ಜೆ.ಕೆ ಬಾರ್ ನಲ್ಲಿ ಮಾರಕಾಸ್ತ್ರ ಹಿಡಿದು ಬೇದರಿಕೆ ಇಬ್ಬರು ಪುಡಿ ರೌಡಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ!
ಕುಣಿಗಲ್ ತಾಲ್ಲೂಕಿನ ಸಂತೆಪೇಟೆ ಗ್ರಾಮದ ಬಳಿ ಇರುವ ಜೆ.ಕೆ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಭಾನುವಾರ ತಡರಾತ್ರಿ ಬಿಯರ್ ಖರೀದಿಸಲು ಬಂದಿದ್ದ ಇಬ್ಬರು ಆಸಾಮಿಗಳು ಬಿಯರ್ ಪಡೆದು ನಂತರ ಹಣ ಕೇಳಿದ ಬಾರ್ ಕ್ಯಾಶಿಯರ್ ಗುರುಮೂರ್ತಿ ಎಂಬುವವರಿಗೆ ತಮ್ಮ ಕಾರಿನಲ್ಲಿದ್ದ ಮಾರಕಾಸ್ತ್ರಗಳನ್ನು ತಂದು ಬೇದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಭಯದ ವಾತವರಣ ನಿರ್ಮಿಸಿ ಸ್ಥಳದಿಂದ ಕಾಲ್ಕಿತ್ತಿದ್ದ ಇಬ್ಬರು ಪುಡಿ ರೌಡಿಗಳನ್ನು ಕುಣಿಗಲ್ ಪೊಲೀಸರು ಕೆಲವೆ ಗಂಟೆಗಳಲ್ಲಿ ಬಂಧಿಸಿದ್ದಾರೆ ಕೆಂಪನಹಳ್ಳಿ ಗ್ರಾಮದ ಮಂಜುನಾಥ್ (28) ಹಾಗೂ ನಿಟ್ಟೂರು ಗ್ರಾಮದ ಮನೋಜ್ ಅಲಿಯಾಸ್ ಸಣ್ಣ (24) ಬಂಧಿತ ಆರೋಪಿಗಳು

ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆಯ ಸಿಪಿಐ ಮಾಧ್ಯನಾಯಕ್ ಪಿಎಸ್ಐ ಅಮೂಲ್ ಅಭಯ್ ಹಾಗೂ ವಿಧಿವಿಜ್ಙಾನ ಪಯೋಗಲಾಯ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೃತ್ಯಕ್ಕೆ ಬಳಸಿರುವ ವಸ್ತುಗಳನ್ನು ವಶಕ್ಕೆ ಪಡೆದಿದ್ದು ಘಟನೆ ಸಂಬಂಧ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಭಾನುವಾರ ತಡರಾತ್ರಿ 8-50 ರ ಸಮಯದಲ್ಲಿ ಇಟಿಯೋಸ್ ಕಾರಿನಲ್ಲಿ ಬಂದ ಇಬ್ಬರು ಬಾರ್ ಮುಂಬಾಗ ಕಾರು ನಿಲ್ಲಿಸಿ ಒಳಗೆ ಬಂದು ಬಾರ್ ಕ್ಯಾಶಿಯರ್ ಬಳಿ ಬಿಯರ್ ಕೇಳಿದ್ದಾರೆ ಟೆಬಲ್ ಮೇಲೆ ಬಿಯರ್ ಬಾಟಲ್ ತೆಗೆದಿಟ್ಟು ಹಣ ಕೇಳಿದಕ್ಕೆ ನಮ್ಮ ಬಳಿ ಹಣ ಕೇಳ್ತಿಯ ಎಂದು ಕಾರಿನಲ್ಲಿದ್ದ ಮಾರಕಾಸ್ತ್ರಗಳನ್ನು ತಂದು ಬಾರ್ ಕೌಂಟರ್ ಮುಂಭಾಗ ಬಿಸಿದ್ದರು ಈ ದೃಶ್ಯ ಸಿ.ಸಿ ಕ್ಯಾಮರದಲ್ಲಿ ಸೇರೆಯಾಗಿತ್ತು ತಕ್ಷಣ ಎಚ್ಚೆತ್ತ ಪೊಲೀಸರು ಪುಡಿ ರೌಡಿಗಳ ಹೆಡೆಮುರಿ ಕಟ್ಟಿ ಇದಿಗಾ ಜೈಲಿಗಟ್ಟಿದ್ದಾರೆ @publicnewskunigal