ಕುಣಿಗಲ್ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಬೀಚನಹಳ್ಳಿ ಶ್ರೀನಿವಾಸ್ ಪ್ರಧಾನ ಕಾರ್ಯದರ್ಶಿಯಾಗಿ ಎ.ಎಂ ಶರೀಫ್ ವುಲ್ಲಾ ಆಯ್ಕೆ!
ಕುಣಿಗಲ್ ಪಟ್ಟಣದ ಕನ್ನಡ ಸಾಹಿತ್ಯ ಭವನದ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬೀಚನಹಳ್ಳಿ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ವೇಳೆ ಉಪಾಧ್ಯಕ್ಷರಾಗಿ ಎಂ.ಡಿ ಮೋಹನ್, ಕಾರ್ಯದರ್ಶಿಯಾಗಿ ಆನಂದ್ ಸಿಂಗ್ ಟಿ.ಹೆಚ್, ಖಜಾಂಚಿಯಾಗಿ ರೇಣುಕಾ ಪ್ರಸಾದ್ ಬಿ ಎನ್, ನಿರ್ದೇಶಕರುಗಳಾಗಿ ಹಿರಿಯ ಪತ್ರಕರ್ತರಾದ ರಾಮಚಂದ್ರಯ್ಯ, ಕೆ.ಆರ್ ರಂಗನಾಥ್, ರವೀಂದ್ರ ಕುಮಾರ್, ಶಂಕರ್, ಗೋಪಾಲ್, ರವರುಗಳು ಅವಿರೋಧವಾಗಿ ಆಯ್ಕೆಗೊಂಡರು.ಉಳಿದಂತೆ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮತದಾನದ ಮೂಲಕ ಚುನಾವಣೆ ನಡೆದು ಬೀಚನಹಳ್ಳಿ ಶ್ರೀನಿವಾಸ್ ಹದಿಮೂರು ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು ಪ್ರತಿಸ್ಪರ್ಧಿ ದಲಿತ್ ನಾರಾಯಣ್ ಒಂಭತ್ತು ಮತ ಪಡೆದು ಪರಾಜಿತಗೊಂಡರು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶರೀಫ್ ವುಲ್ಲಾ ಎ,ಎಂ, ರವರು ಹನ್ನೆರಡು ಮತ ಪಡೆದು ಆಯ್ಕೆಯಾದರೆ ಪ್ರತಿ ಸ್ಪರ್ಧಿ ಲೋಕೇಶ್ ಕೆ.ಎನ್ ಹತ್ತು ಮತಗಳನ್ನು ಪಡೆದು ಪರಾಜಿತಗೊಂಡರು.ಚುನಾವಣಾ ಅಧಿಕಾರಿಗಳಾಗಿ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹಾಗೂ ತಾಲೂಕು ಘಟಕಗಳ ಮುಖ್ಯ ಚುನಾವಣಾ ಅಧಿಕಾರಿ ಎಲ್ ಯೋಗೇಶ್, ಜಿಲ್ಲಾ ಖಜಂಚಿ ಸತೀಶ್ ಹಾರೋಗೆರೆ, ಕಾರ್ಯದರ್ಶಿ ಬಿ ಎಲ್ ನಂದೀಶ್, ಯಶಸ್ ಕೆ, ಪದ್ಮನಾಭ ಚುನಾವಣೆ ನಡೆಸಿಕೊಟ್ಟರು.ನೂತನವಾಗಿ ಆಯ್ಕೆಯಾದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಿಗೆ ಅಭಿನಂದನೆ ಸಲ್ಲಿಸಲಾಯಿತು @publicnewskunigal