ಎತ್ತಿನ ಗಾಡಿಯಲ್ಲಿ ಬಂದ ಶಾಸಕರಿಗೆ ಅದ್ದೂರಿ ಸ್ವಾಗತ ದಲಿತ ಮಹಿಳೆಯ ಮನೆಯಲ್ಲಿ ಊಟ ಮಾಡಿ ನವರಾತ್ರಿ ಉಪವಾಸ ಅಂತ್ಯಗೊಳಿಸಿದ ಶಾಸಕ ಡಾ.ರಂಗನಾಥ್!
ಕುಣಿಗಲ್ ತಾಲ್ಲೂಕಿನ ಯಡಿಯೂರು ಹೋಬಳಿ ವ್ಯಾಪ್ತಿಯ ಒಗರಗೆರೆ ಗ್ರಾಮದ ದಲಿತ ಮಹಿಳೆ ಜಯಮ್ಮ ನವರ ಮನೆಯಲ್ಲಿ ಶಾಸಕ ಡಾ.ರಂಗನಾಥ್ ಊಟ ಮಾಡುವ ಮೂಲಕ ನವರಾತ್ರಿಯ ಉಪವಾಸ ಅಂತ್ಯಗೊಳಿಸಿದರು ಕಳೆದ ಒಂಬ್ಬತ್ತು ದಿನಗಳಿಂದ ನವರಾತ್ರಿ ಹಬ್ಬದ ಪ್ರಯುಕ್ತ ಉಪವಾಸ ಕೈಗೊಂಡಿದ್ದ ಶಾಸಕರು ವಿನೂತನ ರೀತಿಯಲ್ಲಿ ಉಪವಾಸ ಕೈಬಿಟ್ಟಿದ್ದಾರೆ ಒಗರಗೆರೆ ಗ್ರಾಮಕ್ಕೆ ಬಂದ ಶಾಸಕರನ್ನು ಸಿಂಗಾರಗೊಂಡಿದ್ದ ಎತ್ತಿನ ಗಾಡಿಯಲ್ಲಿ ಮೆರವಣಿಗೆಯ ಮೂಲಕ ಜಯಮ್ಮ ರವರ ಮನೆಗೆ ಬಂದ ಶಾಸಕರಿಗೆ ಗ್ರಾಮದ ಮಹಿಳೆಯರು ಆರತಿ ಬೆಳಗಿ ಸೊಬಾನೆ ಪದವನ್ನಾಡಿ
ಸ್ವಾಗತಿಸಿದರು ಹೆಂಚಿನ ಮೆನೆಯಲ್ಲಿ ವಾಸವಿರುವ ಜಯಮ್ಮ ಕಳೆದೊಂದು ವಾರದ ಹಿಂದೆ ಶಾಸಕರನ್ನು ಊಟಕ್ಕೆ ಕರೆದಿದ್ದರಂತೆ ಆಗಾಗಿ ನವರಾತ್ರಿಯಲ್ಲಿ ಉಪವಾಸ ವ್ರತ ಕೈಗೊಂಡಿದ್ದ ಶಾಸಕರು ದುರ್ಗಷ್ಠಾಮಿಯಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಬರಿಗಾಲಲ್ಲಿ ಬೆಟ್ಟ ಹತ್ತುವ ಮೂಲಕ ದೇವಿಯ ದರ್ಷನ ಪಡೆದು ಬಂದ ನಂತರ ಬುಧವಾರ ಉಪವಾಸ ಅಂತ್ಯಗೊಳಿಸಲು ದಲಿತ ಮಹಿಳೆಯ ಮನೆಯಲ್ಲಿ ಉಪ್ಪುಸಾರು ಮುದ್ದೆ ಊಟ ಸವಿಯುವ ಮೂಲಕ ನವರಾತ್ರಿಯ ಉಪವಾಸ ಅಂತ್ಯಗೊಳಿಸಿದರು ಬಳಿಕ ಮಾದ್ಯಮವದರೊಂದಿಗೆ ಮಾತನಾಡಿದ ಶಾಸಕರು ಹಿಂದಿನಿಂದಲು ನವರಾತ್ರಿಯ ವೇಳೆ ತಾಯಂದಿರು ಉಪವಾಸ ಮಾಡುವುದು ವಾಡಿಕೆ ಅದು ಆರೋಗ್ಯಕ್ಕೂ ಒಳ್ಳೆಯದು ಆದ್ದರಿಂದ ಈ ಭಾರಿ ಹಣ್ಣು ಪಾನಿಯ ಹೊರತು ಪಡಿಸಿ ಆಹಾರ ಸೇವಿಸದೆ ಒಂಭತ್ತು ದಿನಗಳ ಉಪವಾಸ ಮಾಡುವ ಮೂಲಕ ತಾಲ್ಲೂಕಿನ ಅಭಿವೃದ್ದಿ,ಮಳೆ,ಬೆಳೆ ಹಾಗಿ ಸಮೃದ್ಧಿ ಆಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೆನೆ ಎಂದರು ಇದೆ ವೇಳೆ ಬಡ ಮಹಿಳೆ ಜಯಮ್ಮ ನವರಿಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ ಶಾಸಕರು ಬಳಿಕ ಮಾತನಾಡಿ ಮಾಜಿ ಮುುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಕುಣಿಗಲ್ ತಾಲ್ಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೆರಿಸುವ ಮೂಲಕ ಡಿ.ಕೆ.ಶಿ ಬ್ರದರ್ಸ್ ಲೂಟಿ ಒಡೆಯಲು ಹೊರಟಿದ್ದಾರೆ ಇದಕ್ಕೆ ಕುಣಿಗಲ್ ಶಾಸಕರು ಸಾತ್ ನೀಡುತ್ತಿದ್ದರೆ ಎಂಬ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಕುಣಿಗಲ್ ಸೇರ್ಪಡೆ ಮಾಡಿದ್ದು ಲೂಟಿ ಹೊಡೆಯಲಿಕ್ಕ ಎಂದು ಅವರು ಸ್ಪಷ್ಟಪಡಿಸಬೇಕು ಈ ರೀತಿಯ ಹೇಳಿಕೆ ಈ ಕೂಡಲೆ ವಾಪಸ್ ಪಡೆಯಬೇಕು ತಾಲ್ಲೂಕಿನ ಜನಸಾಮಾನ್ಯರ ಅಭಿಪ್ರಾಯ ಪಡೆಯದೆ ಯಾವುದೆ ಕಾರಣಕ್ಕೂ ತಾಲ್ಲೂಕನ್ನು ಬೆರೆ ಜಿಲ್ಲೆಗೆ ಸೆರ್ಪಡೆ ಮಾಡಲಾಗದು ಈ ಬಗ್ಗೆ ಕೆಲವರ ಅಭಿಪ್ರಾಯ ಬಿಟ್ಟರೆ ನಾವು ಯಾವುದೆ ಚರ್ಚೆ ನಡೆಸಿಲ್ಲ ಎಂದರು ಈ ವೇಳೆ ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ್,ಮುಖಂಡರಾದ ಪಾಪಣ್ಣ ಸೆರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ಧರು @publicnewskunigal