ರಾಜ್ಯ ಹೆದ್ದಾರಿ 33ರ ಡಿ.ಹೊಸಹಳ್ಳಿ ಟೋಲ್ ಬಳಿ ರಸ್ತೆ ಅಪಘಾತ ಒರ್ವ ಸ್ಥಳದಲ್ಲೆ ಸಾವು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ರಾಜ್ಯ ಹೆದ್ದಾರಿ 33ರ ಡಿ.ಹೊಸಹಳ್ಳಿ ಟೋಲ್ ಬಳಿ ರಸ್ತೆ ಅಪಘಾತ ಸಂಭವಿಸಿ ಒರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದು ಮತ್ತೊರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ ದೊಡ್ಡಮಾವತ್ತೂರು ಗ್ರಾಮದ ನಂದೀಶ್(26) ಮೃತ ಯುವಕ ಮಂಗಳವಾರ ರಾತ್ರಿ ಹುಲಿಯೂರುದುರ್ಗ ಪಟ್ಟಣಕ್ಕೆ ತನ್ನ ಚಿಕ್ಕಮ್ಮನ ಮಗನ ಜೋತೆ ಊಟಕ್ಕೆ ತೆರಳುವ ವೇಳೆ ಡಿ.ಹೊಸಹಳ್ಳಿ ಟೋಲ್ ಬಳಿ ಅವೈಜ್ಞಾನಿಕ ಹಂಪ್ ಗಳ ಕಾರಣದಿಂದ ಬೈಕ್ ಸವಾರನ ನಿಯಂತ್ರಣ ತಪ್ಪಿ ಟೋಲ್ ಡಿವೈಡರ್ ಗೆ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ನಂದೀಶ್ ಸ್ಥಳದಲ್ಲೆ ಸಾವನ್ನಪ್ಪಿದ್ದು ಹಿಂಬದಿ ಕುಳಿತಿದ್ದ ಹಿರಿಸೇವೆ ಬಳಿಯ ಗೌಡ್ರಹಳ್ಳಿ ಗ್ರಾಮದ ಮನೋಜ್ (28) ಗಂಭೀರ ಗಾಯಗಳಾಗಿದ್ದು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಇನ್ನೂ ಸಾಕಷ್ಟು ವಿರೋಧದ ನಡುವೆಯು ದೊಡ್ಡ ಮಾವತ್ತೂರು ಬಳಿ ಇದ್ದ ಟೋಲ್ ನ್ನು ಡಿ.ಹೊಸಹಳ್ಳಿ ಬಳಿಯ ಅಫಘಾತ ವಲಯದಲ್ಲಿ ಸ್ಥಳಾಂತರ ಮಾಡಲಾಗಿದ್ದು ಟೋಲ್ ಗೆ ಸರ್ವಿಸ್ ರಸ್ತೆ ಇಲ್ಲದಂತಾಗಿದೆ ರಸ್ತೆ ಬದಿಯಲ್ಲಿ ಟೋಲ್ ಇರುವ ಬಗ್ಗೆ ಸರಿಯಾದ ನಾಮ ಫಲಕ ಅಳವಡಿಸಿಲ್ಲ ರಸ್ತೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಹಂಪ್ ಗಳನ್ನು ಅಳವಡಿಸಲಾಗಿದೆ ರಾತ್ರಿ ವೇಳೆ ವಾಹನ ಸವಾರಿಗೆ ಟೋಲ್ ಬಳಿ ಸರಿಯಾಗಿ ಟೋಲ್ ಹಾಗೂ ರಸ್ತೆಯ ಮಾರ್ಗಸೂಚಿ ಕಾಣದಂತಾಗಿದ್ದು ಕೂಡಲೆ ಅಫಘಾತ ವಲಯದಲ್ಲಿ ನಿರ್ಮಿಸಿರುವ ಟೋಲ್ ಬೇರೆ ಕಡೆಗೆ ಸ್ಥಳಾಂತರ ಮಾಡುವಂತೆ ಸ್ಥಳಿಯರ ಹಾಗೂ ವಾಹನ ಸವಾರ ಆಗ್ರಹವಾಗಿದೆ @publicnewskunigal