ಶ್ರೀ ಹೇಮಗಿರಿ ವರದರಾಜ ಸ್ವಾಮಿಯ ಜಾತ್ರಮಹೊತ್ಸವಕ್ಕೆ ತಾಲ್ಲೂಕು ಆಡಳಿತದ ವತಿಯಿಂದ ಸಕಲ ಸಿದ್ದತೆ ಎರಡುದಿನಗಳ ಜಾತ್ರಮಹೊತ್ಸವದ ಭದ್ರತೆಗಾಗಿ ನೂರು ಮಂದಿ ಪೊಲೀಸರ ನಿಯೋಜನೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಇತಿಹಾಸ ಪ್ರಸಿದ್ಧ ಶ್ರೀ ಹೇಮಗಿರಿ ವರದರಾಜ ಸ್ವಾಮಿಯ ಜಾತ್ರಾಮಹೊತ್ಸವಕ್ಕೆ ತಾಲ್ಲೂಕು ಆಡಳಿತದ ವತಿಯಿಂದ ಸಕಲ ಸಿದ್ದತೆ ಮಾಡಿ ಕೊಳ್ಳಲಾಗಿದೆ,ಜನವರಿ15 ರ ಗುರುವಾರ ಪ್ರಾರಂಭವಾಗುವ ಜಾತ್ರೆಗೆ ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗುವ ನಿರೀಕ್ಷೆ ಇದ್ದು ಶುಕ್ರವಾರ ವರದರಾಜ ಸ್ವಾಮಿಯ ಭ್ರಹ್ಮರಥೋತ್ಸವ ಜರುಗಲಿದೆ ಜೋತೆಗೆ ಸಾಂಸ್ಕೃತಿಕ ಕಾರ್ಯಕ್ರಮ,ನಾಟಕೋತ್ಸವ, ಸೇರಿದಂತೆ ವಿವಿದ ಕಾರ್ಯಕ್ರಮ ಜರುಗಲಿದ್ದು ಭದ್ರತೆಗಾಗಿ ನೂರು ಮಂದಿ ಪೊಲೀಸರನ್ನು ನೀಯೋಜಿಸಲಾಗಿದೆ, ಜಾತ್ರಾಮಹೊತ್ಸವಕ್ಕೆ ಬರುವ ಭಕ್ತರಿಗೆ ಎರಡು ದಿನಗಳ ನಿರಂತರ ದಾಸೋಹ,ಕುಡಿಯುವ ನೀರು,ಬಳಸಲು ಶೌಚಾಲಯ,ಹಾಗೂ ವಾಹನಗಳಿಗೆ ಪಾರ್ಕಿಂಗ್, ವ್ಯವಸ್ಥೆ ಸೇರಿದಂತೆ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದು ಪೂರ್ವ ಸಿದ್ದತೆಗಳನ್ನು ಪರಿಶೀಲಿಸಿದ್ದಾರೆ, ಜೋತೆಗೆ ತುಮಕೂರು,ಮೈಸೂರು, ಬೆಂಗಳೂರು, ಕಡೆಯಿಂದ ಬರುವ ಭಕ್ತರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಕಾರ್ಯಕ್ರಮದಲ್ಲಿ ಶಾಸಕ ರಂಗನಾಥ್,ಸಂಸದ ಡಾ,ಮಂಜುನಾಥ್,ಆದಿ ಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿ,ನಂಜಾವದೂತ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ತಹಶೀಲ್ದಾರ್ ಯು.ರಶ್ಮಿ ತಿಳಿಸಿದ್ದಾರೆ ಶನಿವಾರ ಜಾತ್ರಾಮಹೊತ್ಸವಕ್ಕೆ ತೆರೆ ಬಿಳಲಿದೆ @publicnewskunigal