ಹಳೆವೂರು ಗ್ರಾಮದ ಶ್ರೀ ಹುಲಿಯೂರಮ್ಮ ದೇವಿಗೆ ನವಚಂಡಿಕಾ ಮಹಾಯಾಗ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಂದ ವಿಶೇಷ ಪೂಜೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹಳೆವೂರು ಗ್ರಾಮದ ಶ್ರೀ ಹುಲಿಯೂರಮ್ಮ ದೇವಾಲಯದ ಅವರಣದಲ್ಲಿ ಮಂಗಳವಾರ ಶೃಂಗೇರಿ ಮಹಾಸಂಸ್ಥಾನ ಮಠದ ಪೂಜ್ಯರಿಂದ ನವಚಂಡಿಕಾ ಮಹಾಯಾಗ ಮತ್ತು ವಿಷೇಶ ಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಡಿ.ಕೆ ಶಿವಕುಮಾರ್ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ಹಾಗೂ ತಾಲ್ಲೂಕು ಅಭಿವೃದ್ದಿಯಾಗಲಿ ಎಂದು ಹುಲಿಯೂರುದುರ್ಗ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಹಾಗೂ ಬೆಂಲಿಗರು ಸೇರಿ ವಿಷೇಶ ಪೂಜೆ ಸಲ್ಲಿಸಿದರು ಕಾರ್ಯಕ್ರಮದಲ್ಲಿ ಶಾಸಕ ಡಾ.ರಂಗನಾಥ್ ಭಾಗಿಯಾಗಿ ಹುಲಿಯೂರಮ್ಮ ದೇವಿಗೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಹೊಡೆದು ಪೂಜೆ ಸಲ್ಲಿಸಿದರು ಬಳಿಕ
ಮಾಧ್ಯಮದವರೊಂದಿ ಮಾತನಾಡಿದ ಅವರು ಸ್ಟಡ್ ಫಾರಂ ವಿಚಾರದಲ್ಲಿ ಟಿಪ್ಪು ಹಾಗೂ ಬ್ರಿಟಿಷರ ಕಾಲದಿಂದ ಇರುವ ಪಾರಂಪರಿಕ ತಾಣವನ್ನು ಹಾಗೆ ಉಳಿಸಿಕೊಳ್ಳುವುದರ ಜೋತೆಗೆ ಬಹಳ ವರ್ಷಗಳಿಂದ ಕುದುರೆ ಸಂತಾನೊತ್ಪತ್ತಿ ನಡೆಯುತ್ತಿರುವುದನ್ನ ಉಳಿಸಿಕೊಂಡು ಬೆಂಗಳೂರಿನ ಟರ್ಫ್ ಕ್ಲಬ್ ಸ್ಥಳಂತರ ಕುರಿತು ಮುಖ್ಯ ಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಬಳಿ ಇಗಾಗಲೆ ಚರ್ಚೆ ನಡೆಯುತ್ತಿದ್ದು ಪಾರಂಪರಿಕ ತಾಣಕ್ಕೆ ಯಾವುದೆ ರೀತಿಯ ಸಮಸ್ಯೆ ಹಾಗದ ರೀತಿಯಲ್ಲಿ ಸರ್ಕಾರವನ್ನು ಬಳಸಿಕೊಂಡು ರೈತಾಪಿ ವರ್ಗಕ್ಕೆ ಅನುಕೂಲ ಅಗುವಂತಹ ಅಭಿವೃದ್ದೆ ಕೆಲಸ ಮಾಡಲಾಗುವುದು ಟೌನ್ ಕುರಿತು ಯಾವುದೆ ರೀತಿಯ ಚರ್ಚೆ ನಡೆಸಿಲ್ಲ ನಾನು ಮುಂದಿನ ದಿನಗಳಲ್ಲಿ ರೈತರು ಭೂಮಿ ನೀಡಿದರೆ ಇಂಡಸ್ಟ್ರಿ ತರುವಂತಹ ಕೆಲಸ ಮಾಡಲಾಗುತ್ತದೆ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ತಾಲ್ಲೂಕು ಸೇರ್ಪಡೆ ಕುರಿತು ಸರ್ಕಾರದ ಮಟ್ಟದಲ್ಲಿ ಯಾವುದೆ ಚರ್ಚೆ ನಡೆದಿಲ್ಲ ಬೆಂಗಳೂರಿನ

