ತಹಶೀಲ್ದಾರ್ ಡಿಜಿಟಲ್ ಸಹಿ ನವೀಕರಣ ವಿಳಂಬ ಹಿನ್ನೆಲೆ ಬಿಲ್ ಗಾಗಿ ಎರಡು ವರ್ಷದಿಂದ ಕಾದು ಕುಳಿತಿರುವ ವಸತಿ ಫಲನುಭವಿಗಳು!
ಕುಣಿಗಲ್ ತಾಲ್ಲೂಕು ತಹಶೀಲ್ದಾರ್ ಎಡವಟ್ಟಿನಿಂದಾಗಿ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಎರಡು ವರ್ಷ ಕಳೆದರು ಬಿಲ್ ಪಾವತಿಯಾಗಿಲ್ಲ 2022/23ನೇ ಸಾಲಿನಲ್ಲಿ ತಾಲ್ಲೂಕಿನಾದ್ಯಂತ ಸುಮಾರು ಐದುನೂರಕ್ಕೂ ಹೆಚ್ಚು ಮನೆಗಳು ಮಳೆಯಿಂದ ಹಾನಿಗೊಳಗಾಗಿದ್ದು ಹಾನಿಗೆ ಒಳಗಾಗಿದ್ದ ಮನೆಗಳಿಗೆ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಅನುದಾನದ ಅಡಿಯಲ್ಲಿ ಪರಿಹಾರ ನೀಡಲಾಗಿದ್ದು ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದ ಮನೆಗಳಿಗೆ ತಲಾ ಐವತ್ತು ಸಾವಿರ ರೂಪಾಯಿ ಪರಿಹಾರದ ಹಣವನ್ನ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮ
ಮಾಡಲಾಗಿತ್ತು ಇನ್ನೂ ಸಂಪೂರ್ಣ ಹಾನಿಗೊಳಗಾದ ಸುಮಾರು ನಲವತ್ತೊಂಭತ್ತು (49) ಮನೆಗಳಿಗೆ ನೂತನವಾಗಿ ಮನೆ ನಿರ್ಮಿಸಿಕೊಳ್ಳಲು ಕಾರ್ಯದೇಶ ನೀಡಿ ಪ್ರತಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮುಂಗಡ 95 ಸಾವಿರ ನೀಡಲಾಗಿತ್ತು ನಿರ್ಮಾಣ ಹಂತದಲ್ಲಿ ಮನೆಯ ಪಾಯ,ಗೋಡೆ,ಚಾವಣೆ,ಪೂರ್ಣ ಹಂತದಲ್ಲಿ ಮನೆ ನಿರ್ಮಾಣ ಪರಿಗಣಿಸಿ ಬಿಲ್ ಪಾವತಿಯನ್ನು ಹಂತ ಹಂತವಾಗಿ ಮಾಡಬೇಕಾಗಿತ್ತು ಆದರೆ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಇದುವರೆಗೆ ಸಂಪೂರ್ಣ ಬಿಲ್ ಪಾವತಿಯಾಗಿಲ್ಲ ಕಾರಣ ಕಳೆದ ಒಂದು ವರ್ಷದಿಂದ ತಾಲ್ಲೂಕು ದಂಡಾಧಿಕಾರಿಗಳ ಡಿಜಿಟಲ್ ಸಹಿ (DSC) ನವೀಕರಣ ಮಾಡದ ಕಾರಣ ಮನೆ ನಿರ್ಮಾಣ ಮಾಡಿಕೊಂಡರು ಸಹ ವಸತಿ ಯೋಜನೆಯ ಫಲಾನುಭವಿಗಳಿಗೆ ಬಿಲ್ ಪಾವತಿ ಮಾಡಲಾಗಿಲ್ಲ ರಾಜೀವ್ ಗಾಂಧಿ ವಸತಿ ನಿಗಮದಿಂದ ಹಣ ಬಿಡುಗಡೆಗೆಯಾಗಲು ತಹಶೀಲ್ದಾರ್ ರವರಿಂದ ಡಿಜಿಟಲ್ ಸಹಿ ಮೂಲಕ ಹಣ ಪಾವತಿಗೆ ಧೃಡೀಕರಣ ಮಾಡದ ಹೊರತು ವಸತಿ
ಫಲಾನುಭವಿಗಳಿಗೆ ಹಣ ಪಾವತಿಯಾಗದು ಈ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸಾಲ ಮಾಡಿ ಮನೆ ನಿರ್ಮಾಣ ಮಾಡಿಕೊಂಡು ಬಾಕಿ ಉಳಿದಿರುವ ಬಿಲ್ ಗಾಗಿ ಕಾಯುತ್ತಿದ್ದರೆ ಇತ್ತ ಸಾಲಗಾರರಿಗೆ ಬಡ್ಡಿ ಕಟ್ಟಲಾಗದೆ ಕೆಲವರು ಪರದಾಡುವಂತಾಗಿದೆ ಆರ್ಥಿಕವಾಗಿ ಸ್ಥಿತಿವಂತರಲ್ಲದ ಕಡು ಬಡವರು ಹಣ ಬಿಡುಗಡೆ ಮಾಡಲಾಗಿಲ್ಲ ಎಂದು ಮನೆ ನಿರ್ಮಾಣ ಅರ್ಧದಲ್ಲೆ ನಿಲ್ಲಿಸಿ ಗುಡಿಸಿಲಿನಲ್ಲೆ ವಾಸಿಸುವಂತಾಗಿದೆ ಇನ್ನಾದರು ರಾಜ್ಯ ಸರ್ಕಾರ ವಸತಿ ಸಚಿವರು ಹಾಗೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಕುಣಿಗಲ್ ತಾಲ್ಲೂಕಿನಲ್ಲಿ ಮಳೆ ಹಾನಿಯಿಂದ ಮನೆ ಕಳೆದುಕೊಂಡ ಫಲನುಭವಿಗಳಿಗೆ ಹಣ ಬೀಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕಿದೆ ಜೋತೆಗೆ ಕಳೆದೊಂದು ವರ್ಷದಿಂದ ನವೀಕರಣಗೋಳ್ಳದ ತಹಶೀಲ್ದಾರ್ ರವರ ಡಿಜಿಟಲ್ ಸಹಿ ಸರಿಪಡಿಸಿಕೊಂಡು ವಸತಿ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡಲು ಕ್ರಮ ಕೈಗೊಳ್ಳಬೇಕಿದೆ @publicnewskunigal