ತಂಗಿಯ ಪರ ನ್ಯಾಯ ಕೇಳಲು ಹೊದ ಸಹೋದರರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಎಲೆಕಡಕಲು ಗ್ರಾಮದಲ್ಲಿ ನಡೆದಿದೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಎಲೆಕಡಕಲು ಗ್ರಾಮದ ವಾಸಿ ಯಶೋಧ ಎಂಬುವವರಿಗೆ ಗಂಡನ ಅಣ್ಣ ಮಾವ ಶ್ರೀನಿವಾಸ್ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದು ತಂದೆ ತಾಯಿಯನ್ನ ಕರೆತಂದು ಯಶೋಧ ವಾಸವಿರುವ ಮನೆಯ ಮುಂದೆ ಮಲಗಿಸಿ ಯಶೋಧ ಆಕೆಯ ಮಕ್ಕಳು ಓಡಾಡದ ರೀತಿಯಲ್ಲಿ ಕಿರುಕುಳ ನೀಡುತಿದ್ದ ಈ ಬಗ್ಗೆ ಯಶೋಧ ಮಂಗಳವಾರ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾಳೆ ಸ್ಥಳಕ್ಕೆ ಬಂದ ಪೊಲೀಸರು ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆ ಬಳಿಕ ಯಶೋಧ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ ವೇಳೆ ಯಶೋಧ ಸಹೊದರರಾದ ಗುಡ್ಡೆ ತಿಪ್ಪಸಂದ್ರ ಗ್ರಾಮದ ಸುರೇಶ್ (45) ಹೊನ್ನರಾಜು (50) ಎಂಬುವವರು ಎಲೆಕಡಕಲು ಗ್ರಾಮದ ತಂಗಿಯ ಮನೆಯ ಬಳಿ ತಂಗಿಯ ಪರ ನ್ಯಾಯ ಕೇಳಲು ಹೊಗಿದ್ದಾರೆ ಈ ವೇಳೆ ಮಾತಿನ ಚಕಮಕಿ ನಡೆದು ಯಶೋಧ ಗಂಡನ ಅಣ್ಣನಾದ ಶ್ರೀನಿವಾಸ್ ಹಾಗೂ ನಾಗರಾಜು,ಎಂಬುವವರು ಸೇರಿ ಯಶೋಧಳ ಸಹೊದರಿಬ್ಬರಿಗೂ ದೊಣ್ಣೆ.ಕಲ್ಲು.ಹಾಲೋಬ್ರಿಕ್ಸ್ ನಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಜಗಳ ಬಿಡಿಸಲು ಹೊದ ಯಶೋಧ ಮಗಳು ವಾಣಿ (14) ಸಂಬಂಧಿ ರಾಜರತ್ನ (70) ಎಂಬುವವರಿಗು ಗಾಯಗಳಾಗಿದ್ದು ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹಲ್ಲೆಗೆ ಒಳಗಾದವರನ್ನು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸಿ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಾದನಾಯಕನಹಳ್ಳಿಯ ಅಭಯ್ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆಯ ಸ್ಥಳಕ್ಕೆ ಅಮೃತೂರು ವೃತ್ತ ನಿರೀಕ್ಷಕ ನವೀನ್‌ಗೌಡ.ಹುಲಿಯೂರುದುರ್ಗ ಪಿ ಎಸ್.ಐ ಪ್ರಶಾಂತ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ @publicnewskunigal