ಚಿರತೆ ಸೆರೆ ಹಿಡಿಯುವಂತೆ ಜೋಡಿ ಹೊಸಹಳ್ಳಿ ಗ್ರಾಮಸ್ಥರು ಆಗ್ರಹ!
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ವ್ಯಾಪ್ತಿಯ ಜೋಡಿ ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಚಿರತೆಯ ಉಪಟಳ ಹೆಚ್ಚುತ್ತಿದ್ದು ರೈತರ ಸಾಕು ಪ್ರಾಣಿಗಳು ಸೆರಿದಂತೆ ಬೀದಿ ನಾಯಿಗಳನ್ನು ಗ್ರಾಮಕ್ಕೆ ಬಂದು ಹೊತ್ತೊಯ್ಯುತ್ತಿರುವ ಹಿನ್ನೆಲೆ ಗ್ರಾಮಸ್ಥರು ಚಿರತೆಯ ಉಪಟಳದಿಂದ ಭಯ ಬೀತರಾಗಿದ್ದಾರೆ ಇನ್ನೂ ತೋಟಗಳ ಕಡೆಗೆ ಹಸು,ಎಮ್ಮೆ, ಮೇಕೆಗಳನ್ನು ಮೇಹಿಸಲು ರೈತರು ತೆರಳಿದ್ದ ವೇಳೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವುದು ಕಂಡು ಬಂದಿದ್ದು ಇತ್ತೀಚೆಗೆ ಬೆಟ್ಟದಿಂದಲ ಪಾಳ್ಯ ಗ್ರಾಮದ ಕಾವೇರಯ್ಯ ಎಂಬುವರ ಒಂದು ಮೇಕೆ ಹಾಗೂ ಜೋಡಿ ಹೊಸಹಳ್ಳಿ ಗ್ರಾಮದ ಕಮಲಮ್ಮ ಎಂಬುವವರಿಗೆ ಸೇರಿದ ಒಂದು ಎಮ್ಮೆಕರು ಹಾಗೂ ಒಂದು ಮೇಕೆಯನ್ನು ಹೊತ್ತೊಯ್ದಿದಿರುವ ಘಟನೆ ನಡೆದಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಇದುವರೆಗೂ ಬೇಟಿ ನೀಡಿಲ್ಲ ಕೂಡಲೆ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ@publicnewskunigal