ಶ್ರೀ ಹೇಮಗಿರಿ ವರದರಾಜ ಸ್ವಾಮಿಯ ಜಾತ್ರಮಹೊತ್ಸವಕ್ಕೆ ಸಕಲ ಸಿದ್ದತೆಗೆ ತಹಶೀಲ್ದಾರ್ ರಶ್ಮಿ ಅಧಿಕಾರಿಗಳಿಗೆ ಸೂಚನೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಶ್ರೀ ಹೇಮಗಿರಿ ವರದರಾಜ ಸ್ವಾಮಿ ಜಾತ್ರಮಹೊತ್ಸವದ ಪೂರ್ವಭಾವಿ ಸಭೆಯನ್ನು ಬುಧವಾರ ತಹಶೀಲ್ದಾರ್ ಯು.ರಶ್ಮಿ ಅಧ್ಯಕ್ಷತೆಯಲ್ಲಿ ಅಮ್ಮಿಕೋಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಾತನಾಡಿ ಕಳೆದ ಬಾರಿ ಜಾತ್ರಮಹೊತ್ಸವದಲ್ಲಿ ಇಲಾಖೆಯ ವಾರು ವಹಿಸಿಕೊಳ್ಳಲಾದ ಜವಾಬ್ದಾರಿಯ ಕುರಿತು ಅಧಿಕಾರಿಗಳು ಹಾಗೂ ಸ್ಥಳಿಯರೊಂದಿಗೆ ಚರ್ಚೆ ನಡೆಸಲಾಯಿತು, ಈ ವೇಳೆ ಸ್ಥಳಿಯರಾದ ದೇವರಾಜು ಮಾತನಾಡಿ ಹೇಮಗಿರಿ ವರದರಾಜ ಸ್ವಾಮಿ ದೇವಾಲಯದ ಪ್ರದೇಶ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಇದ್ದು ದೇವಾಲಯದ ಪಕ್ಕದಲ್ಲಿ ಇರುವ ಸರ್ಕಾರಿ ಭೂಮಿಯನ್ನು ಅರಣ್ಯ ಇಲಾಖೆಗೆ ಅಸ್ತಂತರಿಸಿ ದೇವಾಲಯ ಇರುವ ಭೂಮಿಯನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆಯುವ ಕುರಿತು ಪ್ರತಿಬಾರಿ ಚರ್ಚಿಸಲಾಗುತ್ತಿದೆ ಆದರೆ ಇದುವರೆಗೆ ಯಾವುದೆ ಬೆಳವಣಿಗೆ
ನಡೆದಿಲ್ಲ ಬರಿ ಚರ್ಚೆಗೆ ಸಿಮಿತವಾಗಿದೆ ಎಂದರು ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಜಾತ್ರೆ ಬಳಿಕ ಚರ್ಚಿಸುವುದಾಗಿ ತಿಳಿಸಿದರು, ದೇವಾಲಯದಲ್ಲಿ ಕಳ್ಳತನ ನಡೆದು ವರ್ಷಗಳು ಕಳೆದರು ಇದುವರೆಗೆ ಕಳ್ಳರು ಪತ್ತೆಯಾಗಿಲ್ಲ ಪ್ರಕರಣ ತನಿಖೆ ಯಾವ ಅಂತದಲ್ಲಿ ಇದೆ, ದೇವಾಲಯದಲ್ಲಿ ಸೇವೆಗಳ ಬಗ್ಗೆ ದರ ನಿಗದಿ ಪಡಿಸಿ ಹೊರಗೆ ದರ ಪಟ್ಟಿ ಪ್ರಕಟಿಸಿಲ್ಲ ಎಂದ ಸ್ಥಳಿಯರ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್ ತಾಲ್ಲೂಕಿನಲ್ಲಿ ಒಟ್ಟು 431 ಸಿ ದರ್ಜೆಯ ದೇವಾಲಯಗಳಿದ್ದು ಆದಾಯ ಕಡಿಮೆ ಇರುವ ಕಾರಣ ಈ ಬಗ್ಗೆ ಚಿಂತನೆ ನಡೆಸಿಲ್ಲ ಮುಂದಿನ ದಿನಗಳಲ್ಲಿ ಹಿರಿಯ ಅಧಿಕಾರಿಗಳ
ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದರು, ಜನವರಿ 15 ಮತ್ತು 16 ರಂದು ಹೇಮಗಿರಿ ವರದರಾಜ ಸ್ವಾಮಿ ಜಾತ್ರಮಹೊತ್ಸವ ನಡೆಯಲಿದ್ದು ಜಾತ್ರಮಹೊತ್ಸವದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಭಕ್ತರು ಸೆರಲಿದ್ದಾರೆ ದೇವಾಲಯಕ್ಕೆ ಬರುವ ಭಕ್ತರಿಗೆ ಯಾವುದೆ ಸಮಸ್ಯೆಯಾಗದ ರೀತಿಯಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಹಶೀಲ್ದಾರ್ ರಶ್ಮಿ ಸೂಚಿಸಿದರು, ಕುಡಿಯುವ ನೀರಿನ ಸಮಸ್ಯೆ ಇರುವ ಕಾರಣ ಕೊಳವೆ ಬಾವಿ ಕೊರೆಯಲು ಹಾಗೂ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಲಾಗಿದ್ದ ಸಮುದಾಯ ಭವನ ಕಳೆದ ಮೂರು ವರ್ಷಗಳಿಂದ ಸೊರುತ್ತಿದ್ದು ಸರಿ ಪಡಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು, ಜಾತ್ರೆಗೆ ಬರುವ ಭಕ್ತರಿಗೆ ರಥೋತ್ಸವದ ವರೆಗೆ ನಿರಂತರ ದಾಸೋಹ ನಡೆಸುವಂತೆ ಸ್ಥಳಿಯರು ತಹಶೀಲ್ದಾರ್ ರವರಿಗೆ ಮನವಿ ಮಾಡಲಾಯಿತು, ಕಾರ್ಯಕ್ರಮದಲ್ಲಿ ವಲಯ ಅರಣ್ಯಧಿಕಾರಿ ಜಗದೀಶ್,ಕಂದಾಯ ನಿರೀಕ್ಷಕ ಪುರುಷೋತ್ತಮ್,ನಿಡಸಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಕುಮಾರ್,ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಸದಸ್ಯರಾದ ಅಲ್ಲಾಭಕಷ್, ನಟರಾಜ್,ರೈತ ಮುಖಂಡ ಕರೀಗೌಡ,ಪಿಡಿಒ ಶ್ರೀಧರ್,ದಿಲೀಪ್,ಸೇರಿದಂತೆ ಸ್ಥಳಿಯರು ಸಭೆಯಲ್ಲಿ ಭಾಗಿಯಾಗಿದ್ದರು @publicnewskunigal