ಹುಲಿಕಟ್ಟೆ ಗ್ರಾಮದಲ್ಲಿ ಸ್ವಚ್ಚತೆ ಮರೀಚಿಕೆ ರೋಗ ಭೀತಿಯಲ್ಲಿ ಗ್ರಾಮಸ್ಥರು ಕಳೆಯುವಂತಾಗಿದೆ ದೂರು ಕೊಟ್ಟರು ಸಹ ಕ್ರಮ ಕೈಗೊಳ್ಳದ ಅಧಿಕಾರಿಗಳು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹುಲಿಕಟ್ಟೆ ಗ್ರಾಮದಲ್ಲಿ ಸ್ವಚ್ಚತೆ ಮರಿಚಿಕೆಯಾಗಿದ್ದು ಚರಂಡಿಯಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳು ಉತ್ಪತಿಯಾಗಿ ಗ್ರಾಮಸ್ಥರು ರೋಗದ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ ಈ ಬಗ್ಗೆ ಚೌಡನಕುಪ್ಪೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಾರಾಯಣ್ ರವರಿಗೆ ದೂರು ನೀಡಿದರು ಇದುವರೆಗೂ ಸಮಸ್ಯೆ ಬಗೆಹರಿಸಿಲ್ಲ ಬದಲಾಗಿ ಯಾರಿಗೆ ಬೇಕಾದರು ದೂರು ನೀಡಿ ಎಂಬ ಹಾರಿಕೆ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು ಗ್ರಾಮದ ರಸ್ತೆಗಳಲ್ಲಿ ಗಿಡಗಳು ಬೆಳೆದು ನಿಂತಿದ್ದು ಚರಂಡಿ ಭರ್ತಿಯಾಗಿದೆ ಗ್ರಾಮ ಠಾಣದಲ್ಲಿ ತಿಪ್ಪೆ ಹಾಕಲಾಗಿದ್ದು

ಗ್ರಾಮದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ ಗ್ರಾಮದ ರಸ್ತೆಯಲ್ಲಿ ವಯೋವೃದ್ಧರು ಮಹಿಳೆಯರು ಮಕ್ಕಳು ಒಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಬೀದಿ ದೀಪ ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಮನೆಗಳತ್ತ ವಿಷ ಜಂತುಗಳು ಬರುತ್ತಿದ್ದು ಕಳೆದ ಬಾರಿ ಚರಂಡಿಯಲ್ಲಿನ ಮಣ್ಣು ತೆರವು ಮಾಡಿ ರಸ್ತೆಯಲ್ಲಿ ಹಾಕಲಾಗಿತ್ತು ಸರಿಯಾದ ರೀತಿಯಲ್ಲಿ ಅದನ್ನು ತೆರವುಗೊಳಿಸಿಲ್ಲ ಗ್ರಾಮದ ರಸ್ತೆಗಳಲ್ಲಿ ಒಡಾಡದ ಸ್ಥಿತಿ ನಿರ್ಮಾಣವಾಗಿದೆ ಚರಂಡಿಯಲ್ಲಿ ಸರಾಗವಾಗಿ ನೀರು ಹರಿದು ಹೊಗುತ್ತಿಲ್ಲ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದ ಗ್ರಾಮದಲ್ಲಿಗ ಡೆಂಗ್ಯೂ ಮಲೇರಿಯಾ ಭೀತಿಯಲ್ಲಿ ಸಾರ್ವಜನಿಕರು ಕಾಲ ಕಳೆಯುವಂತಾಗಿದೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಾರಣದಿಂದ ಗ್ರಾಮದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ ಗ್ರಾಮ ಪಂಚಾಯ್ತಿ ಪಿಡಿಒಗೆ ದೂರು ನೀಡಿದರು ಇದುವರೆಗು ಸಮಸ್ಯೆ ಬಗೆಹರಿಸಿಲ್ಲ ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ @publicnewskunigal