ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ವಿಶ್ವಕರ್ಮ ಜಯಂತಿ ಆಚರಣೆ!
ಕುಣಿಗಲ್ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಬುಧವಾರ ಆಚರಿಸಲಾಯಿತು ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ತಹಸೀಲ್ದಾರ್ ಯು.ರಶ್ಮಿ ರಾಜ್ಯ ಸರ್ಕಾರ ರಾಷ್ಟ್ರೀಯ ಹಬ್ಬಗಳ ಹೊರತುಪಡಿಸಿ 36 ಮಹಾತ್ಮರ ಜಯಂತಿಗಳನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದು ಮನುಷ್ಯನಾದ ನಾವುಗಳು ಯಾವುದೇ ಜಾತಿ ಧರ್ಮ ತಾರತಮ್ಯ ಮಾಡದೆ ನೆಮ್ಮದಿ ಕಾಣಬೇಕಾಗಿದೆ ಇಂದಿನ ಪುರಾತನ ದೇವಾಲಯಗಳು ನಿರ್ಮಾಣದಲ್ಲಿ ವಿಜ್ಞಾನ

ಪರಂಪರೆಯನ್ನು ಶಾಸ್ತ್ರೋತ್ತವಾಗಿ ಅಳವಡಿಸಿ ಆ ಜಾಗದಲ್ಲಿ ಒಂದು ಶಕ್ತಿ ಅಡಕವಾಗಿರುತ್ತದೆ ಚಿಕ್ಕ ಮಕ್ಕಳು ಅರ್ಥ ಮಾಡಿ ಸುವಂತಹ ಶಕ್ತಿ ಜ್ಞಾನ ಮನುಷ್ಯರಿಂದ ಆಗಬೇಕಾಗಿದೆ ದೇವರ ಸನ್ನಿಧಿಯಲ್ಲಿ ಎಂಥಾ ಸಂದರ್ಭದಲ್ಲಿಯೂ ಪ್ರಾರ್ಥಿಸಿದಾಗ ತಮ್ಮ ಕಷ್ಟಕಾರ್ಪಣ್ಯಗಳು ದೂರವಾಗಿ ನೆಮ್ಮದಿ ಪ್ರಾಪ್ತವಾಗುತ್ತದೆ ಇಂತಹ ಸಮಾರಂಭಗಳಿಗೆ ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ಭಾಗವಹಿಸುವ ಮೂಲಕ ಶಕ್ತಿ ತುಂಬಬೇಕು ಈ ತಾಲೂಕಿನಲ್ಲಿ ಹಳೆ ಊರು ಸೇರಿದಂತೆ ಉತ್ತಮ ದೇವಾಲಯಗಳು ನಿರ್ಮಾಣವಾಗಿವೆ ತಮ್ಮ ಆಡಳಿತದಲ್ಲಿ ಪ್ರಾಮಾಣಿಕವಾಗಿ ಬಡವರ ಕೆಲಸ ಕಾರ್ಯಗಳನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮೋಹನ್ ಕುಮಾರ್ ಪಿ . ಮುಖಂಡರಾದ ಕೋಟೆ ಕುಮಾರ್. ಜ್ಞಾನೇಂದ್ರ ಚಾರ್. ಮೂರ್ತಪ್ಪ ಚಾರ್. ಸುರೇಶ್. ಪ್ರಕಾಶ್ ಕೋಟೆ. ಅರುಣ್ ಕುಮಾರ್. ಶಾಮಾಚಾರ್. ಪದ್ಮ ನಾಬಾ ಜಾರ್. ಕುಮಾರ್. ಶಿವಕುಮಾರ್. ಮಂಜುನಾಥ್. ಪ್ರಸನ್ನ ಕುಮಾರ್. ರಘು. ಸೇರಿದಂತೆ ಅನೇಕರು ಭಾಗವಹಿಸಿದ್ದರು @publicnewskunigal