ಹಂದಲಗೆರೆ ಗ್ರಾಮದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ಕಾಮಗಾರಿ ಗ್ರಾಮಸ್ಥರ ವಿರೋಧ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹಂದಲಗೆರೆ ಗ್ರಾಮದಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಿಸಲಾಗುತ್ತಿದ್ದು ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ ಗ್ರಾಮದ ಖಾಸಗಿ ಜಮೀನಿನಲ್ಲಿ ಸರ್ಕಾರಿ ಹಣ ಬಳಸಿ ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸಲಾಗುತ್ತಿದ್ದು ಇದರಿಂದ ಗ್ರಾಮದಲ್ಲಿ ಉತ್ಪತ್ತಿಯಾಗುವ ಕಲುಷಿತ ನೀರು ಪಕ್ಕದಲ್ಲಿರುವ ಕೆರೆಗೆ ಸೇರುವ ಕಾರಣದಿಂದ ಜಾನುವಾರುಗಳು ಕುಡಿಯುವ ನೀರು ಕಲುಷಿತಗೊಳ್ಳಲಿದ್ದು ಕೂಡಲೆ ಕಾಮಗಾರಿ ಸ್ಥಗಿತಗೋಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದು ಈ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯಿತಿ ತಹಶೀಲ್ದಾರ್.ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ಹಾಗೂ ಕೆ.ಆರ್.ಡಿ.ಎಲ್ ಅಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದರು ಸಹ ಇದುವರೆಗೆ ಯಾವುದೆ ಕ್ರಮ ಕೈಗೊಂಡಿಲ್ಲ ಗ್ರಾಮಸ್ಥರ ವಿರೋಧದ ನಡುವೆ ಗುತ್ತಿಗೆದಾರ ಕಾಮಗಾರಿ ನಡೆಸುತ್ತಿದ್ದಾನೆ ಈ ಬಗ್ಗೆ ಕ್ರಮ ಕೈಗೋಳ್ಳಬೇಕಿದ್ದ ಅಧಿಕಾರಿಗಳು ಯಾವುದೆ ಕ್ರಮ ಕೈಗೊಂಡಿಲ್ಲ ಕಾಮಗಾರಿ ಸ್ಥಳಕ್ಕೆ ಇದುವರೆಗೆ ಯಾರು ಬೇಟಿ ನೀಡಿಲ್ಲ,ಪೋನ್ ಕರೆ ಮಾಡಿದರು ಅಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ ಕಾಮಗಾರಿ ಪ್ರಾರಂಭಿಸಿರುವ ಬಗ್ಗೆ ಸ್ಥಳದಲ್ಲಿ ಯಾವುದೆ ರೀತಿಯ ನಾಮಫಲಕ ಅಳವಡಿಸಿಲ್ಲ ಕೂಡಲೆ ಗ್ರಾಮದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ನಿಲ್ಲಿಸದಿದ್ದಲ್ಲಿ ತುಮಕೂರಿನಲ್ಲಿರುವ ಕೆ.ಆರ್.ಡಿ.ಎಲ್ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಬೇಕಾಗುತ್ತದೆ ಇದಕ್ಕೆ ಅವಕಾಶ ನೀಡದೆ ಕಾಮಗಾರಿ ಸ್ಥಗಿತಗೊಳಿಸಿ ಎಂದು ಗ್ರಾಮಸ್ಥರಾದ ಕಾಂತರಾಜು, ನಂದೀಶ,ರಮೇಶ್,ಲೊಕೇಶ್ ಒತ್ತಾಯಿಸಿದ್ದಾರೆ