ಕ್ಷೇತ್ರದ ಅಭಿವೃದ್ಧಿಗಾಗಿ ಶ್ರೀನಿವಾಸ ಕಲ್ಯಾಣೋತ್ಸವ ಪೂಜೆ ಬಳಿಕ ಮನೆ ಮನೆಗೆ ತೆರಳಿ ತಿರುಪತಿ ಲಡ್ಡು ಪ್ರಸಾದ ವಿತರಿಸಿದ ಶಾಸಕ ಡಾ.ರಂಗನಾಥ್!
ಕುಣಿಗಲ್ ಪಟ್ಟಣದಲ್ಲಿ ಇತ್ತಿಚೆಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಡಿ.ಕೆ.ಎಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಮ್ಮಿಕೋಳ್ಳಲಾಗಿತ್ತು ತಿರುಪತಿಯಿಂದ ಉತ್ಸವ ಮೂರ್ತಿ ಹಾಗೂ ಅರ್ಚಕರನ್ನು ಕರೆತಂದು ಅದ್ದೂರಿಯಿಂದ ಕುಟುಂಬಸ್ಥರ ಜೋತೆ ಸೇರಿ ಪೂಜೆ ನೆರವೇರಿಸಲಾಗಿತ್ತು ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಹಾಗೂ ಉಪ ಮುಖ್ಯ ಮಂತ್ರಿಗಳ ಪತ್ನಿ ಉಷಾ ಡಿ.ಕೆ ಶಿವಕುಮಾರ್ ಮಾಜಿ ಸಂಸದ ಡಿ.ಕೆ ಸುರೇಶ್ ಸೇರಿದಂತೆ ಅಲವು ಗಣ್ಯರು ಭಾಗಿಯಾಗಿದ್ದರು ಇದಾದ ಬಳಿಕ ಶಾಸಕ ಡಾ.ರಂಗನಾಥ್ ತಿರುಪತಿ ತಿರುಮಲದಿಂದ ಸುಮಾರು ಎಪ್ಪತ್ತೂ ಸಾವಿರ ಲಡ್ಡು ಪ್ರಸಾದ ತರಿಸಿ ಅದನ್ನು ಕಾರ್ಯಕರ್ತರು ಹಾಗೂ ಬೆಂಬಲಿಗರ ಮೂಲಕ ಇದೀಗ ಮನೆ ಮನೆಗೆ ಹಂಚುವ ಕೆಲಸಕ್ಕೆ ಮುಂದಾಗಿದ್ದು, ಮಕರ ಸಂಕ್ರಾಂತಿ ಒಳಗೆ ಎಲ್ಲರ ಮನೆಗೆ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಲುಪಲಿದ್ದು ಖುದ್ದು ಶಾಸಕ ಡಾ.ರಂಗನಾಥ್ ರವರು ಕ್ಷೇತ್ರದ ಜನರಿಗೆ ಹಂಚಲು ತರಿಸಿರುವ ಲಡ್ಡು ಪ್ರಸಾದವನ್ನು ಸ್ವತಃ ಪ್ಯಾಕ್ ಮಾಡುವ ಮೂಲಕ ಗಮನ ಸೇಳೆದಿದ್ದು ತಮ್ಮು ಸ್ವಗ್ರಾಮದ ಮನೆ ಮನೆಗೆ ತೆರಳಿ ಲಡ್ಡು ಪ್ರಸಾದ ವಿತರಿಸುವ ಮೂಲಕ ಕ್ಷೇತ್ರದ ಅಭಿವೃದ್ದಿ ಜೋತೆಗೆ ಯಾವುದೆ ಸಮಸ್ಯೆ ಇಲ್ಲದೆ ಮಳೆ ಬೆಳೆಯಾಗಿ ಎಲ್ಲರು ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಿರುವುದಾಗಿ ಶಾಸಕ ಡಾ.ರಂಗನಾಥ್ ತಿಳಿಸಿದ್ದಾರೆ @publicnewskunigal