ಪುರಸಭೆ ಅಧಿಕಾರಿಗಳಿಗೆ 3.16 ಲಕ್ಷ ರಾಜೀದಂಡವನ್ನು ಪಾವತಿಸುವಂತೆ ತಿಳುವಳಿಕೆ ನೋಟಿಸ್ ಜಾರಿ ಮಾಡಿದ ತುಮಕೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು!
ಕುಣಿಗಲ್ ಪಟ್ಟಣದ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದ ಇದೀಗ ಆರ್.ಟಿ.ಓ ಅಧಿಕಾರಿಗಳಿಗೆ ದಂಡ ಪಾವತಿಸುವಂತಾಗಿದೆ ಪುರಸಭೆಯಲ್ಲಿ ಕಸ ಸಂಗ್ರಹಿಸುವ ಕಾರ್ಯ ನಿರ್ವಹಿಸುತ್ತಿರುವ 17 ವಾಹನಗಳಲ್ಲಿ ಪೈಕಿ 8 ವಾಹನಗಳಿಗೆ 2020 ರಿಂದ ಇನ್ಸೂರೆನ್ಸ್ ಎಫ್ ಸಿ ಮಾಡಿಸದ ಹಿನ್ನೆಲೆಯಲ್ಲಿ ಇದಿಗ ದಂಡ ಪಾವತಿಸುವಂತೆ ತುಮಕೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳುವಳಿಕೆ ನೋಟಿಸ್ ನೀಡಿರುವ ಘಟನೆ ನಡೆದಿದ ಮಂಗಳವಾರ ಪಟ್ಟಣದ ಪುರಸಭೆಗೆ ತುಮಕೂರು ಪ್ರಾದೇಶಿಕ ಸಾರಿಗೆ ಇಲಾಖೆಯ ಸಹಾಯಕ ನಿರೀಕ್ಷಕರಾದ ಕವಿತಾ ಟಿ.ಎಸ್ ಭೇಟಿ ನೀಡಿ ಪುರಸಭೆ ಕಚೇರಿ ವ್ಯವಸ್ಥಾಪಕರಾದ ಗೀತಾ ರವರಿಗೆ ನೋಟಿಸ್ ನೀಡಿದ್ದಾರೆ ಹಲವು ದಿನಗಳಿಂದ ಪಟ್ಟಣದ ಪುರಸಭೆಯಲ್ಲಿ ಕಸ ಸಂಗ್ರಹಿಸಲು ಕಾರ್ಯ ನಿರ್ವಹಿಸುತ್ತಿದ್ದ ವಾಹನಗಳಿಗೆ ಎಫ್.ಸಿ ಹಾಗೂ ಇನ್ಸೂರೆನ್ಸ್ ಮಾಡಿಸದ ಕಾರಣ ರಸ್ತೆಯಲ್ಲಿ ಸಂಚರಿಸುವ ವೇಳೆ ಅಪಘಾತ ಉಂಟಾದರೆ ಹಾಗೂ ಚಾಲಕರಿಗೆ ಸಾರ್ವಜನಿಕರಿಗೆ ಸಮಸ್ಯೆಯಾದರೆ ಇದರ ಹೊಣೆ
ಯಾರದು ಎಂದು ಈ ಬಗ್ಗೆ ಗಮನ ಹರಿಸುವಂತೆ ಪುರಸಭೆಯ ಉಪಾಧ್ಯಕ್ಷರಾದ ಮಲ್ಲಿಪಾಳ್ಯ ಶ್ರೀನಿವಾಸ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪುರಸಭೆಗೆ ಬಂದು ಪರಿಶೀಲಿಸಿದ ಆರ್.ಟಿ.ಓ ಅಧಿಕಾರಿಗಳು ದಾಖಲೆ ನಿರ್ವಹಿಸದೆ ಕಸ ಸಂಗ್ರಹಿಸುತ್ತಿದ್ದ ಒಂದು ವಾಹನವನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಪುರಸಭೆಯಲ್ಲಿ ಕಸ ಸಾಗಿಸಲು ಖರೀದಿಸಲಾಗಿದ್ದ 17 ವಾಹನಗಳ ಪೈಕಿ 21/22 ನೇ ಸಾಲಿನಲ್ಲಿ ಖರಿದಿಸಿದ್ದ ನಾಲ್ಕು ವಾಹನಗಳು ಸರಿಯಾದ ನಿರ್ವಹಣೆ ಇಲ್ಲದೆ ಶೆಡ್ಡಿಗೆ ಸೇರಿದ್ದು ಉಳಿದಂತೆ 19/20 ನೇ ಸಾಲಿನಲ್ಲಿ ಖರಿದಿಸಿದ್ದ
ವಾಹನಗಳು ಇನ್ನೂ ಸಧೃಡವಾಗಿವೆ ಪುರಸಭೆಯ ಪರಿಸರ ಇಂಜಿನಿಯರ್ ಚಂದ್ರಶೇಖರ್ ಹಾಗೂ ಮುಖ್ಯಾಧಿಕಾರಿ ಕೃಷ್ಣ ರವರ ಬೇಜವಾಬ್ದಾರಿ ಹಾಗೂ ಕರ್ತವ್ಯ ಲೋಪದಿಂದಾಗಿ ಇದೀಗ ಆರ್.ಟಿ.ಓ ಅಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ ದಂಡ ಪಾವತಿಸುವ ಪರಿಸ್ಥಿತಿ ಎದುರಾಗಿದೆ ಕಳೆದ ಬಾರಿ 25,000 ದಂಡ ಪಾವತಿಸಲಾಗಿತ್ತು ಈ ಬಾರಿ (3.16 (ಮೂರು ಲಕ್ಷದಿಂದ ಹದಿನಾರು ಸಾವಿರ) ಪಾವತಿಸಬೇಕಾಗಿದೆ ಅಧಿಕಾರಿಗಳ ಬೇಜವಾಬ್ದಾರಿಯಾಗು ನಿರ್ಲಕ್ಷ ಕಾರಣದಿಂದಾಗಿ ಸಾರ್ವಜನಿಕರ ತೆರಿಗೆ ಹಣವನ್ನ ದಂಡ ಪಾವತಿಸಲು ಬಳಸಲಾಗುತ್ತಿದೆ ಅದರ ಬದಲು ಕರ್ತವ್ಯ ಲೋಪವೆಸಗಿ ನಿರ್ಲಕ್ಷಕ್ಕೆ ಕಾರಣರಾದ ಅಧಿಕಾರಿಗಳ ವೇತನದಲ್ಲಿ ದಂಡದ ಹಣವನ್ನು ಆರ್ ಟಿ ಓ ಅಧಿಕಾರಿಗಳಿಗೆ ಪಾವತಿಸುವಂತೆ ಸಾರ್ವಜನಿಕರು ಸಹ ಆಗ್ರಹಿಸಿದ್ದಾರೆ @publicnewskunigal