ಮಾರ್ಕೋನಹಳ್ಳಿ ಜಲಾಶಯದ ಬಳಿ ಶಿಂಷಾನದಿಯಲ್ಲಿ ಮತ್ತೆರಡು ಮೃತದೇಹ ಪತ್ತೆ ಮೃತರ ಕುಟುಂಬಕ್ಕೆ ತಲಾ ಐವತ್ತು ಸಾವಿರ ಪರಿಹಾರ ಘೋಷಿಸಿದ ಶಾಸಕ ಡಾ.ರಂಗನಾಥ್!
ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದ ಹಿನ್ನಿರಿನಲ್ಲಿ ಮಂಗಳವಾರ ನೀರಿನಲ್ಲಿ ನಾಪತ್ತೆಯಾಗಿದ್ದ ಆರು ಮಂದಿಯಲ್ಲಿ ಬುಧವಾರ ಕೂಡ ಇಬ್ಬರ ಮೃತ ದೇಹ ಪತ್ತೆಯಾಗಿದ್ದು ಮೃತರನ್ನು ತುಮಕೂರಿನ ಬಿ.ಜಿ ಪಾಳ್ಯದ ವಾಸಿ ಶಾಬಾನ (44) ಹಾಗೂ ಮಗಳು ಮಿಶ್ರಾ (4) ಗುರುತಿಸಲಾಗಿದೆ ಇದುವರೆಗೆ ನಾಲ್ವರ ಮೃತದೇಹ ಪತ್ತೆಯಾಗಿದ್ದು ಉಳಿದ ಇಬ್ಬರಿಗಾಗಿಅಗ್ನಿಶಾಮಕ ಧಳ ಹಾಗೂ ಪೊಲೀಸರಿಂದ ಶೋಧಕಾರ್ಯ ಮುಂದುವರಿದಿದೆ ಘಟನೆ ಸ್ಥಳಕ್ಕೆ ಶಾಸಕ ಡಾ.ರಂಗನಾಥ್ ಬೇಟಿ ನೀಡಿ ರಕ್ಷಣಾ ಕಾರ್ಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಮೃತರ ಕುಟುಂಬಕ್ಕೆ ಶಾಸಕರು ವೈಯಕ್ತಿಕವಾಗಿ ತಲಾ ಐವತ್ತು ಸಾವಿರ ಪರಿಹಾರ ಘೋಷಿಸಿದ್ದು ನಾಗಮಂಗಲ ಶಾಸಕರೊಂದಿಗೆ ಚರ್ಚಿಸಿ ಸರ್ಕಾರದಿಂದ ಪರಿಹಾರದ ಕೊಡಿಸುವ ಬಗ್ಗೆ ಕ್ರಮ
ವಹಿಸಲಾಗುವುದು ಎಂದು ತಿಳಿಸಿದ್ದಾರೆ ಬಳಿಕ ತಾಲ್ಲೂಕಿನ ಮಾಗಡಿಪಾಳ್ಯ ಗ್ರಾಮಕ್ಕೆ ತೆರಳಿ ಮೃತ ಶಾದಿಯಾ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಶಾಸಕರು ಸ್ಥಳದಲ್ಲೆ ಒಂದು ಲಕ್ಷ ರೂಪಾಯಿ ಪರಿಹಾರ ವಿತರಿಸಿದ್ದಾರೆ ಇನ್ನೂ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಶಾಸಕರು ಘಟನೆ ನಡೆದ ಸ್ಥಳದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ ನಿಯಮ ಮೀರಿ ಬೇಟಿ ನೀಡಿದವರಿಗೆ ದಂಡ ವಿಧಿಸುವಂತೆ ಹೇಮಾವತಿ ನಾಲ ವಿಭಾಗದ ಅಧಿಕಾರಿ ರುದ್ರೇಶ್ ಗೆ ತಿಳಿಸಿದ್ದಾರೆ ಜೋತೆಗೆ ಆರು ಮಂದಿ ನೀರುಪಾಲದ ಸ್ಥಳದಲ್ಲಿ ಪದೆ ಪದೆ ಈ ರೀತಿಯ ಘಟನೆಗಳು ಸಂಭವಿಸುತ್ತಿರುವ ಕಾರಣ ಸಾರ್ವಜನಿಕರ ಹಿತದೃಷ್ಟಿಯಿಂದ ಶಾಸ್ವತವಾಗಿ ಕಬ್ಬಿಣದ ಬೇಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು ಈ ವೇಳೆ ಹೇಮಾವತಿ ನಾಲ ವಿಭಾಗದ ಅಭಿಯಂತರ ಶ್ರೀನಿವಾಸ್ ಸಹಾಯಕ ಅಭಿಯಂತರ ರುದ್ರೇಶ್ ಹಾಗೂ ಅಮೃತೂರು ಪಿ,ಎಸ್,ಐ ಶಮಂತ್‌ಗೌಡ ಉಪಸ್ಥಿತರಿದ್ದರು @publicnewskunigal