ಮುಖ್ಯಶಿಕ್ಷಕ ಹಾಗೂ ಗುಮಾಸ್ತನ ಜಗಳದಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಪ್ರವಚನ ವಿಳಂಬ ಹಿನ್ನೆಲೆ ಪೋಷಕರ ಆಕ್ರೋಶ ಕ್ರಮಕ್ಕೆ ಆಗ್ರಹ!
ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀನಪ್ಪನಹಳ್ಳಿ ಗ್ರಾಮದಲ್ಲಿರುವ ಶ್ರೀ ಅಂಬಾ ಭವಾನಿ ಅನುದಾನಿತ ಫ್ರೌಡಶಾಲೆಯ ಮುಖ್ಯಶಿಕ್ಷಕ ಹಾಗೂ ಗುಮಾಸ್ತನ ಒಳಜಗಳ ಇದಿಗ ಬೀದಿಗೆ ಬಿದ್ದಿದ್ದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ ಇವರಿಬ್ಬರ ಜಗಳದಲ್ಲಿ ಮಕ್ಕಳಿಗೆ ಕಳೆದೆರಡು ತಿಂಗಳುಗಳಿಂದ ಪಾಠ ಪ್ರವಚನ ಸರಿಯಾಗಿ ನಡೆಯುತ್ತಿಲ್ಲ ಹಿಂದಿ ಶಿಕ್ಷಕರು ಯಾರು ಇಲ್ಲ ಶಾಲೆ ಪ್ರಾರಂಭವಾಗಿ ಎರಡು ತಿಂಗಳು ಕಳೆದಿದೆ ಮಕ್ಕಳಿಗೆ ಸರಿಯಾಗಿ ಪಾಠ ನಡೆಯುತ್ತಿಲ್ಲ ಜೋತೆಗೆ ಶಿಕ್ಷಕರ ಕೊರತೆ ಇದ್ದು ಸಮಸ್ಯೆ ಬಗೆ ಹರಿಸುವಲ್ಲಿ ಶಾಲೆಯ ಆಡಳಿತ ಮಂಡಳಿ ವಿಫಲವಾಗಿದೆ ಕಳೆದೊಂದು ವರ್ಷದಿಂದ ಮಕ್ಕಳನ್ನು ಶಾಲೆಗೆ ಕರೆತರಲು ವಾಹನದ ವ್ಯವಸ್ಥೆ ಕಲ್ಪಿಸಲಾಗಿತ್ತು ಆದರೆ ಇದಿಗಾ ಏಕಾಏಕಿ ವಾಹನದ ವ್ಯವಸ್ಥೆ ನಿಲ್ಲಿಸಲಾಗಿದೆ ಶಾಲೆಗೆ ಹತ್ತು ಹನ್ನೆರಡು ಕಿಲೋಮೀಟರ್ ದೂರದಿಂದ ಮಕ್ಕಳು ಬರಬೇಕಿದ್ದು ನಮ್ಮ ಗ್ರಾಮಗಳಿಗೆ ಬಸ್ ಸೌಕರ್ಯವು ಇಲ್ಲದಂತಾಗಿದೆ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಶಿಕ್ಷಕರು ಮನೆಯಬಳಿ ಬಂದು ಒತ್ತಡ ಹಾಕುತ್ತಿದ್ದರು ಶಾಲೆ ದೂರ ಇದೆ ಬಸ್ ಸಂಪರ್ಕ ಇಲ್ಲ ಎಂದಿದ್ದಕ್ಕೆ ಮಕ್ಕಳು ಶಾಲೆಗೆ ಬರಲು ವಾಹನದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ ಬಳಿಕ ಶಾಲೆಗೆ ಮಕ್ಕಳನ್ನು ದಾಖಲಿಸಲಾಗಿದೆ ಆದರೆ ಶಿಕ್ಷಕರ ಕೊರತೆ ಬಗೆಹರಿಸಿಲ್ಲ ಎಂದು ಪೋಷಕರು ಶಾಲೆಯ ಬಳಿ ಜಮಾಯಿಸಿ ಆಡಳಿತ ಮಂಡಳಿಯವರ ವಿರುದ್ದ ಆಕ್ರೋಶ ಹೊರಹಾಕಿದರು ಪ್ರಸ್ತುತ ಶಾಲೆಯಲ್ಲಿ ನೂರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಮುಖ್ಯ ಶಿಕ್ಷಕ ಹಾಗೂ ಗುಮಾಸ್ತನ ವರ್ತನೆಗೆ ಬೆಸತ್ತ ಮಕ್ಕಳು ಶಾಲೆಯಲ್ಲಿ ನಡೆಯುತ್ತಿರುವ ಘಟನೆಯ ಬಗ್ಗೆ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ ಶಾಲೆಗೆ ಬಂದ ಪೋಷಕರು ಆಡಳಿತ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರೊಂದಿಗೆ ಪೋಷಕರ ಸಭೆ ನಡೆಸಿ ಸೊಮವಾರದ ಒಳಗೆ ಸಮಸ್ಯೆ ಬಗೆಹರಿಸಿ ಮಕ್ಕಳಿಗೆ ಪಾಠ ಪ್ರವಚನದಲ್ಲಿ ಸಮಸ್ಯೆಯಾಗದಂತೆ ಕ್ರಮ ವಹಿಸಲು ತಪ್ಪಿದ್ದಲ್ಲಿ ಸೂಕ್ತ ಕ್ರಮ ಜರುಗಿಸುವುದಾಗಿ ಸೂಚಿಸಿದ್ದಾರೆ @publicnewskunigal