ಸಿನಪ್ಪನಹಳ್ಳಿ ಗ್ರಾಮದ ಶ್ರೀ ಭೈರವೇಶ್ವರ ಸ್ವಾಮಿ ದೇವಾಲಯದ ಬಾಗಿಲು ಮುರಿದು ಆಭರಣ ಕಳವು!
ಕುಣಿಗಲ್ ತಾಲ್ಲೂಕಿನ ಸಿನಪ್ಪನಹಳ್ಳಿ ಗ್ರಾಮದಲ್ಲಿ ಭಾನುವಾರ ತಡ ರಾತ್ರಿ ಹಲವು ಕಡೆಗಳಲ್ಲಿ ಕಳ್ಳರು ತಮ್ಮ ಕೈಚಳಕ ತೊರಿಸಿದ್ದಾರೆ ಗ್ರಾಮದ ಶ್ರೀ ಭೈರವೇಶ್ವರ ಸ್ವಾಮಿ ದೇವಾಲಯದ ಬಾಗಿಲು ಮುರಿದು ದೇವರಿಗೆ ಧರಿಸಲಾಗಿದ್ದ ಬೆಳ್ಳಿ ಕಿರೀಟ ಸೇರಿದಂತೆ ಹಲವು ಒಡವೆಗಳನ್ನು ದೊಚಲಾಗಿದೆ ಬಳಿಕ ಮನೆಯ ಮುಂದೆ ನಿಲ್ಲಿಸಲಾಗಿದ್ದ ಭೈರಯ್ಯ ಎಂಬುವವರಿಗೆ ಸೇರಿದ್ದ ದ್ವಿಚಕ್ರ ವಾಹನ ಕಳವು ಮಾಡಲಾಗಿದ್ದು ಗ್ರಾಮದ ಕಾಡರಾಮನಹಳ್ಳಿ ರಸ್ತೆಯಲ್ಲಿ ಇರುವ ಶಾರದಮ್ಮ ಹಾಗೂ ವೆಂಕಟಯ್ಯ ಎಂಬುವವರ ಮನೆಗೆ ನುಗ್ಗಿದ ಖದೀಮರು ಮನೆಯವರು ಎಚ್ಚರಗೊಳ್ಳುತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ದೇವಾಲಯದಲ್ಲಿ ಒಂದು ಲಕ್ಷ ಮೌಲ್ಯದ ಆಭರಣಗಳು ಕಳುವಾಗಿದ್ದು ಗ್ರಾಮಸ್ಥರ ದೂರು ಹಿನ್ನೆಲೆ ಸ್ಥಳಕ್ಕೆ ಕುಣಿಗಲ್ ಪೊಲೀಸ್ ಠಾಣೆಯ ಸಿಪಿಐ ನವೀನ್‌ಗೌಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ @publicnewskunigal