ಪಟ್ಟಣದ ಆಡಳಿತ ಸೌಧದಲ್ಲಿ ಲಿಫ್ಟ್ ಕಿರಿ ಕಿರಿಯ ಕಾರಣದಿಂದ ಸಾರ್ವಜನಿಕರು ಹೈರಾಣಾಗಿದ್ದು ಕಂದಾಯ ಇಲಾಖೆಯ ಅಧಿಕಾರಿಗಳ ನಡೆಗೆ ಬೆಸರ ವ್ಯಕ್ತಪಡಿಸಿದ್ದಾರೆ!
ಕುಣಿಗಲ್ ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿರುವ ಲಿಫ್ಟ್ ಆಗಾಗ ಕೆಟ್ಟುಹೋಗಿ ವಾರ ಕಳೆದರು ಸಹ ದುರಸ್ಥಿ ಕಾಣದಂತಾಗಿದೆ ಪಟ್ಟಣದ ಖಾಸಗಿ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿದ್ದ ಉಪ ನೊಂದಣಾಧಿಕಾರಿ ಕಚೇರಿಯನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಆದೇಶದ ಹಿನ್ನೆಲೆಯಲ್ಲಿ ಹಾಗು ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಸೇವೆ ಒಂದೆ ಕಡೆಯಲ್ಲಿ ಸಿಗುವಂತಾಗಲಿ ಎಂಬ ಉದ್ದೇಶದಿಂದ ಪಟ್ಟಣದ ಆಡಳಿತ ಸೌಧದಲ್ಲಿರುವ ಎರಡನೆ ಮಹಡಿಗೆ ಉಪ ನೊಂದಣಾಧಿಕಾರಿ ಕಚೇರಿಯನ್ನ ಕಳೆದ ಎರಡು ತಿಂಗಳ ಹಿಂದಷ್ಟೆ ಸ್ಥಳಂತರಿಸಲಾಗಿದೆ ಆದರೆ ಉಪ ನೊಂದಣಾಧಿಕಾರಿ

ಕಚೇರಿ ಪ್ರಾರಂಭವಾದ ಬಳಿಕ ಸಾರ್ವಜನಿಕರು ನಿತ್ಯ ಕಿರಿ ಕಿರಿ ಅನುಭವಿಸುವಂತಾಗಿದೆ ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗೆ ಬರುವ ವಯೋವೃದ್ದರು ಅಂಗವಿಕಲರಿಗೆ ಎರಡನೆಯ ಮಹಡಿ ಅಥವಾ ಮೂರನೆ ಮಹಡಿಯಲ್ಲಿರುವ ಅಧಿಕಾರಿಗಳ ಬೇಟಿಗೆ ಬಂದು ಮೆಟ್ಟಿಲು ಹತ್ತಲು ಆಗದೆ ಲಿಫ್ಟ್ ಬಳಸುತ್ತಿದ್ದರು ಆದರೆ ಲಿಫ್ಟ್ ಕೆಟ್ಟಿರುವ ಕಾರಣ ಮೆಟ್ಟಿಲು ಹತ್ತಲಾಗದೆ ಕುಟುಂಬಸ್ಥರ ಅಥವಾ ಸಾರ್ವಜನಿಕರ ಆಶ್ರಯಸಿ ಮೇಲಿನ ಹಂತಸ್ತಿಗೆ ಹೊಗುವಂತಾಗಿದೆ ಹೆಚ್ಚಿಗೆ ವಯೊವೃದ್ದ ವ್ಯಕ್ತಿಗಳು ಉಪ ನೋಂದಣಾಧಿಕಾರಿಗಳ ಕಚೇರಿಗೆ ನೋಂದಣಿ ಅಥವಾ ಇತರೆ ಕೆಲಸ ಕಾರ್ಯಗಳಿಗೆ ಬರುತ್ತಾರೆ ಆದರೆ ಲಿಫ್ಟ್ ಕಿರಿ ಕಿರಿಯ ಕಾರಣದಿಂದ ನಾಗರೀಕರು ಹೈರಾಣಾಗಿ ಹೊಗಿದ್ದಾರೆ ಕಳೆದ ಎರಡು ತಿಂಗಳಲ್ಲಿ ಹಲವು ಭಾರಿ ಲಿಫ್ಟ್ ಕೈಕೊಟ್ಟಿದೆ ಆದ್ದರಿಂದ ಉಪ ನೋಂದಣಾಧಿಕಾರಿ ಕಚೇರಿಯನ್ನ ಕೆಳಗಿನ ಅಂತಸ್ತಿಗೆ ಸ್ಥಳಾಂತರಿಸಿ ಇಲ್ಲದಿದ್ದರೆ ವಯೋ ವೃದ್ದರು ಹಾಗು ಅಂಗವಿಕಲರ ಒಡಾಡಲು ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ @publicnewskunigal