ಕುಣಿಗಲ್ ಶಾಸಕ ಡಾ. ರಂಗನಾಥ್ ರವರ ಹುಟ್ಟುಹಬ್ಬದ ಪ್ರಯುಕ್ತ ಜಿ.ಕೆ.ಬಿ.ಎಂ.ಎಸ್ ಮಾರ್ನಿಂಗ್ ಕ್ರಿಕೆಟರ್ಸ್ ವತಿಯಿಂದ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ‘ಪರಮೇಶ್ವರ ಕಪ್ – 2025’ ಅನ್ನು 2 ಮತ್ತು 3ನೇ ತಾರೀಖು ಕುಣಿಗಲ್ ನ ಜಿ.ಕೆ.ಬಿ.ಎಮ್.ಎಸ್ ಮೈದಾನದಲ್ಲಿ ಆಯೋಜಿಸಲಾಗಿದ್ದು ತುಮಕೂರಿನ ‘ಅಶ್ವಮೇದ ಕ್ರಿಕೆಟರ್ಸ್’ ಪ್ರಥಮ ಬಹುಮಾನ ಪಡೆಯುವುದರ ಜೊತೆಗೆ 50,000/- ರೂಪಾಯಿ ನಗದು ಪಡೆದು “ಪರಮೇಶ್ವರ ಕಪ್ 2025′ ಅನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಬಹುಮಾನ 25,000/-
ರೂಪಾಯಿ ನಗದು ಮತ್ತು ಕಪ್ ಅನ್ನು ಕುಣಿಗಲ್ ನ ಪರಮೇಶ್ವರ್ ಯುವ ಸೈನ್ಯ ಕ್ರಿಕೆಟರ್ಸ್ ಪಡೆದುಕೊಂಡಿದೆ. ಅಖಿಲ ಕರ್ನಾಟಕ ಡಾ. ಜಿ ಪರಮೇಶ್ವರ್ ಯುವ ಸೈನ್ಯ (ರಿ) ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಈ ಕ್ರಿಕೆಟ್ ಪಂದ್ಯ ಆಯೋಜಿಸಿದ್ದು ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಹಾಸನ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ 20 ತಂಡಗಳು ಭಾಗವಹಿಸಿದ್ದು ಮೊದಲ ಬಹುಮಾನ ಮತ್ತು ಟ್ರೋಫಿಯನ್ನು ತುಮಕೂರಿನ ಅಶ್ವಮೇದ ಕ್ರಿಕೆಟರ್ಸ್ ಪಡೆದುಕೊಂಡಿದೆ. ದ್ವಿತೀಯ ಬಹುಮಾನ ನಮ್ಮ ಜಿ ಪರಮೇಶ್ವರ್ ಯುವ ಸೈನ್ಯ ಕ್ರಿಕೆಟರ್ಸ್ ಪಡೆದುಕೊಂಡಿದೆ. ಕುಣಿಗಲ್ ಶಾಸಕರಾದ ಡಾಕ್ಟರ್ ರಂಗನಾಥ್ ರವರು ಫೈನಲ್ ಹಂತಕ್ಕೆ ಬಂದಿದ್ದ ತಂಡಗಳಿಗೆ ಟಾಸ್ ಹಾಕುವ ಮೂಲಕ ಶುಭಹಾರೈಸಿದರು ಕೆಚ್ಚೆದೆಯ ವೀರ ಕನ್ನಡಿಗರ ವೇದಿಕೆ (ರಿ), ಹಾಗೂ ಶ್ರೀ ಹಾಲರಂಗ ಸಿದ್ದೇಶ್ವರಸ್ವಾಮಿ ದೇವಸ್ಥಾನ ಕಲ್ಯಾಣ ಟ್ರಸ್ಟ್ (ರಿ), ಕುಣಿಗಲ್ ಕಿಂಬರ್ಲಿ ಕ್ರಿಕೆಟ್ ಅಕಾಡೆಮಿ ರವರ ಪ್ರೋತ್ಸಾಹದಲ್ಲಿ ಸುಸೂತ್ರವಾಗಿ ಪಂದ್ಯ ನಡೆದಿದ್ದು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಯ ಜೊತೆ ಧನ್ಯವಾದವನ್ನು ತಿಳಿಸಿದ್ದಾರೆ.@publicnewskunigal