ವೈದ್ಯಕೀಯ ಸಿಬ್ಬಂದಿಗಳಿಬ್ಬರ ನಡುವೆ ವೈ ಮನಸ್ಸು ವಿಡಿಯೊ ಹರಿಬಿಟ್ಟು ಪೇಚಿಗೆ ಸಿಲುಕಿ ಕೆಲಸಕ್ಕೆ ಕುತ್ತು ತಂದುಕೊಂಡ ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ಸಿಬ್ಬಂದಿಗಳ ವಿರುದ್ದ ಕ್ರಮಕ್ಕೆ ಸಾರ್ವಜನಿಕರ ಆಗ್ರಹ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲ್ಯಾಬ್ ಟೆಕ್ನಿಷಿಯನ್ ಉಮದೇವಿ ಆಸ್ಪತ್ರೆಗೆ ಬರುವ ರೋಗಿಗಳ ಬಳಿ ಹಣಕ್ಕೆ ಬೇಡಿಕೆ ಇಡುತ್ತಿರುವ ಆರೋಪ ಕೇಳಿ ಬಂದಿದ್ದು ಅದಕ್ಕೆ ಪೂರಕವಾದಂತೆ ಉಮಾದೇವಿ ಮಾತನಾಡಿದ್ದು ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು ವೈದ್ಯ ಶಾಸಕರ ತವರು ಕ್ಷೇತ್ರದಲ್ಲಿ ಮಹಿಳಾ ಸಿಬ್ಬಂದಿ ಆಸ್ಪತ್ರೆಗೆ ಬರುವ ಬಡ ರೋಗಿಗಳ ಬಳಿ ಹಣ ಪೀಕುತ್ತಿದ್ದರು ಯಾವುದೆ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿತ್ತು ಆದರೆ ಇದೆ ವಿಷಯಕ್ಕೆ
ಶಾಸಕ ಡಾ.ರಂಗನಾಥ್ ಹಾಗೂ ಸಂಸದ ಡಾ.ಮಂಜುನಾಥ್ ಕೂಡ ಸ್ವತಃ ತಾಲ್ಲೂಕು ವೈದ್ಯಧಿಕಾರಿಗಳಿಗೆ ಕರೆಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದ ಅಸಲಿಯತ್ತೆ ಬೇರೆಯಾಗಿದೆ ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎಂಟು ವರ್ಷಗಳಿಂದ ಎ.ಎನ್.ಎಂ ಹಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಧನಲಕ್ಷ್ಮಿ ಹಾಗೂ ಕಳೆದ ಏಳು ವರ್ಷಗಳಿಂದ ಲ್ಯಾಬ್ ಟೆಕ್ನಿಷಿಯನ್ ಹಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಮಾದೇವಿ ಇಬ್ಬರು ಸಹೋದ್ಯೋಗಿಗಳು ಸ್ನೇಹಿತೆಯರಾಗಿದ್ದು ಹಣ ಕಾಸಿನ ವಿಷಯಕ್ಕೆ ಇಬ್ಬರ ನಡುವಿನ ಸಂಬಂಧ ಹಳಸಿದೆ ಕಳೆದೊಂದು ವರ್ಷದ ಹಿಂದೆ ಇಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಧನಲಕ್ಷ್ಮಿ ಉಮಾದೇವಿಯನ್ನು ಮಾತನಾಡಿಸಿ ತಮಾಷೆಯಾಗಿ ಮಾಡಿದ್ದ ವಿಡಿಯೋ ಇದಿಗ ಇಬ್ಬರ ಕೆಲಸಕ್ಕೆ ಕುತ್ತು ತಂದಿದೆ ವಿಡಿಯೋದಲ್ಲಿ ಏನಿದೆ..?
