ಹುಲಿಯೂರಮ್ಮ ದೇವಾಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ ದೇವಿಯ ಮೂಲ ವಿಗ್ರಹದ ಅಚ್ಚು ಸಂಗ್ರಹ ಪ್ರಕರಣ ದೂರು ದಾಖಲಿಸುವಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳು ವಿಫಲ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹಳೆವೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಹುಲಿಯೂರಮ್ಮ (ಹಳೆವೂರಮ್ಮ) ದೇವಾಲಯದಲ್ಲಿ ಡಿಸೆಂಬರ್ 24 ರಂದು ತಡರಾತ್ರಿ ಸರದಿ ಅರ್ಚಕರ ಸಮ್ಮುಖದಲ್ಲಿ ದೇವಿಯ ಮೂಲ ವಿಗ್ರಹದ ಮುಖದ ಅಚ್ಚು ಸಂಗ್ರಹ ಮಾಡಲು ದೇವಾಲಯಕ್ಕೆ ಯಾವುದೆ ಅನುಮತಿ ಇಲ್ಲದೆ ಅತಿಕ್ರಮ ಪ್ರವೇಶ ಮಾಡಿ ವಿಗ್ರಹದ ಅಚ್ಚು ಸಂಗ್ರಹ ಮಾಡಿ ಅಪಚಾರ ಎಸಗಿದ್ದ ಕಿಡಿಗೇಡಿಗಳ ವಿರುದ್ದ ಕಾನುನು ಕ್ರಮಕ್ಕೆ ಸ್ಥಳಿಯರು ಆಗ್ರಹ ಮಾಡಿದ್ದು ಘಟನೆ ನಡೆದು ಐದು ದಿನ ಕಳೆದರು ಸಹ ಇದುವರೆಗೂ ತಪ್ಪಿತಸ್ಥರ ವಿರುದ್ದ ಯಾವುದೆ ಕ್ರಮ ಕೈಗೊಂಡಿಲ್ಲ ಪೊಲೀಸ್ ಠಾಣೆಯಲ್ಲಿ ಯಾವುದೆ ದೂರು ದಾಖಲಿಸದಿರುವುದು ಶ್ರೀ ಹುಲಿಯೂರಮ್ಮ ದೇವಿಯ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ ಘಟನೆ ಬಳಿಕ ದೇವಾಲಯಕ್ಕೆ ತಹಶೀಲ್ದಾರ್ ಯು.ರಶ್ಮಿ ಬೇಟಿ ನೀಡಿ ದೇವಾಲಯದ ಕಾರ್ಯನಿರ್ವಣ ಅಧಿಕಾರಿ ಮಂಜೇಶ್ ಗೆ ದೂರು ನೀಡುವಂತೆ ಸೂಚಿಸಿದ್ದರು ಸಹ ಇದು ವರೆಗೆ ಯಾವುದೆ ದೂರು ನೀಡಿಲ್ಲ ಶನಿವಾರ ದೇವಾಲಯಕ್ಕೆ ತುಮಕೂರು ಉಪ ವಿಭಾಗಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಬೇಟಿ ನೀಡಿ ಘಟನೆಯ ವಿವರ ಪಡೆದಿದ್ದಾರೆ ಇಷ್ಟೆಲ್ಲ ಘಟನೆ ನಡೆದರು ಸಹ ತಪ್ಪಿತಸ್ಥರ ವಿರುದ್ಧ ಯಾವುದೆ ದೂರು ದಾಖಲಾಗದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಸೋಮವಾರ ದೇವಾಲಯದ ಬಳಿ ಭಕ್ತರು ಇದೀಗ ಪ್ರತಿಭಟನೆಗೆ ಮುಂದಾಗಿದ್ದಾರೆ ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ತಪ್ಪಿತಸ್ಥರ ಹಾಗೂ ದೂರು ದಾಖಲಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ದೇವಾಲಯದ ಕಾರ್ಯನಿರ್ವಣ ಅಧಿಕಾರಿಯನ್ನು ಅಮಾನತ್ತುಗೊಳಿಸಿ ತನಿಖೆ ನಡೆಸಬೆಂಕೆಂಬುದು ಶ್ರೀ ಹುಲಿಯೂರಮ್ಮ ದೇವಿಯ ಭಕ್ತರ ಆಗ್ರಹ ವಾಗಿದೆ @publicnewskunigal