ದಾಖಲೆಗಳಿಲ್ಲದೆ ವಾಹನಗಳನ್ನು ರಸ್ತೆಗಿಳಿಸಿದರೆ ಬೀಳುತ್ತೆ ದಂಡ ವಾಹನ ಸವಾರರೆ ಎಚ್ಚರಿಕೆ ಕುಣಿಗಲ್ ಪಟ್ಟಣದಲ್ಲಿ ವಾಹನಗಳಲ್ಲಿ ಸಂಚರಿಸುವ ಮುನ್ನ ಅಗತ್ಯ ದಾಖಲೆ ಇಟ್ಟುಕೊಳ್ಳಿ!
ಕುಣಿಗಲ್ ಪಟ್ಟಣದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ರಸ್ತೆ ಅಪಘಾತ ನಿಯಂತ್ರಿಸುವ ಸಲುವಾಗಿ ಕುಣಿಗಲ್ ಪೊಲೀಸರು ಹಗಲು ರಾತ್ರಿ ಎನ್ನದೆ ಕೆಲಸ ನಿರ್ವಹಿಸುತ್ತಿದ್ದಾರೆ ಇತ್ತೀಚೆಗೆ ಸಂಚಾರಿ ನಿಯಮ ಉಲ್ಲಂಘಿಸಿದ ತಹಶೀಲ್ದಾರ್ ವಾಹನಕ್ಕೆ ದಂಡ ವಿಧಿಸಿರುವ ಪೊಲೀಸರು ಸಾರ್ವಜನಿಕರ ಹಿತದೃಷ್ಟಿಯಿಂದ ಇದೀಗ ಕುಣಿಗಲ್ ಪಟ್ಟಣದಲ್ಲಿ ಸಂಚಾರ ನಿಯಮಗಳನ್ನು ಕಠಿಣ ಗೋಳಿಸುತ್ತಿದ್ದು ತಾಲ್ಲೂಕಿನಲ್ಲಿ ಒಡಾಡುತ್ತಿರುವ ಸರ್ಕಾರಿ ವಾಹನಗಳು ಸೆರಿದಂತೆ ಕುಣಿಗಲ್ ಪೊಲೀಸ್
ಠಾಣಾ ಸರಹದ್ದಿನಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವವರಿಗೆ ದಂಡ ವಿಧಿಸುತ್ತಿದ್ದು, ಸರ್ಕಾರಿ ಅಧಿಕಾರಿಗಳು ಸಂಚರಿಸುವ ವಾಹನಗಳ ಚಾಲಕರು ಹಾಗೂ ಸಿಬ್ಬಂದಿಗಳು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಕುಣಿಗಲ್ ಪೊಲೀಸರು ತಿಳಿಸಿದ್ದಾರೆ ದ್ವಿಚಕ್ರ ವಾಹನದಲ್ಲಿ ಓಡಾಡುವವರು ಹೆಲ್ಮೆಟ್ ಮತ್ತು ನಾಲ್ಕು ಚಕ್ರದ ವಾಹನ ಚಾಲಕರು ಸೀಟ್ ಬೆಲ್ಟ್ ಹಾಕುವಂತೆ ಹಾಗೂ ಸರ್ಕಾರಿ ವಾಹನಗಳ ಚಾಲಕರು ದಾಖಲಾತಿಗಳು ಮತ್ತು ಇನ್ಸೂರೆನ್ಸ್ ಸರಿಯಾಗಿ ನಿರ್ವಹಣೆ ಮಾಡುವಂತೆ,ಮತ್ತು ಇನ್ಶೂರೆನ್ಸ್ ಇಲ್ಲದ ಶಾಲಾ ವಾಹನಗಳನ್ನು ಉಪಯೋಗಿಸದಂತೆ ಸಂಬಂಧಪಟ್ಟ ಶಾಲೆಯವರಿಗೆ ನೋಟಿಸ್ ಜಾರಿ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುವಾಗ ವೇಳೆ ಮೇಲಿನ ನ್ಯೂನ್ಯತೆಗಳು ಕಂಡು ಬಂದಲ್ಲಿ ಸಾರ್ವಜನಿಕರೆದುರು ಸರ್ಕಾರಿ ನೌಕರರಿಗೆ ಯಾವುದೇ ಅನುಕಂಪ ತೋರಿಸಲು ಸಾಧ್ಯವಾಗುವುದಿಲ್ಲ ಎಂದು ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ಮಾಧ್ಯನಾಯಕ್ ತಿಳಿಸಿದ್ದಾರೆ @publicnewskunigal