ಪಟ್ಟಣದ ಸ್ಟಡ್ ಫಾರಂಗೆ ಪಶುಸಂಗೊಪನ ಸಚಿವ ಕೆ.ವೆಂಕಟೇಶ್ ಬೇಟಿ ನೀಡಿ ವೀಕ್ಷಣೆ ನಡೆಸಿದರು!
ಕುಣಿಗಲ್ ಪಟ್ಟಣದ ಸ್ಟಡ್ ಫಾರಂಗೆ ಬುಧವಾರ ಪಶುಸಂಗೊಪನ ಸಚಿವ ಕೆ.ವೆಂಕಟೇಶ್ ಹಾಗೂ ಶಾಸಕ ಡಾ,ರಂಗನಾಥ್ ಬೇಟಿ ನೀಡಿ ಸ್ಟಡ್ ಫಾರಂ ವೀಕ್ಷಣೆ ನಡೆಸಿದರು ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಶಾಸಕ ಡಾ.ರಂಗನಾಥ್ ರವರು ಕುದುರೆ ಫಾರಂ ಗೆ ಒಮ್ಮೆ ಬೇಟಿ ನೀಡುವಂತೆ ಮನವಿ ಮಾಡಿದ್ದರು ಈ ಹಿನ್ನೆಲೆಯಲ್ಲಿ ಸ್ಟಡ್ ಫಾರಂ ಗೆ ಬೇಟಿ ನೀಡಲಾಗಿದೆ ಎಂದರು ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಹಿಂದೆ ಪೂನ ವಾಲ ಎಂಬುವರಿಗೆ ಸ್ಟಡ್ ಫಾರಂ ಗುತ್ತಿಗೆ ನಿಡಲಾಗಿತ್ತು ಕಾರಣಾಂತರಗಳಿಂದ ಗುತ್ತಿಗೆ ರದ್ದಾದ ಬಳಿಕ ಬೇರೆ ಯಾರಿಗೂ ಗುತ್ತಿಗೆ ನೀಡಲಾಗಿಲ್ಲ ರೇಸ್ ಕೋರ್ಸ್ ಸ್ಥಳಂತರಿಸುವ ಸಂಬಂಧ ಚರ್ಚೆ ನಡೆದಿದೆ ಸದ್ಯ ಯಾವುದೆ ಪ್ರಸ್ತಾವನೆ ಸರ್ಕಾರದ ಮಂದಿಲ್ಲ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಪಶು ವೈದ್ಯರ ಕೊರತೆ ಸರಿಪಡಿಸುವ ನಿಟ್ಟಿನಲ್ಲಿ 400 ಪಶು ವೈದ್ಯರನ್ನು ನೇಮಕ ಮಾಡಲು
ಕೆ.ಪಿ.ಎಸ್ಸಿ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಗುತ್ತಿಗೆ ಆಧಾರದಲ್ಲಿ 400 ಪಶು ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ 700 ಅಟೆಂಡರ್ ಹಾಗೂ 250 ಮಂದಿ ನಿರೀಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಉಳಿದಂತೆ ಹಂತ ಹಂತವಾಗಿ ಪಶು ವೈದ್ಯರ ಸಮಸ್ಯೆ ಬಗೆಹರಿಸಲಾಗುವುದು ಇಡಿ ದೇಶದಲ್ಲಿ ಪಶುಪಾಲನ ಇಲಾಖೆಗೆ ಸಮಸ್ಯೆಯಾಗದ ರೀತಿಯಲ್ಲಿ ಔಷದಿ ಹಂಚಿಕೆ ಮಾಡುವ ಮೂಲಕ ಕರ್ನಾಟಕ ರಾಜ್ಯ ಮೊದಲನೆ ಸಾಲಿನಲ್ಲಿದೆ ಸದ್ಯ ಸ್ಟಡ್ ಫಾರಂ ನಲ್ಲಿ ಯಾವುದೆ ಕಾಂಕ್ರೀಟ್ ಆಧಾರಿತ ಅಭಿವೃದ್ದಿ ಕಾರ್ಯ ಮಾಡಲಾಗುವುದಿಲ್ಲ ಪಶು ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಶು ಸಖಿಯರನ್ನು ಕೇಂದ್ರ ಸರ್ಕಾರದ ಯೋಜನೆಯಡಿ ನೇಮಿಸಿಕೊಳ್ಳಲಾಗಿದೆ ಈ ಹಿಂದೆ ಕೇಂದ್ರ ಸಚಿವ ಭುವನೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಶು ಸಖಿಯರ ವೇತನವನ್ನು ಕನಿಷ್ಠ ಏಳು ಸಾವಿರಕ್ಕೆ ಏರಿಸುವಂತೆ ಮನವಿ ಮಾಡಲಾಗಿದೆ ರಾಜ್ಯ ಸರ್ಕಾರದಿಂದಲು ಅನುದಾನ ನೀಡುವ ಕುರಿತು ಮುಖ್ಯ ಮಂತ್ರಿಗಳ ಜೋತೆಗೆ ಚರ್ಚಿಸಲಾಗುವುದು ಎಂದರು ಬಳಿಕ ಶಾಸಕ ಡಾ.ರಂಗನಾಥ್ ಮಾತನಾಡಿ ಬ್ರಿಟಿಷರ ಆಳ್ವಿಕೆಯ ಕಾಲದಿಂದ ಐತಿಹಾಸಿಕವಾಗಿ 421ಎಕರೆ ಪ್ರದೇಶದಲ್ಲಿ ಉಳಿದಿರುವ ಸ್ಟಡ್ ಫಾರಂ ಅನ್ನು ಉಳಿಸಿಕೊಳ್ಳುವುದು ಪ್ರಥಮ ಆದ್ಯತೆಯಾಗಿದೆ ಐತಿಹಾಸಿಕವಾಗಿ ಹಿನ್ನೆಲೆ ಇರುವ ಇತಿಹಾಸ ಉಳಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮಾನ್ಯ ಮಂತ್ರಿಗಳಿಗೆ ಮನವಿ ಮಾಡಲಾಗಿದೆ ಐತಿಹಾಸಿಕ ಸ್ಥಳವನ್ನು ಉಳಿಸಿಕೊಳ್ಳುವುದರ ಜೋತೆಗೆ ಅಭಿವೃದ್ದಿ ನಿಟ್ಟಿನಲ್ಲಿ ಆದಾಯ ಬರುವ ರೀತಿಯಲ್ಲಿ ಚಿಂತಿಸಲಾಗುತ್ತಿದೆ ಎಂದರು ಈ ವೇಳೆ ಪಶುಸಂಗೊಪನ ಇಲಾಖೆಯ ಆಯುಕ್ತರು ಶ್ರೀ ರೂಪ,ನಿರ್ದೇಶಕ ಡಾ,ಪಿ ಶ್ರೀನಿವಾಸ್,ಅಪಾರ ನಿರ್ದೇಶಕ ಡಾ,ಪ್ರಸಾದ್ ಮೂರ್ತಿ,ಜಂಟಿ ನಿರ್ದೇಶಕ ಡಾ,ಸಿದ್ದಗಂಗಯ್ಯ,ಪಶು ನಿರ್ದೇಶಕ ಡಾ,ಶಿವಪ್ರಸಾದ್, ತಾಲ್ಲೂಕು ಪಶು ಮುಖ್ಯ ವೈದ್ಯಧಿಕಾರಿ ಉಮೇಶ್,ಪಶು ವೈದ್ಯಧಿಕಾರಿ ಡಾ.ನವಿನ್ ಹಾಗೂ ಪುರಸಭೆ ಸದಸ್ಯರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು @publicnewskunigal