ಉಮಾದೇವಿ ಮಾತನಾಡುತ್ತ ಆರ್ಬಿಎಸ್ ಟೆಸ್ಟ್ ಮಾಡಲು ಇಪ್ಪತ್ತು ರೂಪಾಯಿ ಕೋಡು ಎರಡು ಸಲ ಮಾಡಲು ಮೂವತ್ತು ರೂಪಾಯಿ ಕೊಡು ಸಿಬಿಸಿ ಪರೀಕ್ಷೆ ನಡೆಸಲು ನೂರು ರೂಪಾಯಿ ಕೊಡು ಬೇಕಾದರೆ ವಿಡಿಯೋ ಮಾಡ್ಕೊ ಎಂಬುದಾಗಿ ವಿಡಿಯೊದಲ್ಲಿ ಕೇಳಲಾಗಿದೆ ಆದರೆ ಈ ವಿಡಿಯೋ ಮಾಡಿರುವುದು ಸಹೊದ್ಯೋಗಿ ಎ.ಎನ್.ಎಂ ಹಾಗಿರುವ ಧನಲಕ್ಷ್ಮಿ ಈ ಘಟನೆ ನಡೆದು ಒಂದು ವರ್ಷದ ಕಳೆದಿದೆ ಇಬ್ಬರ ನಡುವೆ ಹಣಕಾಸಿನ ವ್ಯವಹಾರದ ವಿಷಯವಾಗಿ ವೈಮನಸ್ಸು ಉಂಟಾಗಿ ಧನಲಕ್ಷ್ಮಿ ಉಮಾದೇವಿ ಹಣ ಕೇಳಿರುವ ವಿಡಿಯೋ ಹರಿಬಿಡುವ ಮೂಲಕ ಸೇಡು ತಿರಿಸಿಕೊಂಡಿರುವುದು ಮೆಲ್ನೊಟಕ್ಕೆ ಕಂಡುಬಂದಿದ್ದು ಇದಕ್ಕೆ ಪೂರಕವಾದಂತೆ ಧನಲಕ್ಷ್ಮಿ ಊಟ ತರುವಂತೆ ಹೇಳಿ ಉಮಾದೇವಿಗೆ ಹಣ ಕಳುಹಿಸಿದ್ದು ಈ ಇಬ್ಬರ ನಡುವಿನ ಪೋನ್ ಪೇ ಯಲ್ಲಿ ವರ್ಗವಣೆ ಮಾಡಲಾಗಿರುವ ಹಣದ ಸ್ಕ್ರೀನ್ ಶಾಟ್ ತೆಗೆದು ಉಮಾದೇವಿ ಆಸ್ಪತ್ರೆಗೆ ಬರುವ ರೋಗಿಗಳ ಬಳಿ ಹಣ ಪಡೆಯುತ್ತಿದ್ದಾಳೆ ಎಂದು ಬಿಂಬಿಸಲು ಹೊಗಿ ಇಬ್ಬರು ಪೇಚಿಗೆ
ಸಿಲುಕಿದ್ದು ಇದಿಗ ಕೆಲಸಕ್ಕೆ ಕುತ್ತು ತಂದುಕೊಂಡಿದ್ದಾರೆ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಇದಲ್ಲದೆ ಉಮಾದೇವಿ ಸಾಲವಾಗಿ ಧನಲಕ್ಷ್ಮಿಗೆ ಐದು ಲಕ್ಷರೂಪಾಯಿ ನೀಡಿರುವುದಾಗಿ ತಿಳಿದು ಬಂದಿದೆ ಆಗಾಗ ಹಣ ಕೇಳಿದ್ದೆ ಉಮಾದೇವಿಗೆ ಮುಳುವಾಗಿ ಧನಲಕ್ಷ್ಮಿ ವಿಡಿಯೋ ಹರಿಬಿಡಲು ಕಾರಣವಾಗಿದೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದನ್ನು ಗಮನಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಘಟನೆಯ ಬಗ್ಗೆ ಕಾರಣ ಕೇಳಿ ಸ್ಥಳಿಯ ವೈದ್ಯಾಧಿಕಾರಿ ಹಾಗೂ ಇಬ್ಬರು ಮಹಿಳಾ ಸಿಬ್ಬಂದಿಗಳಿಗೆ ಕಾರಣಕೇಳಿ ನೊಟಿಸ್ ನೀಡಲಾಗಿದೆ ಆದರೆ ಸಾರ್ವಜನಿಕರು ಇಬ್ಬರನ್ನು ಕರ್ತವ್ಯದಿಂದ ಅಮಾನತ್ತು ಮಾಡುವಂತೆ ಆಗ್ರಹಿಸಿದ್ದಾರೆ