ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ವಾರಸುದಾರರ ಪತ್ತೆಗಾಗಿ ಮನವಿ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಟಿ ಎಂ ರಸ್ತೆಯ ಬದಿಯಲ್ಲಿರುವ ಪಂಚಮ ಶಾಲೆಯ ಬಳಿ ದಿನಾಂಕ:03-01- 2026 ರಂದು ಸಂಜೆ ಸುಮಾರು 7-00 ಗಂಟೆಯಿಂದ ದಿನಾಂಕ: 04-01-2026 ರಂದು ಬೆಳಗ್ಗೆ 6-00 ಗಂಟೆಯ ನಡುವಿನ ವೇಳೆಯಲ್ಲಿ

ಈ ಫೋಟೋದಲ್ಲಿ ಕಣುವ ಸುಮಾರು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ದೇಹವು ಪತ್ತೆಯಾಗಿದ್ದು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ ಮೃತನ ಮೈ ಮೇಲೆ ನೀಲಿ ಕಲರ್ ನೈಟ್ ಪ್ಯಾಂಟ್, ಹಳದಿ ಬಣ್ಣದ ಕಪ್ಪು ಬಣ್ಣದ ಹೂವಿನ ಡಿಸೈನ್ ಇರುವ ತುಂಬುತೋಳಿನ ಶರ್ಟ್, ಕಪ್ಪು ಬಣ್ಣದ ರೌಂಡ್ ನೆಕ್ ಟೀ ಶರ್ಟ್ ಧರಿಸಿರುವುದು ಕಂಡುಬಂದಿದ್ದು ಸಾಧಾರಣ ಮೈಕಟ್ಟು, ಎಣ್ಣೆ ಗೆoಪು ಮೈಬಣ್ಣ ,ಕೋಲು ಮುಖ ಹೊಂದಿದ್ದು ತಲೆ ಮುಂಭಾಗದಲ್ಲಿ ಕೂದಲು ತೆಳುವಾಗಿರುತ್ತದೆ ಯಾರಿಗಾದರು ಮೃತನ ಹೆಸರು ವಿಳಾಸ ವಾರಸುದಾರರ ಬಗ್ಗೆ ತಿಳಿದಲ್ಲಿ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಹಾಗೂ ಹುಲಿಯೂರುದುರ್ಗ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ – 08132-223338 ಹುಲಿಯೂರುದುರ್ಗ ಪಿ.ಎಸ್.ಐ. 9480802964,ಅಮೃತೂರು ವೃತ್ತ ನಿರೀಕ್ಷಕರ ದೂರವಾಣಿ ಸಂಖ್ಯೆ- 9480802936. ಸಂಪರ್ಕಿಸಲು ಕೋರಿದೆ@publicnewskunigal