ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಹೇಮಗಿರಿ ವರದರಾಜ ಸ್ವಾಮಿಯ ಬ್ರಹ್ಮರಥೋತ್ಸವ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಇತಿಹಾಸ ಪ್ರಸಿದ್ಧ ಶ್ರೀ ಹೇಮಗಿರಿ ವರದರಾಜ ಸ್ವಾಮಿಯ ಭ್ರಹ್ಮರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು ಕಾರ್ಯಕ್ರಮದಲ್ಲಿ ಭಾಗಿಯಾಗಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮಿಜಿಯವರು ರಥದ ಚಕ್ರಕ್ಕೆ ತೆಂಗಿನ ಕಾಯಿ ಹೊಡೆದು ಪೂಜೆ ಸಲ್ಲಿಸಿ ರಥೋತ್ಸವ ಕ್ಕೆ ಚಾಲನೆ ನೀಡಿದರು ಜಾತ್ರಮಹೊತ್ಸವ ಪ್ರಯುಕ್ತ ಶ್ರೀ ಹೇಮಗಿರಿ ವರದರಾಜ ಸ್ವಾಮಿಗೆ ವಿಷೇಶ ಹೂವಿನಿಂದ ಸಿಂಗರಿಸಿ ಅಲಂಕಾರ ಮಾಡಲಾಗಿತ್ತು ಐವತ್ತು ಸಾವಿರಕ್ಕೂ ಅಧಿಕಮಂದಿ ಭಕ್ತರು ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾಗಿದ್ದರು ರಥೋತ್ಸವದ ವೇಳೆ ಹುಲಿಯೂರಮ್ಮ, ಬಿರೇಶ್ವರಸ್ವಾಮಿ, ದೇವರುಗಳನ್ನು ಮೆರವಣಿಗೆ ಮಾಡಲಾಯಿತು ಪೂಜಾ ಕುಣಿತ,ಪಟ ಕುಣಿತ,ಕಂಸಾಳೆ ಸೇರಿದಂತೆ ಹಲವು ಸಂಸೃತಿಕ ಕಲಾ ತಂಡಗಳು ಭಾಗಿಯಾಗಿದ್ದವು, ಜಾತ್ರಮಹೊತ್ಸವದಲ್ಲಿ ಭಾಗಿಯಾಗಿದ್ದ ಭಕ್ತರು ತೆಂಗಿನಕಾಯಿ. ಬಾಳೆಹಣ್ಣು.ಕಜ್ಜಾಯಾ. ಹಾಗೂ ಬಗೆ ಬಗೆಯ ಹಣ್ಣುಗಳಿಂದ ಪ್ರಸಾದ ತಯಾರಿಸಿ ರಥದ ಮುಂಭಾಗದಲ್ಲಿ ಮಣೆವು ಹಾಕಿದರು ಗೋವಿಂದ ಗೋವಿಂದ ಎನ್ನುವ ಮೂಲಕ ರಥಕ್ಕೆ ಹೂವು ಹಣ್ಣು ಧವನ ಬಿರುವ ಮೂಲಕ ತಮ್ಮ ಇಷ್ಟಾರ್ಥಗಳಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು ರಥೋತ್ಸವದ ವೇಳೆ ಗರುಡ ಸಂಚರಿಸಿ ರಥದ ಸುತ್ತಲು ಪ್ರದಕ್ಷಣೆ ಹಾಕಿ ತೆರಳಿತು ಇದನ್ನು ಕಂಡ ಭಕ್ತರು ಹರ್ಷ ವ್ಯಕ್ತಪಡಿಸಿದರು ಜಾತ್ರಮಹೊತ್ಸವದ ಭದ್ರತೆಗಾಗಿ 100 ಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು ಯಾವುದೆ ಅಹಿತಕರ ಘಟನೆಯ ಸಂಭವಿಸದಂತೆ ಭದ್ರತೆ ಕೈಗೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಅರೆಶಂಕರ ಮಠದ ಶ್ರೀ ಸಿದ್ದರಾಮಚೈತನ್ಯ ಸ್ವಾಮಿಜಿತಹಶೀಲ್ದಾರ್ ಯು.ರಶ್ಮಿ.ಡಿವೈಎಸ್ಪಿ ಓಂಪ್ರಕಾಶ್,ಸಿಪಿಐ ನವೀನ್‌ಗೌಡ,ಲೋಹಿತ್,ಹುಲಿಯೂರುದುರ್ಗ ಪಿಎಸ್ಐ ಪ್ರಶಾಂತ್ ,ಅಮೃತೂರು ಪಿಎಸ್ಐ ಶಮಂತ್‌ಗೌಡ ಹಾಗೂ ಉಪ ತಹಶೀಲ್ದಾರ್ ಜಗದೀಶ್, ಕಂದಾಯಧಿಕಾರಿ ಪುರುಷೋತ್ತಮ್. ಹಾಗೂ ಕಂದಾಯ ಇಲಾಖೆಯ ಆಧಿಕಾರಿಗಳು ಸಿಬ್ಬಂದಿವರ್ಗ ಸೆರಿದಂತೆ ಸಾವಿರಾರು ಮಂದಿ ಭಕ್ತರು ಶ್ರೀ ಹೇಮಗಿರಿ ವರದರಾಜ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದರು @publicnewskunigal