿತ,ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸುವ ಮೂಲಕ ಬಿಸಿ ಮುಟ್ಟಿಸಬೇಕಿದೆ ಇತ್ತಿಚೇಗೆ ಬೆಂಗಳೂರು ಗ್ರಾಮಾಂತರ ಲೊಕಸಭಾ ಕ್ಷೇತ್ರದ ಸಂಸದ ಸಿ.ಎನ್ ಮಂಜುನಾಥ್ ರವರು ಹುತ್ರಿದುರ್ಗ ಅಭಿವೃದ್ದಿಗಾಗಿ ಸ್ವದೇಶಿ ದರ್ಶನ್ 2.0 ಯೋಜನೆ ಅಡಿಯಲ್ಲಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದಾರೆ ಆದರೆ ಕುಣಿಗಲ್ ತಾಲ್ಲೂಕಿಗೆ ಹೆಮ್ಮೆಯ ಗರಿಮೆಯಾಗಿರುವ ಹುತ್ರಿದುರ್ಗ ಕೋಟೆ ಅಲ್ಲಿನ ಪರಿಸರ ಸಂರಕ್ಷಣೆ ಮಾಡುವಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಅಕ್ರಮ ಎಸಗಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ @publicnewskunigal