ತಾಲ್ಲೂಕು ಕಚೇರಿ ಆವರಣದಲ್ಲಿ ಮಾಂಸದ ಊಟದ ಜಾಹೀರಾತು ಇರುವ ನಾಮಫಲಕಗಳ ರಾರಾಜಿಸುತ್ತಿದ್ದು ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ!
ಕುಣಿಗಲ್ ಪಟ್ಟಣದ ತಾಲ್ಲೂಕು ಕಚೇರಿ ಆವರಣದ ತುಂಬೆಲ್ಲ ಮಾಂಸದ ಊಟದ ಹೋಟೆಲ್ ಜಾಹೀರಾತುಗಳ ಫಲಕಗಳು ರಾರಾಜಿಸುತ್ತಿವೆ ಇದೇನು ಸರ್ಕಾರಿ ಕಚೇರಿಯ ಆವರಣವೋ ಅಥವಾ ಜಾಹೀರಾತು ಫಲಕಗಳನ್ನ ಹಾಕುವ ಖಾಸಗಿ ಕಟ್ಟಡದ ಆವರಣವೋ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗ ಹೊಸದಾಗಿ ಮಾಂಸದ ಊಟದ ಹೋಟೆಲ್ ಆರಂಭಿಸಲಾಗಿದ್ದು ಸೋಮವಾರ ಬೆಳಗ್ಗೆ ತಾಲೂಕು ಕಚೇರಿ ಆವರಣದ ತುಂಬೆಲ್ಲ ಮಾಂಸದ ಹೋಟೆಲ್ ಗಳ ಜಾಹಿರಾತುಗಳೇ ರಾರಾಜಿಸುತ್ತಿದ್ದವು. ಕಚೇರಿಯ ಕೆಲಸಕ್ಕೆ ಬಂದಂತಹ ನಾಗರೀಕರು ಸರ್ಕಾರಿ ಕಚೇರಿಯ ಆವರಣದಲ್ಲಿ ಮಾಂಸದ ಊಟದ ಹೋಟೆಲ್ ಜಾಹೀರಾತು ಫಲಕಗಳನ್ನು ಹಾಕಿರುವುದನ್ನ ಕಂಡು ಇವರಿಗೆ ಮಾಂಸದ ಊಟದ ಹೋಟೆಲ್ ನಾಮ ಫಲಕಗಳನ್ನು ಹಾಕಲು ಇವರಿಗೆ ಅನುಮತಿ ನೀಡಿದವರು ಯಾರು, ಇನ್ನೂ ಕೆಲವರಂತೂ ಇದೇನು ಅಸಹ್ಯ ಎಂದು ಬೇಜಾರು ಮಾಡಿಕೊಳ್ಳುತ್ತಿದ್ದರು. ಕಚೇರಿಯ ಅಧಿಕಾರಿಗಳು ಮಾತ್ರ ಜಾಹೀರಾತುಗಳನ್ನು ಕಂಡರೂ ಕಾಣದಂತೆ ಕಚೇರಿ ಮುಂಭಾಗದಿಂದಲೇ ಕಚೇರಿಯ ಒಳಗಡೆ ಹಾದು ಹೋಗುತ್ತಿದ್ದರು, ಯಾವ ಅಧಿಕಾರಿಗಳು ಕೂಡ ಜಾಹೀರಾತು ನಾಮ ಫಲಕಗಳನ್ನು ಹಾಕಿದ್ದವರನ್ನು ಕರೆಸಿ ತೆಗೆಸುವ ಕೆಲಸ ಮಾತ್ರ ಮಾಡಲಿಲ್ಲ. ಕಂಡರೂ ಕಾಣದಂತೆ ಕಣ್ಣು ಮುಚ್ಚಿಕೊಂಡು, ಹೇಳಿದರು ಕೇಳಿಸಿಕೊಳ್ಳದಂತೆ ಕಿವಿ ಮುಚ್ಚಿಕೊಂಡು ಮುಂದೆ ಸಾಗುತ್ತಿದ್ದರು. ಗ್ರಾಮಾಂತರ ಪ್ರದೇಶಗಳಿಂದ ಕಚೇರಿಯ ಕೆಲಸಕ್ಕೆ ಬಂದಿದ್ದ ಜಯಣ್ಣ, ಬಸವರಾಜು, ನಂಜಪ್ಪ, ರವಿ, ರಾಜು, ಗಂಗಾಧರ್ ಮಾತ್ರ ಮಾಂಸದ ಹೋಟೆಲ್ ಜಾಹೀರಾತು ನಾಮಫಲಕವನ್ನು ಕಚೇರಿಯ ಆವರಣದಲ್ಲಿ ಹಾಕಲು ಅನುಮತಿ ನೀಡಿದವರು ಯಾರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು @publicnewskunigal