ಸಹೋದ್ಯೋಗಿ ಮಹಿಳಾಪೊಲೀಸ್ ಕಾನ್‌ಸ್ಟೆಬಲ್ ಜತೆ ರಹಸ್ಯವಾಗಿ ವಿವಾಹವಾಗಿ ಅದನ್ನು ಬಹಿರಂಗಗೊಳಿಸದೆ ಬೇರೆ ಹುಡುಗಿಯೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕಾನ್‌ಸ್ಟೆಬಲ್ ಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ!
ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಭಗವಂತರಾಯ ಬಸಂತರಾಯ ಬಿರಾದಾರ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್,ರಾಚಯ್ಯ ಅವರ ಏಕಸದಸ್ಯ ನ್ಯಾಯಪೀಠ, ಆರೋಪಿಯು ವಂಚನೆ ಎಸಗಿದ್ದಾನೆ ಎಂದು ಪರಿಗಣಿಸಿ ಮನವಿ ತಿರಸ್ಕರಿಸಿದೆ,2023ರ ಫೆ,14 ರಂದು ಸಂತ್ರಸ್ತೆಯ ಮನೆಗೆ ತೆರಳಿದ ಆರೋಪಿ ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ.ನಂತರ ಮನೆಯಲ್ಲಿದ್ದ
ಸಾಯಿಬಾಬ ಪೋಟೋ ಮುಂದೆ ಆಕೆಗೆ ತಾಳಿ ಕಟ್ಟಿದ್ದು, ಅದನ್ನು ಗುಟ್ಟಾಗಿ ಇಡುವಂತೆ ಹೇಳಿ ಆಕೆಯೊಂದಿಗೆ ದೈಹಿಕ ಸಂಪರ್ಕ ಮುಂದುವರಿಸಿದ್ದ ಆರೋಪಿ ಇಬ್ಬರ ಮದುವೆಯನ್ನ ಸಾರ್ವಜನಿಕಗೊಳಿಸುವ ಭರವಸೆ ನೀಡಿದ್ದಾನೆ.ಆದರೆ ಕೆಲ ಸಮಯದ ನಂತರ,ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿರುವ ಕಾರಣ ವಿವಾಹವಾಗಲು ಸಾಧ್ಯವಿಲ್ಲ ಎಂದಿದ್ದಾನೆ ಇದರಿಂದಾಗಿ ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು,ಇದನ್ನು ರದ್ದುಗೊಳಿಸುವಂತೆ ಕೊರಿ ಆರೋಪಿ ಭಗವಂತರಾಯ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಮನವಿ ಅರ್ಜಿ ಸಲ್ಲಿಸಿದ್ದ ಇದನ್ನು ತಿರಸ್ಕರಿಸಲಾಗಿತ್ತು ಬಳಿಕ ಹೈಕೋರ್ಟಿನ ಮೆಟ್ಟಿಲೆರಿದ್ದ ಆರೋಪಿಯ ಅರ್ಜಿ ವಜಾಗೊಳಿಸದೆ @publicnewskunigal