ಕಿತ್ತಿನಾಮಂಗಲ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಮಮತಾ ಲೋಕೇಶ್ ಅವಿರೋಧ ಆಯ್ಕೆ!
ಕುಣಿಗಲ್ ತಾಲ್ಲೂಕಿ ಕಸಬಾ ಹೋಬಳಿ ವ್ಯಾಪ್ತಿಯ ಕಿತ್ತಿನಾಮಂಗಲ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ರಂಗಸ್ವಾಮಿ ರಾಜೀನಾಮೆ ನೀಡಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಉಳಿದ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಗಂಟಗಾನಹಳ್ಳಿ ಗ್ರಾಮದ ಮಮತಾ ಲೋಕೇಶ್ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಚುನಾವಣಾ ಅಧಿಕಾರಿಯಾಗಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ವಸಂತ್ ಕಾರ್ಯನಿರ್ವಹಿಸಿದರು ಈ ವೇಳೆ ಉಪಾಧ್ಯಕ್ಷರಾದ ಶ್ವೇತ ರವಿಶಂಕರ್,ಸದಸ್ಯರಾದ ರಂಗಸ್ವಾಮಿ,ಶಿವಲಿಂಗಯ್ಯ,ಶಶಿಕಲಾ,ವೆಂಕಟೇಶ್,ಭಾಗ್ಯಮ್ಮ,ಅಬ್ದುಲ್ ಖಾದರ್,ಇಸ್ಮಾಯಿಲ್,ಈ ವೇಳೆ ಪಿಡಿಒ ಸರಿತಾ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು,ಮುಖಂಡರಾದ ಕುಲುಮೇಪಾಳ್ಯ ರಂಗಸ್ವಾಮಿ ಗುಜ್ಜೆನಹಳ್ಳಿ ಲೋಕೇಶ್, ಶ್ರೀನಿವಾಸ್ ಸೆರಿದಂತೆ ಹಲವರು ಉಪಸ್ಥಿತರಿದ್ದರು