ಕುಣಿಗಲ್ ಪಟ್ಟಣದಲ್ಲಿ ನವೆಂಬರ್ 23ರಂದು ಮುನಿಸಿಪಲ್ ಚಾವಡಿ ಗಣೇಶ ಮೂರ್ತಿಯ ವಿಸರ್ಜನ ಮಾಹೋತ್ಸವ!
ಕುಣಿಗಲ್ ಪಟ್ಟಣದ ದೊಡ್ಡಪೇಟೆಯಲ್ಲಿ ಇರುವ ಮುನಿಸಿಪಲ್ ಚಾವಡಿಯಲ್ಲಿ ವಿನಾಯಕ ಚತುರ್ತಿಯಂದು ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯನ್ನು ನವೆಂಬರ್ 23 ರಂದು ಅದ್ದೂರಿಯಾಗಿ ವಿಸರ್ಜನ ಕಾರ್ಯಕ್ರಮ ಅಮ್ಮಿಕೋಳ್ಳಲಾಗಿದೆ ಎಂದು ಮುನಿಸಿಪಲ್ ಚಾವಡಿ ಗಣೇಶೋತ್ಸವ ಸಮಿತಿ ಸದಸ್ಯರು ತಿಳಿಸಿದ್ದಾರೆ ಸೋಮವಾರ ಪಟ್ಟಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸದಸ್ಯರು 71ನೇ ವರ್ಷದ ಅದ್ದೂರಿ ಗಣೇಶ ವಿಸರ್ಜನಾ ಮಹೋತ್ಸವನ್ನು ಸಮಿತಿ ವತಿಯಿಂದ ಅಮ್ಮಿಕೋಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ನಗರದ ಮುಖ್ಯ ರಸ್ತೆಯುದ್ದಕ್ಕೂ ಇಗಾಗಲೆ ವಿದ್ಯುತ್ ದಿಪಾಲಂಕಾರ, ಸಮುದ್ರ ಮಂಥನ,ಉಗ್ರ ನರಸಿಂಹ ಅವತಾರ, ಬೃಹತ್ ಸೆಟ್ ಗಳನ್ನು ನಿರ್ಮಿಸಲಾಗಿದೆ ಅಂಬಾರಿ ಉತ್ಸವ,ಬೃಹತ್ ಉಚಿತ ಆಹಾರ ಮೇಳ,ಹಾಗೂ ಮನರಂಜನೆಯ ಕಾರ್ಯಕ್ರಮಗಳು ಜರುಗಲಿವೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ವೀರಗಾಸೆ, ಪಟಕುಣಿತ,ಪೂಜಾ ಕುಣಿತ,ಡೊಳ್ಳು ಕುಣಿತ, ಜೋಡೆತ್ತುಗಳ ಮೆರವಣಿಗೆ,ಕುದುರೆ ಸಾಫ್ಟ್,ಭದ್ರಕಾಳಿ ಅಘೋರಿ ಕುಣಿತ, ಮುದ್ದಿನ,ತಪ್ಪಿತಸ್ಥ,ತಮಟೆವಾದ್ಯ,ಮಂಗಳವಾದ್ಯಗಳೊಂದಿಗೆ,ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ನಡೆಸಿ ನಂತರ ಕೊತ್ತಗೆರೆ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಸಮಿತಿಯ ಸದಸ್ಯರು ತಿಳಿಸಿದ್ದಾರೆ