ತಾವರೆಕೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆರ್.ಬ್ಯಾಡರಹಳ್ಳಿ ಗ್ರಾಮದ ಬಿ.ಎಂ ನಾಗರಾಜು ಅವಿರೋಧ ಆಯ್ಕೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ತಾವರೆಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಣ್ಣ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಆರ್.ಬ್ಯಾಡರಹಳ್ಳಿ ಗ್ರಾಮದ ಬಿ.ಎಂ ನಾಗರಾಜು ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಚುನಾವಣೆ ಅಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗನಾಥ್ ಕರ್ತವ್ಯ ನಿರ್ವಹಿಸಿದರು,ಈ ವೇಳೆ ನೂತನ ಅಧ್ಯಕ್ಷ ನಾಗರಾಜು
ಮಾತನಾಡಿ ಶಾಸಕ ಡಾ.ರಂಗನಾಥ್ ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್ ರವರ ಮಾರ್ಗದರ್ಶನ ಹಾಗೂ ಎಲ್ಲಾ ಸದಸ್ಯರ ಸಹಕಾರದಿಂದ ನಾನು ತಾವರೆಕೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೆನೆ ಉಳಿದ ಅವದಿಯಲ್ಲಿ ಪಂಚಾಯಿತ್ತಿ ವ್ಯಾಪ್ತಿಯಲ್ಲಿ ಗುರುತರವಾದ ಕೆಲಸ ಮಾಡುವ ನಿಟ್ಟಿನಲ್ಲಿ ‘ಇ’ ಖಾತೆ ಅಭಿಯಾನ ಮಾಡುವ ಮೂಲಕ ಜನ ಸಾಮಾನ್ಯರು ಗ್ರಾಮ ಪಂಚಾಯಿತಿಗೆ ಒಡಾಡುವುದನ್ನು ತಪ್ಪಿಸಲು ಸರ್ವ ಸದಸ್ಯರ ಸಹಕಾರದೊಂದಿಗೆ ಈ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುವುದು ಮುಂಬರುವ ದಿನಗಳಲ್ಲಿ ನನಗೆ ಹೆಚ್ಚಿನ ಅವಕಾಶ ಸಿಕ್ಕರೆ ಅನುದಾನನ ತಂದು ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೆನೆ ಎಂದರು ಈ ವೇಳೆ ಪಿಡಿಒ ಕೃಷ್ಣಯ್ಯ ಸದಸ್ಯರಾದ ರುದ್ರೇಗೌಡ, ನಾಗೇಂದ್ರ, ಶ್ರೀನಿವಾಸ್,ಗೌರಮ್ಮ, ಲಕ್ಷ್ಮಮ್ಮ, ಚಲುವರಂಗಯ್ಯ, ಪದ್ಮಮ್ಮ, ಗೌರಮ್ಮ ಕೆ, ಜಯಣ್ಣ, ಮೋಹನ್ ಕೆ.ಎಲ್, ಸೇರಿದಂತೆ ಹಲವರು ಉಪಸ್ಥಿತರಿದ್ಧರು @publicnewskunigal