ಶ್ರೀ ಮೋಕ್ಷ ಪ್ರಕರಣ ಅರವಿಂದ್ ಅಂತರಾಷ್ಟ್ರೀಯ ವಸತಿ ಶಾಲೆಯ ಶಿಕ್ಷಕರ ವಿರುದ್ದ ದಾಖಲಾಯ್ತು ಪ್ರಕರಣ!
ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿರುವ ಅರವಿಂದ್ ಅಂತರಾಷ್ಟ್ರೀಯ ವಸತಿ ಶಾಲೆಯ ಶಿಕ್ಷಕರ ವಿರುದ್ದ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅಕ್ಟೋಬರ್ 13 ರಂದು ಅರವಿಂದ್ ವಸತಿ ಶಾಲೆಯಲ್ಲಿ ಹತ್ತನೆ ತರಗತಿ ಒದುತ್ತಿದ್ದ ಶ್ರೀ ಮೋಕ್ಷ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾಳೆ ಎಂದು ಪಟ್ಟಣದ ಎಂ.ಎಂ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಪೋಷಕರಿಗೆ ಮಾಹಿತಿ ನಿಡಲಾಗಿತ್ತು ಆಸ್ಪತ್ರೆಗೆ ಬಂದ ಪೋಷಕರು ಮಗಳ ಸ್ಥಿತಿ ಕಂಡು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಯುವತಿ ಗಂಭೀರ ಸ್ಥಿತಿಯಲ್ಲಿರುವುದು ಪೋಷಕರಿಗೆ ತಿಳಿದು ಬಂದಿದೆ ವೈದ್ಯರು
ಯುವತಿಗೆ ತೊಡೆಯ ಮೂಳೆಗಳು ಹಾಗೂ ಕಾಲು ಕೈಗಳ ಮೂಳೆ ದವಡೆ ಹಲ್ಲುಗಳು ಮುರಿದಿರುವುದಾಗಿ ತಿಳಿಸಿದ್ದು ಕಾಲು ಜಾರಿ ಬಿದ್ದರೆ ಈ ರೀತಿಯಾಗಿ ಮೂಳೆಗಳು ಮುರಿಯುವುದಿಲ್ಲ ಎಂಬ ವೈದ್ಯರ ಹೇಳಿಕೆ ಹಿನ್ನೆಲೆ ಅನುಮಾನಗೊಂಡ ಪೋಷಕರು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಬಳಿಕ ಶ್ರೀಮೋಕ್ಷ ಪೋಷಕರು ನೀಡಿದ ದೂರು ಹಾಗೂ ವಿದ್ಯಾರ್ಥಿನಿ ಹೇಳಿಕೆ ಆಧರಿಸಿ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅರವಿಂದ್ ಅಂತರಾಷ್ಟ್ರೀಯ ವಸತಿ ಶಾಲೆಯ ಶಿಕ್ಷಕರಾದ ಅಂತೋಣಿ ಶಿವಕುಮಾರಿ,ಹಾಗೂ ಇತರರ ವಿರುದ್ದ ಭಾರತೀಯ ನ್ಯಾಯ ಸಂಹಿತೆ (BNS) act 118 (1) 352,109, 3 (5) ಹಾಗೂ 75 JJ act ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ
ಘಟನೆಯ ವಿವರ;-ಕ್ಯಾಂಟಿನಿಂದ ಅನ್ನ ತೆಗೆದುಕೊಂಡು ಸ್ನೇಹಿತೆಯರೊಂದಿಗೆ ಊಟ ಮಾಡಿದಕ್ಕೆ ಯುವತಿಯ ಪೋಟೆ ತೆಗೆದು ಕ್ಷಮಾಪಣೆ ಪತ್ರ ಬರೆಸಿಕೊಂಡು ದೈಹಿಕ ಶಿಕ್ಷಕ ಆಂಟೋನಿ ವಿದ್ಯಾರ್ಥಿನಿಗೆ ತಳಿಸಿದ್ದನಂತೆ ಇದಾದ ಬಳಿಕ ಅಕ್ಟೋಬರ್ 13 ರಂದು ಬಳಗ್ಗೆ ಯುವತಿಯನ್ನು ಟೆರೆಸ್ ಮೇಲಿನಿಂದ ಯಾರೊ ಕರೆದಂತೆ ಕೇಳಿಸಿದೆ ಈ ವೇಳೆ ಶ್ರೀಮೋಕ್ಷ ಮೇಲೆ ತೆರಳಿದ್ದಾಳೆ ಈ ವೇಳೆ ಮೇಲಿನಿಂದ ಯಾರೊ ನನ್ನನ್ನು ತಳಿದರು ನಾನು ಹಾಗ ಕಿರುಚಿಕೊಂಡು ಕೆಳಗೆ ಬಿದ್ದೆ ಎಂದು ವಿದ್ಯಾರ್ಥಿನಿ ತಿಳಿಸಿದ್ದು ಹಾಗೂ ಘಟನೆ ನಡೆದಿರುವ ಸ್ಥಳದಲ್ಲಿ ಸಿ.ಸಿ ಕ್ಯಾಮರ ಇಲ್ಲದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಘಟನೆಯ ಸತ್ಯಾಂಶ ಪೊಲೀಸರ ತನಿಖೆಯಿಂದಷ್ಟೆ ಹೊರತರಬೇಕಾಗಿದೆ @publicnewskunigal