ಬಿಜೆಪಿ ಮಂಡಲದ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹೋರ ರೋಗಿಗಳಿಗೆ ಹಾಲು ಹಣ್ಣು ಬ್ರೇಡ್ ವಿತರಿಸುವ ಮೂಲಕ ಪ್ರಧಾನಿ ನರೇಂದ್ರಮೋದಿ ರವರ 75 ವರ್ಷದ ಹುಟ್ಟುಹಬ್ಬ ಆಚರಣೆ!
ಕುಣಿಗಲ್ ;-ವಿಶ್ವ ನಾಯಕ ಎಂದು ಹೆಸರು ಮಾಡಿರುವ ದೇಶದ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿಯವರು ಇನ್ನೂ 15 ವರ್ಷಗಳು ದೇಶದ ಪ್ರಧಾನಮಂತ್ರಿ ಹುದ್ದೆಯಲ್ಲಿ ಮುಂದುವರೆದು ದೇಶ ಸೇವೆ ಮಾಡುವ ಅವಕಾಶವನ್ನು ಆ ಭಗವಂತ ಕಲ್ಪಿಸಲಿ ಎಂದು ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ಭಗವಂತನಲ್ಲಿ ಪ್ರಾರ್ಥನೆ ಮಾಡಿದರು. ಅವರು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ 75 ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಶುಭ ಹಾರೈಸಿ ರಕ್ತದಾನ ಶಿಬಿರ ಕೈಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ನಮ್ಮ ರಾಷ್ಟ್ರದ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿ ಅವರು ಇನ್ನೂ ನಮ್ಮ ರಾಷ್ಟ್ರದಲ್ಲಿ ಹತ್ತು ಹದಿನೈದು ವರ್ಷಗಳು ಪ್ರಧಾನಿಯಾಗಿ ಮುಂದುವರೆದು ರಾಷ್ಟ್ರವನ್ನು ಅಭಿವೃದ್ಧಿ ಪಥದ ಕೊಂಡೊಯ್ದು ಈಗಾಗಲೇ ಭಾರತ ದೇಶ ಪ್ರಪಂಚದಲ್ಲಿ ಮೂರನೇ ಸ್ಥಾನದಲ್ಲಿದ್ದು ಮುಂದುವರೆದ ದೇಶ ಎಂದು ಹೆಸರು ಇರುವುದನ್ನು ನಂಬರ್ ಒನ್ ರಾಷ್ಟ್ರವನ್ನು ಮಾಡುವ ಶಕ್ತಿಯನ್ನು ದೇವರು ಅವರಿಗೆ ಕರುಣಿಸಲಿ ಎಂದ ಅವರು ಎಲ್ಲಾ ಸರ್ಕಾರಿ ಮೂಲಭೂತ ಸೌಕರ್ಯಗಳು ದೇಶದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲಿ ಎಂದರು. ಕಾಂಗ್ರೆಸ್ನ ರಾಹುಲ್ ಗಾಂಧಿ ನಮ್ಮ ದೇಶದ ಗೌರವವನ್ನು ಬೇರೆ ದೇಶಗಳಲ್ಲಿ ಕಳೆಯುತ್ತಿದ್ದಾರೆ ಕಾಂಗ್ರೆಸ್ ಪಕ್ಷದವರಿಗೆ ನಾಚಿಕೆಯಾಗಬೇಕು ಎಂದ ಅವರು ವಿಶ್ವನಾಯಕ ಎಂದು ಹೆಸರು ಮಾಡಿರುವ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಗವಂತ ಹೆಚ್ಚು ಶಕ್ತಿ ನೀಡಿ ರಾಷ್ಟ್ರದ 140 ಕೋಟಿ ಜನರ ಸೇವೆ ಮಾಡಲು ಅವಕಾಶ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ ಅವರು ಬೇರೆ ರಾಷ್ಟ್ರದವರು ಭಾರತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಂತ ಪ್ರಧಾನ ಮಂತ್ರಿಗಳು ನಮ್ಮ ದೇಶಕ್ಕೆ ಬೇಕಾಗಿದೆ ಎಂದು ಹೇಳುತ್ತಿರುವುದನ್ನು ನೋಡಿದರೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿ ಎಷ್ಟಿದೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ದಿನೇಶ್ ಮಾತನಾಡಿ ದೇಶದಲ್ಲಿ ನರೇಂದ್ರ ಮೋದಿ ಅವರು ಹೆಚ್ಚಿನ ದಿನಗಳ ಕಾಲ ಪ್ರಧಾನಿ ಹುದ್ದೆಯನ್ನು ಅಲಂಕರಿಸಿ ದೇಶ ಸೇವೆ ಮಾಡಿದ ನಂಬರ್ ಒನ್ ಪ್ರಧಾನಿ ಎನಿಸಿಕೊಂಡಿದ್ದಾರೆ ಇವರು ಇನ್ನು ಹೆಚ್ಚಿನ ವರ್ಷಗಳು ದೇಶದ ಪ್ರಧಾನಿಯಾಗಿ ಮುಂದುವರೆದು ದೇಶವನ್ನು ಉತ್ತುಂಗ ಶಿಖರಕ್ಕೆ ಏರಿಸಿ , ಸನಾತನ ಧರ್ಮದ ಹಿಂದೂ ಧರ್ಮವನ್ನು ಕಾಪಾಡಿ ರಾಷ್ಟ್ರದ ಬಡವರ, ದೀನ ದಲಿತರ, ಹಿಂದುಳಿದವರ ಸೇವೆ ಮಾಡುವ ಅವಕಾಶವನ್ನು ಆ ದೇವರು ಕರುಣಿಸಲಿ ಎಂದರು.ರಾಷ್ಟ್ರದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅನೇಕ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು @publicnewskunigal