ಅನಿವಾಸಿಗಳ ಚರ್ಚೆಯಷ್ಟೆ ಈ ಬಗ್ಗೆ ನನ್ನನ್ನು ಕರೆದು ಯಾವುದೆ ಚರ್ಚೆ ನಡೆಸಿಲ್ಲ ಕ್ಷೇತ್ರ ಮರು ವಿಂಗಡಣೆಯಾಗುವ ಸಂದರ್ಭದಲ್ಲಿ ಈ ರೀತಿಯ ಮಾತುಗಳು ಕೇಳಿ ಬರುತ್ತಿವೆ ಇದು ಕೇಂದ್ರ ಸರ್ಕಾರದವರು ಮಾಡುವಂತಹ ಕೆಲಸ ಅಂತಹ ಸಂದರ್ಭ ಬಂದರು ನಾನು ತಾಲ್ಲೂಕಿನ ಜನತೆಯೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೆನೆ ಅಭಿವೃದ್ದಿ ವಿಷಯದಲ್ಲಿ ತುಮಕೂರು ಜಿಲ್ಲೆಯ ಮುಖಂಡರಿಂದ ನನಗೆ ಒಂದು ಕಡೆ ಸಹಕಾರದ ಕೊರತೆ ಇದ್ದು ಮಾನ್ಯ ಮುಖ್ಯಂತ್ರಿಗಳ ಬಳಿ ಈ ಬಗ್ಗೆ ಚರ್ಚಿಸಲಾಗಿದೆ ಸುಧಾರಣೆ ತರುವುದಾಗಿ ತಿಳಿಸಿದ್ದಾರೆ ದೆಹಲಿ ಬಾಂಬ್ ಬ್ಲಾಸ್ಟ್ ಕುರಿತು ಮಾತನಾಡಿದ ಅವರು ಕೇಂದ್ರ ಸರ್ಕಾರ ಭದ್ರತೆ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೋಳ್ಳಬೇಕು ಯಾವ ಕಾರಣಕ್ಕೆ ಈ ಘಟನೆ ನಡೆದಿದೆ ಎಂದು ತನಿಖೆಯಿಂದ ಬೆಳಕಿಗೆ ಬರಬೇಕಿದೆ ನಾಗರೀಕ ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದಿತ್ತು ಕಾರ್ಯಕರ್ತರು ಹಾಗೂ ಬೆಂಬಲಿಗರು ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ವಿಷೇಶ ಪೂಜೆ ಸಲ್ಲಿಸಿ ನನ್ನನ್ನು ಕರೆದಿದ್ದರು ನಾನು ಪೂಜೆಯಲ್ಲಿ ಭಾಗಿಯಾಗಿದ್ದೆನೆ ಅಷ್ಟೆ ಈ ಗಾಗಲೆ ಎರಡು ನೊಟಿಸ್ ಬಂದಿವೆ ನನಗೆ ಈ ಬಗ್ಗೆ ನಾನು ಯಾವುದೆ ಪ್ರತಿಕ್ರಿಯೆ ನಿಡುವುದಿಲ್ಲ ಎಂದರು ಈ ವೇಳೆ ಕೆ.ಪಿ.ಸಿ.ಸಿ ಸದಸ್ಯ ಬೇಗೂರು ನಾರಾಯಣ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಧುಸೂದನ್,ಯುತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಜಯರಾಮಯ್ಯ,ಹಳೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬೀಚನಹಳ್ಳಿ ಶ್ರೀನಿವಾಸ್, ಮುಖಂಡರಾದ ಅಲ್ಲಾಭಕಾಷ್,ಕೊಘಟ್ಟ ರಾಜಣ್ಣ,ರಾಮಣ್ಣ, ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್.ಸೇರಿದಂತೆ ಹಲವರು ಉಪಸ್ಥಿತರಿದ್ದರು@publicnewskunigal