ಅದ್ದೂರಿಯಾಗಿ ಜರುಗಿದ ಶ್ರೀ ಗುಡ್ಡದ ರಂಗನಾಥ ಸ್ವಾಮಿಯ ರಥೋತ್ಸವಕ್ಕೆ ಸಾಕ್ಷಿಯಾದ ಸಾವಿರಾರು ಮಂದಿ ಭಕ್ತರು!
ಕುಣಿಗಲ್ ತಾಲ್ಲೂಕಿನ ಆಲ್ಕೆರೆ ಹೊಸಹಳ್ಳಿ ಗ್ರಾಮದ ಶ್ರೀ ಗುಡ್ಡದ ರಂಗನಾಥ ಸ್ವಾಮಿಯ ಜಾತ್ರಮಹೊತ್ಸವ ಪ್ರಯುಕ್ತ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅದ್ದೂರಿಯಿಂದ ಜರುಗಿತು ದೇವಾಲಯದಲ್ಲಿ ವಿಶೇಷ ಪೂಜೆ ಹೊಮ ಸೆರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು, ದೇವಾಲಯದ ಸುತ್ತಲು ಶ್ರೀ ರಂಗನಾಥ ಹಾಗೂ ಲಕ್ಷ್ಮಿದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತಂದು ರಥೋತ್ಸವಕ್ಕೆ ಕುರಿಸಿ ಪೂಜೆ ಸಲ್ಲಿಸಿಸಿದರು ಬಳಿಕ ಶಾಸಕ ಡಾ.ರಂಗನಾಥ ದಂಪತಿಗಳು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು,ಡೊಳ್ಳು ಕುಣಿತ,ಪೂಜಾ ಕುಣಿತ,ಪಟ ಕುಣಿತ,ಕಂಸಾಳೆ ಸೆರಿದಂತೆ ವಿವಿಧ ಸಾಂಸ್ಕೃತಿಕ ಕಾಲ ತಂಡಗಳೊಂದಿಗೆ ಮೆರವಣಿಗೆಯ ಮೂಲಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಶ್ರೀ ಗುಡ್ಡದ ರಂಗನಾಥ ಸ್ವಾಮಿಯ ರಥೋತ್ಸವ ನಡೆಯಿತು ತಮ್ಮ ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸಿ ರಥಕ್ಕೆ ಭಕ್ತರು ಗೊವಿಂದ ಕಾಪಾಡು ಎಂದು ಹಣ್ಣು ಧವನ ತೂರಿದರು,ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತರಿಗೆ ಶಾಸಕರು ಊಟ ಬಡಿಸುವ ಮೂಲಕ ಗಮನ ಸೆಳೆದರು ಈ ವೇಳೆ ಶಾಸಕ ಡಾ.ರಂಗನಾಥ್ ಪತ್ನಿ ಸುಮ ರಂಗನಾಥ್, ಸಿಪಿಐ ಮಾಧ್ಯನಾಯಕ್, ಮುಖಂಡರಾದ ಕೋಘಟ್ಟ ರಾಜಣ್ಣ, ಕಲ್ಲನಾಯಕನಹಳ್ಳಿ ಚಂದ್ರಪ್ಪ,ಬೇಗೂರು ನಾರಯಣ್, ಸೇರಿದಂತೆ ಹಲವರು ಉಪಸ್ಥಿತರಿದ್ದರು@publicnewskunigal