ಎರಡನೆ ಮದುವೆಗೆ ಸಜ್ಜಾಗಿರುವ ವೇಳೆ ಕಲ್ಯಾಣ ಮಂಟಪಕ್ಕೆ ಮೊದಲನೆ ಪತ್ನಿ ಎಂಟ್ರಿ ಮದುಮಗ ಶಾಕ್ ನಿಂತುಹೊದ ಮದುವೆ!
ಕುಣಿಗಲ್ ತಾಲ್ಲೂಕಿನ ಯಡಿಯೂರು ದೇವಾಲಯದ ಬಳಿ ಇರುವ ಎಸ್,ಎಲ್,ಎನ್ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ಆರ್.ಆರ್ ನಗರ ನಿವಾಸಿ ಹರೀಶ್ ಪ್ರಸಾದ್ ಅಲಿಯಾಸ್ ಪ್ರಸಾದ್ ಎಂಬಾತ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಅಲಗೂರು ಗ್ರಾಮದ ಪುಣ್ಯಶ್ರೀ ಎಂಬ ಯುವತಿಯೊಂದಿಗೆ ಎರಡನೆ ಮದುವೆಗೆ ಸಜ್ಜಾಗಿದ್ದ ವೇಳೆ ಪತ್ನಿ ಲೇಪಾಕ್ಷಿ ತಾಳಿ ಕಟ್ಟುವ ವೇಳೆಗೆ ಪೊಲೀಸರು ಹಾಗೂ ಕುಟುಂಬಸ್ಥರೊಂದಿಗೆ ಕಲ್ಯಾಣ ಮಂಟಪಕ್ಕೆ ಪ್ರತ್ಯಕ್ಷವಾಗಿದ್ದಾಳೆ ಈ ವೇಳೆ ಮದುವೆ ಗಂಡು ಕಕ್ಕಬಿಕ್ಕಿಯಾಗಿದ್ದಾನೆ ಶಾಲೆಯಿಂದ ಗೆಳೆಯರಾಗಿದ್ದ ಇಬ್ಬರು ಪ್ರೀತಿಸಿ 2014 ರಲ್ಲಿ ಮದುವೆ ಮಾಡಿಕೊಂಡಿದ್ದರು ಬಳಿಕ ಕುಟುಂಬಸರು ಶೃಂಗೇರಯಲ್ಲಿ ಮದುವೆ ಮಾಡಿದ್ದರು ಇದಾದ ಬಳಿಕ ಕುಟುಂಬಸ್ಥರೊಂದಿಗೆ ನಾಲ್ಕು

ವರ್ಷಗಳಿಂದ ವಾಸವಿದ್ದರು ಮತ್ತೆ ಬೇರೆ ಮನೆ ಮಾಡಿ ವಾಸವಿದ್ದ ಪ್ರಸಾದ್ ಬಲವಂತವಾಗಿ ಹೆಂಡತಿ ಲೇಪಾಕ್ಷಿಗೆ ನಾಲ್ಕುಬಾರಿ ಗರ್ಭಪಾತ ಮಾಡಿಸಿದ್ದ ಹರೀಶ್ ಪ್ರಸಾದ್ ಈ ಬಗ್ಗೆ ಆರ್.ಆರ್ ನಗರದ ಠಾಣೆಯಲ್ಲಿ ದೂರು ದಾಖಲಾಗಿತ್ತು ವೃತ್ತಿಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲೇಪಾಕ್ಷಿಗೆ ಪತಿ ಹರೀಶ್ ಪ್ರಸಾದ್ ವಿಚ್ಛೇದನ ನೀಡದೆ ಮತ್ತೊಂದು ಮದುವೆಗೆ ಸಜ್ಜಾಗಿರುವುದು ತಿಳಿದು ಶನಿವಾರ ಆರ್.ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದಳು ಕಳೆದ ಮೂರು ದಿನಗಳ ಹಿಂದಷ್ಟೇ ಪತ್ನಿಗೆ ಪೋನ್ ಮಾಡಿ ಎರಡುದಿನ ಬಿಟ್ಟು ಮನೆಗೆ ಬರುವುದಾಗಿ ಹೇಳಿ ಎರಡು ಸಾವಿರ ರೂಪಾಯಿ ಪೋನ್ ಪೇ ಮಾಡಿದ್ದ ಆಸಾಮಿ ಗಂಡ ಮುಧುಮಗನಾಗಿ ಕಲ್ಯಾಣ ಮಂಟಪದಲ್ಲಿ ಇರುವಾಗಲೆ ಭಾನುವಾರ ಅಮೃತೂರು ಪೊಲೀಸರ ಸಮ್ಮುಖದಲ್ಲಿ ಕಲ್ಯಾಣ ಮಂಟಪಕ್ಕೆ ಬಂದ ಪತ್ನಿ ಗಂಡ ಎರಡನೆ ಮದುವೆ ಆಗುವುದನ್ನು ತಡೆದಿದ್ದಾಳೆ ಈ ವೇಳೆ ಮದುವೆಯ ಸಂಭ್ರಮದಲ್ಲಿದ್ದ ಪುಣ್ಯಶ್ರೀ ಕುಟುಂಬಸ್ಥರಿಗೆ ಶಾಕ್ ಹಾಗಿದೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ವಿದ್ದ ಪುಣ್ಯಶ್ರೀ ಕುಟುಂಬಸ್ಥರು ಮಧುಮಗನಿಗೆ ಬಿಸಿ ಬಿಸಿ ಕಜ್ಜಾಯ ನೀಡಿದ್ದಾರೆ ಸ್ಥಳದಲ್ಲಿದ್ದ ಪೊಲೀಸರು ಗಲಾಟೆ ಬಿಡಿಸಿ ಮದುವೆಗೆ ಸಜ್ಜಾಗಿರುವ ಗಂಡನ್ನು ಠಾಣೆಗೆ ಕರೆದೊಯ್ದಿದ್ದಾರೆ ಇತ್ತ ಮದುವೆಗೆ ಬಂದಿದ್ದ ಸಂಬಂಧಿಕರು ಏನಾಗುತ್ತಿದೆ ಎನ್ನುವಷ್ಟರಲ್ಲಿ ಮದುವೆ ನಿಂತುಹೋಗಿದೆ ಪುಣ್ಯಶ್ರೀ ಕುಟುಂಬಸ್ಥರು ಸಹ ವರನ ಮೇಲೆ ಅಮೃತೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಕೆಲವೆ ಕ್ಷಣಗಳು ಮುಗಿದಿದ್ದರೂ ಸಹ ಮದುವೆ ಮುಗಿದುಹೊಗಿರುತಿತ್ತು ಇಗ ಮಾಡಿರುವ ಅಡುಗೆ ಊಟ ತಿನ್ನುವವರು ಯಾರು ಇಲ್ಲದೆ ಬಾಣಸಿಗರು ಪೇಚಿಗೆ ಸಿಲುಕಿದ್ದರು ಮದುವೆಗೆ ಬಂದಿದ್ದ ಪೊಟೊಗ್ರಾಫರ್ ಮತ್ತು ಪುರೋಹಿತರು ಎಲ್ಲರು ವಾಪಸ್ ತೆರಳಿದ ಪ್ರಸಂಗ ಜರುಗಿದೆ@publicnewskunigal