ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರಿಗೆ ಮಾಹಿತಿ ನೀಡದ ಕುಣಿಗಲ್ ತಹಶೀಲ್ದಾರ್ ಗೆ ಇಪ್ಪತೈದು ಸಾವಿರ ದಂಡ ಶಿಸ್ತು ಕ್ರಮಕ್ಕೆ ಆದೇಶಿಸಿದ ಮಾಹಿತಿ ಆಯೋಗ!
ಕುಣಿಗಲ್;-ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರನಿಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕುಣಿಗಲ್ ತಹಶೀಲ್ದಾರ್ ಯು.ರಶ್ಮಿ ರವರಿಗೆ ಮಾಹಿತಿ ಆಯೋಗ ಇಪ್ಪತೈದು ಸಾವಿರ ದಂಡ ಹಾಗೂ ಶಿಸ್ತು ಕ್ರಮಕ್ಕೆ ಕಂದಾಯ ಇಲಾಖೆಯ ಆಯುಕ್ತರಿಗೆ ಆದೇಶಿಸಿದೆ ಕುಣಿಗಲ್ ತಾಲ್ಲೂಕಿನ ಕುಂದೂರು ಗ್ರಾಮದ ನರಸೇಗೌಡ ಎಂಬುವವರು ಮಾಹಿತಿ ಹಕ್ಕು
ಕಾಯ್ದೆಯಡಿ ಕಡತ ಒಂದರ ಮಾಹಿತಿ ನೀಡುವಂತೆ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದರು ಆದರೆ ಅರ್ಜಿದಾರರಿಗೆ ಮಾಹಿತಿ ನಿಡುವಲ್ಲಿ ವಿಳಂಬ ಹಿನ್ನೆಲೆ ಅರ್ಜಿದಾರರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದರು ಈ ಬಗ್ಗೆ ವಿಚಾರಣೆ ನಡೆಸಿದ ಮಾಹಿತಿ ಆಯೋಗ ಅರ್ಜಿದಾರರಿಗೆ ನಿಗದಿತ ಸಮಯದಲ್ಲಿ ಮಾಹಿತಿ ನಿಡುವಲ್ಲಿ ವಿಳಂಬ ಹಾಗೂ ಆಯೋಗಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಕರ್ತವ್ಯ ಉಲ್ಲಂಘಿಸಿದ ಕಾರಣ ಕುಣಿಗಲ್ ತಹಶೀಲ್ದಾರ್ ಯು.ರಶ್ಮಿ ರವರಿಗೆ ದಂಡ ವಿಧಿಸಿ ಆದೇಶಿಸಿದೆ
ತಹಶೀಲ್ದಾರ್ ರವರ ನವೆಂಬರ್ ತಿಂಗಳ ವೇತನದಲ್ಲಿ ಇಪ್ಪತೈದು ಸಾವಿರ ದಂಡದ ಹಣವನ್ನು ಆಯೋಗಕ್ಕೆ ಪಾವತಿಸುವಂತೆ ಹಾಗೂ ಕಾನೂನಿನ ಪ್ರಕಾರ ಶಿಸ್ತು ಕ್ರಮ ಕೈಗೊಂಡು ಅದರ ಅನುಪಾಲನ ವರದಿಯನ್ನು ಹತ್ತು ದಿನಗಳ ಒಳಗಾಗಿ ಆಯೋಗಕ್ಕೆ ಸಲ್ಲಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿ ಬೆಂಗಳೂರು.ಶುಭಕಲ್ಯಾಣ್ ತುಮಕೂರು ಜಿಲ್ಲಾಧಿಕಾರಿ, ನಾಹೀದಾ ಜಮ್,ಜಮ್ ಉಪ ವಿಭಾಗಾಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಅಧಿಕಾರಿ ರವರಿಗೆ ಸೂಚಿಸಲಾಗಿದೆ ಹಾಗೂ ಅರ್ಜಿದಾರರಿಗೆ ಐದು ಸಾವಿರ ಪರಿಹಾರ ನೀಡುವಂತೆ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ರವರು ಆದೇಶಿಸಿದ್ದಾರೆ @publicnewskunigal