ಖಾಸಗಿಯವರ ನಿರ್ವಹಣೆಯಲ್ಲಿ ಕುಡುಕರ ಅಡ್ಡೆಯಾದ ಹುತ್ರಿದುರ್ಗ ಪ್ರವಾಸಿ ಮಂದಿರ ದೂರು ಕೊಟ್ಟರು ಕ್ರಮವಿಲ್ಲ ಅಧಿಕಾರಿಗಳ ನಡೆಗೆ ಸ್ಥಳಿಯರ ಆಕ್ರೋಶ ಕ್ರಮಕ್ಕೆ ಆಗ್ರಹ!
ಕುಣಿಗಲ್ ತಾಲ್ಲೂಕಿನ ಐತಿಹಾಸಿಕ ಪ್ರವಾಸಿತಾಣ ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಹುತ್ರಿದುರ್ಗ ಬೆಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹುತ್ರಿದುರ್ಗ ಬೆಟ್ಟಕ್ಕೆ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಮಾರು ಐವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಟ್ಟದ ಹೆಬ್ಬಾಗಿನ ಸಮೀಪದಲ್ಲಿ ಪ್ರವಾಸಿ ಮಂದಿರ ನಿರ್ಮಿಸಲಾಗಿತ್ತು ಆದರೆ ಇತ್ತಿಚೇಗೆ ಪ್ರವಾಸಿ ಮಂದಿರ ಪ್ರವಾಸಿಗರಿಗೆ ಬಳಕೆಯಾಗುವ ಬದಲು ಅನ್ಯ ಕಾರಣಗಳಿಗೆ ಬಳಕೆಯಾಗುತ್ತಿರುವುದೆ ಹೆಚ್ಚಾಗಿದೆ ಮಧ್ಯ ಸೇವನೆ ಹಾಗೂ ಜೂಜು ಅಡ್ಡೆಯಾಗಿದ್ದು ರಾತ್ರಿ ವೇಳೆಯಲ್ಲಿ ಹೊರಗಿನಿಂದ ಬಂದು ಪಾರ್ಟಿ ಮಾಡುತ್ತಿರುವವರ ಸಂಖ್ಯೆ ದಿನೆ ದಿನೆ
ಹೆಚ್ಚುತ್ತಿದೆ ಡಿ.ಜೆ ಶಬ್ದಕ್ಕೆ ಸ್ಥಳಿಯರು ಹೈರಾಣಾಗಿದ್ದಾರೆ ಹುತ್ರಿದುರ್ಗ ಬೆಟ್ಟದ ತಪ್ಪಲಿನಲ್ಲಿ ತ್ಯಾಜ್ಯದ ರಾಶಿ ಹೆಚ್ಚುತ್ತಿದ್ದು ಉತ್ತಮ ಪರಿಸರದಲ್ಲಿ ಮಾಲಿನ್ಯ ಹೆಚ್ಚುತ್ತಿದೆ ಬೆಂಗಳೂರಿಗೆ ಸಮೀಪವಿರುವ ಹುತ್ರಿದುರ್ಗ ಬೆಟ್ಟಕ್ಕೆ ವಾರಾಂತ್ಯ ಬಂದರೆ ಸಾಕು ಸಾವಿರಾರು ಮಂದಿ ಪ್ರವಾಸಿಗರು ಬೇಟಿ ನೀಡುತ್ತಾರೆ ಆದರೆ ಮಹಿಳೆಯರಿಗೆ ಬಳಸಲು ಸರಿಯಾದ ಶೌಚಾಲಯದ ವ್ಯವಸ್ಥೆಯಿಲ್ಲ ಪ್ರವಾಸಿ ಮಂದಿರದಲ್ಲಿ ಶೌಚಾಲಯವಿದ್ದರು ಸಹ ಮಹಿಳೆಯರು ಮಕ್ಕಳು ಬಳಸದ ವ್ಯವಸ್ಥೆ ನಿರ್ಮಾಣವಾಗಿದೆ ಕೋಟ್ಯಾಂತರ ರೂಪಾಯಿ ವೇಚ್ಚದಲ್ಲಿ ಹುತ್ರಿದುರ್ಗ ಬೆಟ್ಟವನ್ನು ಅಭಿವೃದ್ದಿ ಪಡಿಸಲಾಗಿದೆ ಆದರೆ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಭದ್ರತೆ ಇಲ್ಲವಾಗಿದೆ ಈ ಹಿಂದೆ ಪ್ರವಾಕ್ಕೆ ಬಂದ ಚಾರಣಿಗರನ್ನು ನಗ್ನಗೋಳಿಸಿ ಸುಲಿಗೆ ಮಾಡಲಾಗಿತ್ತು
ಹುತ್ರಿದುರ್ಗ ಬೆಟ್ಟದಲ್ಲಿ ಪ್ರಕೃತಿ ಸೊಬಗು ಮತ್ತು ಸೂರ್ಯೋದಯ ಮತ್ತು ಸೂರ್ಯಸ್ತ ಹಾಗೂ ಮಂಜಿನಿಂದ ಕೂಡಿರುವ ಬೆಟ್ಟವನ್ನು ಕಣ್ತುಂಭಿಕೊಳ್ಳಲು ನವೆಂಬರ್ ನಿಂದ ಜನವರಿ ವರೆಗೆ ಲಕ್ಷಂತಾರ ಮಂದಿ ಪ್ರವಾಸಿಗರು ಬೇಟಿ ನೀಡುತ್ತಾರೆ ಆದರೆ ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಹುತ್ರಿದುರ್ಗ ಅಭಿವೃದ್ದಿ ಕಂಡರು ಮೂಲಭೂತ ಸೌಕರ್ಯ ಭದ್ರತೆ ಇಲ್ಲವಾಗಿದೆ ಪಾರಂಪರಿಕ ತಾಣದಲ್ಲಿ ಇಗ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಕಡಿವಾಣ ಹಾಕುವಂತೆ ತಾಲ್ಲೂಕು ಆಡಳಿತ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಸಹ ಇದುವರೆಗು ಯಾವುದೆ ರೀತಿಯ ಕ್ರಮ ಕೈಗೊಂಡಿಲ್ಲ ಇನ್ನಾದರೂ ಸಂಭಂದಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಖಾಸಗಿಯವರ ನಿರ್ವಹಣೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಹಾಗಿ ಪರಿವರ್ತನೆಯಾಗಿರುವ ಪ್ರವಾಸಿ ಮಂದಿರವನ್ನು ಪ್ರವಾಸಿಗರ ಬಳಕೆಗೆ ಸಿಗುವಂತೆ ಮಾಡಬೇಕಾಗಿದೆ @publicnewskunigal