ಗ್ರಾಮ ಪಂಚಾಯ್ತಿಯ ಜನಪ್ರತಿನಿಧಿಗಳ ಆಡಳಿತ ಅವಧಿ ಮುಗಿದ ಹಿನ್ನೆಲೆ ಕುಣಿಗಲ್ ತಾಲೂಕಿನ 36 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ!
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆದೇಶ ಹಿನ್ನೆಲೆ ಹಾಗೂ ಗ್ರಾಮ ಪಂಚಾಯ್ತಿಯ ಚುನಾಯಿತ ಜನ ಪ್ರತಿನಿಧಿಗಳ ಅವಧಿ ಮುಕ್ತಾಯಗೊಂಡ ಕಾರಣ ಕುಣಿಗಲ್ ತಾಲೂಕಿನ 36 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಆದೇಶಿಸಿದ್ದಾರೆ ಕಿತ್ತಿನಾಗಮಂಗಲ, ಬೆಳೆದೇವಾಲಯ, ಹೇರೂರು, ಬೇಗೂರು ಗ್ರಾಮ ಪಂಚಾಯಿತಿಗಳಿಗೆ ಲೋಕೋಪಯೋಗಿ ಇಲಾಖೆಯ ಎ.ಇ.ಇ ರಾಮಕೃಷ್ಣ, ಯಲಿಯೂರು, ಕೆಂಪನಹಳ್ಳಿ, ಜೋಡಿ ಹೊಸಹಳ್ಳಿ, ಇಪ್ಪಾಡಿ ಗ್ರಾಮ ಪಂಚಾಯಿತಿಗಳಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿಜಯ್ ಕುಮಾರ್, ಹುತ್ರಿದುರ್ಗ, ಚೌಡನಕುಪ್ಪೆ, ತಾವರೆಕೆರೆ ಟಿ.ಹೊಸಳ್ಳಿ ಗ್ರಾಮ ಪಂಚಾಯಿತಿಗಳಿಗೆ ಹೇಮಾವತಿ ನಾಲಾ ವಲಯದ ಕುಣಿಗಲ್ ಉಪ ವಿಭಾಗದ ಎಇಇ ರವಿ, ಮಡಿಕೆಹಳ್ಳಿ, ಡಿ.ಹೊಸಹಳ್ಳಿ, ಯಡಿಯೂರು, ನಡೆಮಾವಿನಪುರ ಗ್ರಾಮ ಪಂಚಾಯಿತಿಗಳಿಗೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ವಸಂತ್ ಕುಮಾರ್, ಉಜ್ಜಿನಿ, ನಿಡೆಸಾಲೆ, ಹಳೆಊರು, ಹುಲಿಯೂರು ದುರ್ಗ ಗ್ರಾಮ ಪಂಚಾಯಿತಿಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ರಾಜಪ್ಪ, ಕೊಡವತ್ತಿ ಯಡವಾಣಿ, ಕೊಡಗೆಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗನಾಥ್, ಜಿನ್ನಾಗರ, ಕೆ.ಹೊನ್ನ ಮಾಚನಹಳ್ಳಿ, ಅಮೃತೂರು, ಮಾರ್ಕೋನಹಳ್ಳಿ ಪಂಚಾಯ್ತಿಗಳಿಗೆ ಹೇಮಾವತಿ ನಾಲಾ ವಲಯದ ಎಇಇ ಯಡಿಯೂರು ಉಪವಿಭಾಗ ರುದ್ರೇಶ್, ಭಕ್ತರಹಳ್ಳಿ ತರೆದ ಕುಪ್ಪೆ, ಬಾಗೇನಹಳ್ಳಿ ಕೊತ್ತಗೆರೆ ಗ್ರಾಮ ಪಂಚಾಯಿತಿಗಳಿಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಆನಂದಕುಮಾರ್, ಸಂತೆಮಾವತ್ತೂರು, ಕೊಪ್ಪ, ಕಗ್ಗೆರೆ, ನಾಗಸಂದ್ರ ಗ್ರಾಮ ಪಂಚಾಯಿತಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ವೇದಮೂರ್ತಿ ಇವರನ್ನು ಆಡಳಿತ ಅಧಿಕಾರಿಗಳನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ, @publicnewskunigal