ಮಾರ್ಕೋನಹಳ್ಳಿ ಹಾಗೂ ಮಂಗಳಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರಾಗಿ ಬೆಳೆಗೆ ನೀರು ಬಿಡುವ ಕಾರ್ಯಕ್ಕೆ ಶಾಸಕ ಡಾ,ರಂಗನಾಥ್ ಚಾಲನೆ!
ಕುಣಿಗಲ್ ತಾಲ್ಲೂಕಿನ ಅಮೃತೂರು ವ್ಯಾಪ್ತಿಯ ಮಾರ್ಕೋನಹಳ್ಳಿ ಹಾಗೂ ಮಂಗಳಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ರಾಗಿ ಬೇಳೆಗೆ ನೀರು ಹರಿಸಲು ಶಾಸಕ ಡಾ.ರಂಗನಾಥ್ ಶುಕ್ರವಾರ ಚಾಲನೆ ನೀಡಿದರು ಈ ವೇಳೆ ಮಾತನಾಡಿದ ಅವರು ರೈತರ ಮನವಿಯ ಮೇರೆಗೆ ಈ ಹಿಂದೆ ಸಭೆಯಲ್ಲಿ ನಿಗದಿ ಪಡಿಸಿದಂತೆ ರೈತರ ಬೆಳೆಗೆ ನೀರು ಬಿಡಲಾಗುತ್ತಿದೆ ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾಗಲು ಕೆವಲ ಅರ್ಧ ಅಡಿ ಬಾಕಿಯಿದ್ದು ರೈತರಿಗೆ ಮಾತು ಕೊಟ್ಟಂತೆ ಇಂದು ಮಾರ್ಕೋನಹಳ್ಳಿ ವ್ಯಾಪ್ತಿಯ ಹನ್ನೊಂದು ಕೆರೆಗಳು ಸೇರಿದಂತೆ ಅದಿನಾಲ್ಕು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹಾಗೂ ಮಂಗಳಾ ಜಲಾಶಯದ ವ್ಯಾಪ್ತಿಯ ಒಂಭತ್ತು ಕೆರೆಗಳು ಮತ್ತು ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಲಾಗಿದೆ ಭಗವಂತನ ಕೃಪೆ ಹಾಗೂ ತಾಲ್ಲೂಕಿನ ರೈತರ ಆಶಿರ್ವಾದದಿಂದ ಸತತ ಏಳು
ವರ್ಷಗಳಿಂದ ರೈತರ ಬೆಳೆಗಳಿಗೆ ನೀರು ಕೊಡುವಂತಹ ಅವಕಾಶ ನನಗೆ ಸಿಕ್ಕಿದೆ ಜೋತೆಗೆ ಸರ್ಕಾರದ ವಿಷೇಶವಾದ ಗಮನ ಡಿ.ಕೆ ಶಿವಕುಮಾರ್ ರವರ ಮಾರ್ಗದರ್ಶನ ರೈತರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ನನಗೆ ರೈತರ ಹಿತ ಮುಖ್ಯವಾದದ್ದು ಈ ಬಾರಿಯು ಸಹ ಮಾರ್ಕೋನಹಳ್ಳಿ ಜಲಶಯಕ್ಕೆ ಭಾಗಿನ ಕೊಡಲಾಗುತ್ತದೆ ಎಂದರು ಬಳಿಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಕೂಡ ಮೈಸೂರಿನಲ್ಲಿ ಹದಿನೆಂಟು ವರ್ಷಗಳ ಕಾಲ ಓದುತ್ತಿದ್ದಾಗ ಪ್ರತಿವರ್ಷ ಬೆಟ್ಟ ಅತ್ತಿ ದೇವಿಯ ದರ್ಶನ ಮಾಡುತ್ತಿದ್ದೆ ಯಾರು ಬಂದರು ಸಹ ದೇವಿ ಎಲ್ಲರಿಗೂ ಆಶಿರ್ವದಿಸಿದ್ದಾಳೆ ನಾಡದೇವತೆ ಚಾಮುಂಡೇಶ್ವರಿ ಯಾರ ಆಸ್ತಿಯು ಅಲ್ಲ ಈ ಹಿಂದೆ ಮೈಸೂರು ದಸರವನ್ನು ಕೆ.ಎಸ್ ನಿಸಾರ್ ಅಹಮದ್ ಉದ್ಘಾಟಿಸಿದ್ದರು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕಂಪನ್ನು ಪಸರಿಸಿ ಬುಕರ್ ಪ್ರಶಸ್ತಿ ಪಡೆದ ಬಾನುಮುಸ್ತಾಕ್ ರನ್ನು ದಸರ ಉದ್ಘಾಟಿಸಲು ವಿರೋಧಿಸುವ ಬಿಜೆಪಿಗರು ನಿಜವಾದ ಮಹಿಳಾ ವಿರೋಧಿಗಳು ಆರೋಗ್ಯಕರ ಸಮಾಜವನ್ನ ಧರ್ಮದ ಹೆಸರಲ್ಲಿ ಭಾಗ ಮಾಡುವುದನ್ನು ದಿಕ್ಕರಿಸಿದ್ದನ್ನ ಈ ಹಿಂದಿನ ಚುನಾವಣೆಯಲ್ಲಿ ನೊಡಿದ್ದೇವೆ ಹಿಂದೂ ಧರ್ಮ ಎಂಬುದು ಎಲ್ಲಾ ಜಾತಿ ಮತವನ್ನೂ ತನ್ನೊಂದಿಗೆ ಕರೆದೊಯ್ಯುವಂತಹ ಕೆಲಸ ತಾಯಿ ಚಾಮುಂಡೇಶ್ವರಿ ಮಾಡುತ್ತಾಳೆ ಇದನ್ನೆಲ್ಲ ಪೋಷಣೆ ಮಾಡುವ ಅಗತ್ಯವಿಲ್ಲ ಬಿಜೆಪಿಗರು ಮುಂದಿನ ದಿನಗಳಲ್ಲಿ ಬದಲಾವಣೆ ಹಾಗಲಿಲ್ಲ ಎಂದರೆ ಈ ಶಾಪ ತಟ್ಟುತ್ತದೆ ಎಂದರು ಈ ವೇಳೆ ಹೇಮಾವತಿ ನಾಲ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀನಿವಾಸ್,ಸಹಾಯಕ ಕಾರ್ಯಪಾಲಕ ಅಭಿಯಂತರ ರುದ್ರೇಶ್,ಅಮೃತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹರೀಶ್,ಪುರಸಭೆ ಸದಸ್ಯ ಅರುಣ್ ಕುಮಾರ್ ಜವರಾಯಿಗೌಡ, ಸಣಬ ಶ್ರೀನಿವಾಸ್,ಸೇರಿದಂತೆ ಸ್ಥಳಿಯ ಮುಖಂಡರು ರೈತರು ಉಪಸ್ಥಿತರಿದ್ಧರು @publicnewskunigal