ಮಾಗಡಿ ಅಪ್ರಾಪ್ತ ಬಾಲಕಿಯ ಅಪಹರಣ ಮಾಡಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಇಬ್ಬರ ಬಂಧನ ಮೂವರ ವಿರುದ್ದ ಪ್ರಕರಣ ದಾಖಲು!
ಮಾಗಡಿ ಪಟ್ಟಣದ ಕೂಗಳತೆ ದೂರದಲ್ಲಿರುವ ತಟವಾಳು ಗೋಲ್ಲರಹಟ್ಟಿ ಗ್ರಾಮದ ಬಳಿ ವೆಂಕಟೇಶ್ ಎಂಬುವವರ ತೋಟದ ಮನೆಯಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ತೊಡಗಿದ್ದ ಯೂಟ್ಯೂಬರ್ ಹಾಗೂ ಇತರರು ಪಾರ್ಟಿ ಮುಗಿಸಿ ಬಳಿಕ ಕೆಲವರು ಕುಡಿದ ಮತ್ತಿನಲ್ಲಿ ಅಪ್ರಾಪ್ತ ಯುವತಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಅಡಿಯಲ್ಲಿ ಮೂವರ ವಿರುದ್ದ ಮಾಗಡಿ ಪೊಲೀಸ್ ಠಾಣೆಯಲ್ಲಿ ಮೊ.ಸಂ. 02/2026, ಕಲಂ: 137(2), 75, 115(2), 109, 3(5) ಬಿ.ಎನ್.ಎಸ್ ಹಾಗೂ 8,12 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಹಿನ್ನೆಲೆ ಇಬ್ಬರು ಆರೋಪಿಗಳು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ರವಿಚಂದ್ರ ಅಲಿಯಾಸ್ ಜಮುನಾ ರವಿ ಹಾಗೂ ಮಾಗಡಿ ವೆಂಕಟೇಶ್ ಎಂಬುವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ,
ಘಟನೆಯ ಬಳಿಕ ಮಾಗಡಿ ಪೊಲೀಸ್ ಠಾಣೆಯ ಬಳಿ ಗುರುವಾರ ಮಧ್ಯಾಹ್ನ ತಟವಾಳು ಗೊಲ್ಲರಹಟ್ಟಿ ಗ್ರಾಮದ ನೂರಾರು ಮಂದಿ ಜಮಾಯಿಸಿದ್ದರು ಈ ವೇಳೆ ಠಾಣೆಯ ಬಳಿ ಸಕ್ಕರೆ ನಾಡು ಕೆಂಪ ಹಾಗೂ ಕಬ್ಜ ಶರಣ ಎಂಬುವವರು ಅಲ್ಲಿಗೆ ಬಂದಿದ್ದಾರೆ ಹೊಸವರ್ಷದ ಸಂಭ್ರಮದ ವೇಳೆ ಆರೋಪಿಯ ಜೋತೆಯಲ್ಲಿ ಸಕ್ಕರೆನಾಡು ಕೆಂಪ ಎಂಬಾತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಇದನ್ನು ಗಮನಿಸಿದ್ದ ತಟವಾಳು ಗೊಲ್ಲರಹಟ್ಟಿ ಗ್ರಾಮಸ್ಥರು ಯುವತಿಯ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರ ಬಹುದೆಂದು ಶಂಕಿಸಿ ಸಕ್ಕರೆನಾಡು ಕೆಂಪ ಹಾಗೂ ಕಬ್ಜ ಶರಣ ಎಂಬುವವರಿಗೆ ಮಾಗಡಿ ಪೊಲೀಸ್ ಠಾಣೆಯ ಮುಂಭಾಗ ಕೊಟೆ ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಬಳಿಕ ಪೊಲೀಸರು ಇಬ್ಬರನ್ನು ರಕ್ಷಣೆ ಮಾಡಿ ಕಳುಹಿಸಿದ್ದು ಈ ಸಂಬಂಧ ಯಾವುದೆ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ ಯುವತಿಯ ವಿಷಯಕ್ಕೆ ಕೊಪದಲ್ಲಿದ್ದ ಗ್ರಾಮಸ್ಥರ ಕೈಗೆ ಸಿಕ್ಕಿ ಹಲ್ಲೆಗೆ ಒಳಗಾಗಿದ್ದಾರೆ ಏನೆ ಆಗಲಿ ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಿದೆ @publicnewskunigal