ಸ್ತ್ರೀಯರನ್ನು ಗೌರವಿಸಿ ಯಾರು ಪೂಜಿಸುತ್ತಾರೋ ಅಂತಹ ಸ್ಥಳಗಳಲ್ಲಿ ಭಗವಂತ ನೆಲೆಸಿರುತ್ತಾನೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿಕೆ!
ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ಕದರಾಪುರ ಅರೆಪಾಳ್ಯ ಗ್ರಾಮಗಳ ಸಮೀಪ ಶ್ರೀ ಶ್ರೀನಿವಾಸ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಮಹಾಲಕ್ಷ್ಮಿ,ಶ್ರೀ ಪದ್ಮಾವತಿ, ಶ್ರೀ ಶ್ರೀನಿವಾಸ್ ಸ್ವಾಮಿ ಅವರ ನೂತನ ದೇವಾಲಯಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಗಳು ಯಾವುದೇ ಕುಟುಂಬಗಳಲ್ಲಿ ಮನೆಯಲ್ಲಿ ತಾಯಂದಿರು ನಗುನಗುತ್ತಾ ಇರುತ್ತಾರೋ ಅಂತಹ ಮನೆಗಳಲ್ಲಿ ಭಗವಂತ ನೆಲೆಸಿರುತ್ತಾನೆ ಸ್ತ್ರೀಯರನ್ನು ಗೌರವದಿಂದ ನೋಡಿಕೊಳ್ಳಬೇಕು ದೇವರು ಯಾರ ಕಣ್ಣಿಗೂ ಕಾಣುವುದಿಲ್ಲ ದಿನನಿತ್ಯ ನೀವು ಮಾಡುವ ಪ್ರಾಮಾಣಿಕ ಕೆಲಸಗಳಲ್ಲಿ ದೇವರನ್ನು ಕಾಣಬಹುದು ಕೇವಲ ನೆಪ ಮಾತ್ರಕ್ಕೆ ದೇವರನ್ನು ಪೂಜಿಸಿದರೆ ಏನು ಪ್ರಯೋಜನವಿಲ್ಲ ನಿಷ್ಕಲ್ಮಶವಾಗಿ ಶಾಂತಿಯಿಂದ ಆತನ ಧ್ಯಾನ ಮಾಡಿದರೆ ಅಲ್ಲಿ ದೇವರು ನೆಲೆಸಿರುತ್ತಾನೆ ಮೊದಲಿಗೆ ಪ್ರತಿಯೊಬ್ಬರನ್ನು ಪ್ರೀತಿಯಿಂದ ಮಮತೆಯಿಂದ ನೋಡುವುದನ್ನು ಕಲಿಯಬೇಕು ದಿನನಿತ್ಯ ತಮ್ಮಲ್ಲಿ ಇದ್ದಷ್ಟು ದಾನ ಧರ್ಮಗಳನ್ನು ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಿ ಎಂದರು. ಕೋಟ್ಯಂತರ ಹಣ ಖರ್ಚು ಮಾಡಿ ದೇವಾಲಯಗಳನ್ನು ನಿರ್ಮಾಣ ಮಾಡುವುದು ದೊಡ್ಡ ವಿಷಯವಲ್ಲ ನಿರ್ಮಾಣ ಮಾಡಿದ ದೇವಾಲಯಗಳಲ್ಲಿ ದಿನನಿತ್ಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕಟ್ಟುನಿಟ್ಟಾಗಿ ಪೂಜೆಗಳು ನಡೆಯಬೇಕು ಆಗ ನೀವುಗಳು ಹಣ ಖರ್ಚು ಮಾಡಿ ದೇವಾಲಯ ನಿರ್ಮಾಣ ಮಾಡಿದ್ದಕ್ಕೂ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಮಾತನಾಡುತ್ತಾ
ಆರ್ಥಿಕವಾಗಿ ಸದೃಢವಾಗಿರುವವರು ಇಂತಹ ಧಾರ್ಮಿಕ ಕೆಲಸಗಳಿಗೆ ತಮ್ಮ ಕೈಯಲ್ಲಾದಷ್ಟು ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಹತ್ತುಹಲವಾರು ವಿಚಾರಗಳನ್ನು ಮನಮುಟ್ಟುವಂತೆ ತಿಳಿಸಿದರು ಇದಕ್ಕೂ ಮುನ್ನ ತುಮಕೂರು ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಒಳಗೊಂಡಂತೆ ಅನೇಕ ಮಠಾಧೀಶರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತರಿಗೆ ಆಶೀರ್ವ ವಚನವನ್ನು ನೀಡಿದ್ದರು .
ಈ ಸಂದರ್ಭದಲ್ಲಿ ದೇವಾಲಯ ನಿರ್ಮಾಣ ಮಾಡುವುದಕ್ಕೆ ಭೂಮಿಯನ್ನು ದಾನವಾಗಿ ನೀಡಿದ್ದ ಅರೆಪಾಳ್ಯ ಕಮಲಮ್ಮ ಶಾಸಕರಾದ ಡಾಕ್ಟರ್ ಎಚ್ ಡಿ ರಂಗನಾಥ್ ಮಾಜಿ ಸಚಿವರಾದ ಡಿ ನಾಗರಾಜಯ್ಯ ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ಒಳಗೊಂಡಂತೆ ಅನೇಕ ರಾಜಕೀಯ ಮುಖಂಡರುಟ್ರಸ್ಟ್ ಧರ್ಮದರ್ಶಿಗಳಾದ ಕೆಜಿ ಬೋರೇಗೌಡ ಹಾಗೂ ನಿರ್ದೇಶಕರುಗಳು ಭಕ್ತ ಸಮೂಹ ಉಪಸ್ಥಿತರಿದ್ದರು ನೂತನ ದೇವಾಲಯದ ಉದ್ಘಾಟನೆ ಕಾರ್ಯಕ್ರಮ ಆಗಸ್ಟ್ 2 ರ ಶನಿವಾರದಿಂದ ಆಗಸ್ಟ್ 6ರ ಬುಧವಾರದವರೆಗೆ ತುಂಬಾ ವಿಜೃಂಭಣೆಯಿಂದ ಜರುಗಿತು ದೇವಾಲಯದ ಕಾರ್ಯಕ್ರಮಕ್ಕೆ ಬಂದಂತಹ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು ಬಂದಂತಹ ಭಕ್ತರಿಗೆ ದಿನನಿತ್ಯ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.@publicnewskunigal