ಆಲ್ಕೆರೆ ಗ್ರಾಮದಲ್ಲಿ ದಿವಂಗತ ಡಾ.ದೊಡ್ಡಯ್ಯ ಸ್ಮರಣಾರ್ಥವಾಗಿ ನಿರ್ಮಿಸಲಾಗಿರುವ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಡಾ.ರಂಗನಾಥ್!
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ವ್ಯಾಪ್ತಿಯ ಆಲ್ಕೆರೆ ಗ್ರಾಮದಲ್ಲಿ ಶುಕ್ರವಾರ ದಿವಂಗತ ಡಾ,ದೊಡ್ಡಯ್ಯ ಸ್ಮರಣಾರ್ಥವಾಗಿ ಗ್ರಾಮ ಪಂಚಾಯ್ತಿ ಸದಸ್ಯ ಕೋಘಟ್ಟ ಮಂಜುನಾಥ್ ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಲಾಗಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಸಕ ಡಾ.ರಂಗನಾಥ್ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಗ್ರಾಮಗಳಲ್ಲಿ ಇಂತಹ ಬೆಳವಣಿಗೆಗಳು ನಡೆದಾಗ ಅಭಿವೃದ್ದಿ ಸಾಧ್ಯವಾಗುತ್ತದೆ ನಮ್ಮ ತಂದೆ ದೊಡ್ಡಯ್ಯ ರವರು ಸಾವನ್ನಪ್ಪಿ ಒಂದು ವರ್ಷ ತುಂಬಿದೆ ನಮ್ಮ ತಂದೆಯ
ಸ್ಮರಣಾರ್ಥವಾಗಿ ಗ್ರಾಮದಲ್ಲಿ ಮಂಜುನಾಥ್ ರವರು ಒಳ್ಳೆಯ ಕೆಲಸ ಮಾಡಿದ್ದಾರೆ ನಮ್ಮ ತಂದೆಯವರ ಆಶಯದಂತೆ ನಿಮ್ಮ ಸೇವೆ ಮಾಡಲು ಎರಡನೆ ಬಾರಿಗೆ ಅವಕಾಶ ನೀಡಿದ್ದಿರಿ ನಿಮ್ಮೆಲ್ಲರ ಸಹಕಾರದೊಂದಿಗೆ ತಾಲ್ಲೂಕಿನ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಮಂಜುನಾಥ್ ಕೆ.ಟಿ ರವರನ್ನು ಶಾಸಕರು ಸನ್ಮಾನಿಸಿ ಅಭಿನಂದಿಸಿದರು ಕಾರ್ಯಕ್ರಮದಲ್ಲಿ ಯಲಿಯೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಮೀವುಲ್ಲಾ, ಸದಸ್ಯರಾದ ಕೆ.ಟಿ ಮಂಜುನಾಥ್,ಬಿ.ಎನ್ ನಾರಾಯಣ್, ಮುಖಂಡರಾದ ಕೋಘಟ್ಟ ರಾಜಣ್ಣ,ಗುತ್ತಿಗೆದಾರ ನಾರಾಯಣ್, ಸೆರಿದಂತೆ ಹಲವರು ಉಪಸ್ಥಿತರಿದ್ದರು @publicnewskunigal