ಕಿತ್ತಿನಾಮಂಗಲ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಗಂಟಗಾನಹಳ್ಳಿ ಗ್ರಾಮದ ಮಮತಾ ಲೋಕೇಶ್ ಅವಿರೋಧ ಆಯ್ಕೆ!
ಕುಣಿಗಲ್ ತಾಲ್ಲೂಕಿ ಕಿತ್ತಿನಾಮಂಗಲ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ರಂಗಸ್ವಾಮಿ ರಾಜೀನಾಮೆ ನೀಡಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಉಳಿದ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಗಂಟಗಾನಹಳ್ಳಿ ಗ್ರಾಮದ ಮಮತಾ ಲೋಕೇಶ್ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಚುನಾವಣಾ ಅಧಿಕಾರಿಯಾಗಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ವಸಂತ್ ಕಾರ್ಯನಿರ್ವಹಿಸಿದರು ಈ ವೇಳೆ ಉಪಾಧ್ಯಕ್ಷರಾದ ಶ್ವೇತ ರವಿಶಂಕರ್,ಸದಸ್ಯರಾದ ಶಶಿಕಲಾ ಬಾಬು,ರಂಗಸ್ವಾಮಿ, ಶಿವಲಿಂಗಮ್ಮ, ವೆಂಕಟೇಶ್,ಭಾಗ್ಯಮ್ಮ,ಅಬ್ದುಲ್ ಖಾದರ್, ಇಸ್ಮಾಯಿಲ್,ಈ ವೇಳೆ ಪಿಡಿಒ ಸರಿತಾ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು,ಮುಖಂಡರಾದ ಕುಲುಮೇಪಾಳ್ಯ ರಂಗಸ್ವಾಮಿ,ಕಿತ್ತಿನಾಮಂಗಲ ಶ್ರೀನಿವಾಸ್,ಮತ್ತಿಕೆರೆ ಮದನ್,ಗುಜ್ಜೆನಹಳ್ಳಿ ಗ್ರಾಮದ ಲೋಕೇಶ್, ಶಶಿಕುಮಾರ್,ಸೆರಿದಂತೆ ಹಲವರು ಉಪಸ್ಥಿತರಿದ್ದರು @publicnewskunigal