ಕೊತ್ತಗೆರೆ ಗ್ರಾಮದಲ್ಲಿ ಹಲವರಿಗೆ ಬೀದಿ ನಾಯಿ ಕಡಿತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಆತಂಕದಲ್ಲಿ ಗ್ರಾಮಸ್ಥರು ನಾಯಿ ಸೆರೆಗೆ ಆಗ್ರಹ!
ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮದಲ್ಲಿ ಶನಿವಾರ ಸಂಜೆ ತೋಟದ ಕಡೆಯಿಂದ ಕೃಷಿ ಕೆಲಸ ಮುಗಿಸಿ ಮನೆಯ ಕಡೆಗೆ ಬರುತ್ತಿದ್ದ ವೇಳೆ ನಾಯಿ ಕಡಿದು ಗ್ರಾಮದ ರಂಗಪ್ಪ (70) ನಾರಾಯಣಪ್ಪ (65) ಗುಂಡಪ್ಪ (55) ಹಾಗೂ ಬೋರೆಗೌಡನಪಾಳ್ಯ ಗ್ರಾಮದ ಗಂಗಾಧರ್ (44) ಎಂಬುವವರಿಗೆ ಕಳಸಿಪಾಳ್ಯ ಗ್ರಾಮದಬಳಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ ಒಂದೆ ದಿನದಲ್ಲಿ ನಾಲ್ಕು ಜನರಿಗೆ ನಾಯಿ ಕಡಿದಿದ್ದು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲವರು ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರು ಕ್ರಾಸ್ ನ ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಘಟನೆ ಬಳಿಕ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ, ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತಿರುವ ಬೀದಿ ನಾಯಿಯನ್ನು ಸೇರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದು ಈ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಹೊನ್ನಸ್ವಾಮಿ ರವರಿಗೆ ಗ್ರಾಮಸ್ಥರು ಕರೆ ಮಾಡಿದರು ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ,ಈ ಬಗ್ಗೆ ಮಾಹಿತಿ ತಿಳಿಸಲು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಕರೆ ಮಾಡಿದರು ಸಹ ಗ್ರಾಮ ಪಂಚಾಯಿತಿ ಪಿಡಿಒ ಕರೆ ಸ್ವೀಕರಿಸಲಿಲ್ಲ ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಬೀದಿನಾಯಿ ಹಾವಳಿಗೆ ಕಡಿವಾಣ ಹಾಕಬೇಕಿದೆ@publicnewskunigal