ಪೊಲೀಸರು ನನಗೆ ಸ್ಪಂದಿಸಿಲ್ಲ ದೌರ್ಜನ್ಯಕ್ಕೆ ಒಳಗಾದ ಮಹಿಳೆಯಿಂದ ಮಹಿಳಾ ಆಯೋಗದ ಅಧ್ಯಕ್ಷೆಗೆ ಕಾಲಿಗೆ ಬಿದ್ದು ದೂರು!
ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಬೇಟಿನೀಡಿ ಪರಿಶೀಲನೆ ನಡೆಸಿದರು ಈ ವೇಳೆ ಆಸ್ಪತ್ರೆಯ ಚಿಕಿತ್ಸೆಗೆ ದಾಖಲಾಗಿದ್ದ ಒರ್ವ ಮಹಿಳೆಗೆ ವೈದ್ಯರು ಔಷದಿ ಇಲ್ಲ ಎಂದು ಖಾಸಗಿ ಮೆಡಿಕಲ್ ಶಾಪ್ ನಲ್ಲಿ ಔಷದಿ ಕೋಳ್ಳಲು ಚೀಟಿ ನೀಡಿದ್ದು ಈ ಬಗ್ಗೆ ಅಧ್ಯಕ್ಷರಿಗೆ ದೂರು ನೀಡಿತ್ತಿದ್ದಹಾಗೆ ಆಡಳಿತ ವೈದ್ಯಧಿಕಾರಿ ಸತೀಶ್ ಬಾಬು ರವರನ್ನು ತರಾಟೆಗೆ ತೆಗೆದುಕೊಂಡರು ಇದಾದ ಬಳಿಕ ಭಾಗ್ಯ ಎಂಬ ಮಹಿಳೆ ಪೊಲೀಸರು ನನಗೆ ಸ್ಪಂದಿಸಿಲ್ಲ ಗಂಡ ಮಾರಾಣಾಂತಿಕ ಹಲ್ಲೆ ನಡೆಸಿ ಕಿರುಕುಳ ನೀಡುತಿದ್ದ ಈ ಬಗ್ಗೆ ದೂರು ದಾಖಲಿಸಿದ್ದರು ಸಹ ಕ್ರಮ ಕೈಗೊಂಡಿಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆಗೆ ಕಾಲಿಗೆ ಬಿದ್ದು ದೂರು ನೀಡಿದರೆ ಮತ್ತೊಂದು ಪ್ರಕರಣದಲ್ಲಿ ಸಂತೆಮಾವತ್ತೂರು ಗ್ರಾಮದ ಸುಮಿತ್ರ ಎಂಬ ಮಹಿಳೆಯ ಮೇಲೆ ಗಂಡ ದೌರ್ಜನ್ಯ ಎಸಗಿ ತಲೆಗೆ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ ಹುಲಿಯೂರುದುರ್ಗ ಪೊಲೀಸರಿಗೆ ದೂರು ನೀಡಿದರು ಕ್ರಮ ಕೈಗೊಂಡಿಲ್ಲ ಎಂದರು,ಕೂಡಲೆ ಮಹಿಳೆಯನ್ನು ತಬ್ಬಿ ಸಂತೈಸಿದ ಆಯೋಗದ ಅಧ್ಯಕ್ಷರು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಎರಡು ಠಾಣೆಯ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಬಳಿಕ ಆಸ್ಪತ್ರೆಯಲ್ಲಿ ಸ್ವಚ್ಚತೆ ಹಾಗೂ ಒಳರೋಗಿಗಳನ್ನು ಬೇಟಿಯಾಗಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಂದ ಸರಿಯಾದ ಚಿಕಿತ್ಸೆ ನೀಡಲಾಗುತ್ತಿದೆಯೆ ಎಂದು ರೋಗಿಗಳು ಹಾಗೂ ಬಾಣಂತಿಯರಿಂದ ಮಾಹಿತಿ ಪಡೆದರು ಬಳಿಕ ಶೌಚಾಲಯ ಗಳಲ್ಲಿ ನೀರಿನ ಸಮಸ್ಯೆ ಸ್ವಚ್ಚತೆ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆಡಳಿತ ವೈದ್ಯರಿಗೆ ತರಾಟೆಗೆ ತೆಗೆದುಕೊಂಡರು ಬಳಿಕ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು ಬಳಿಕ ಪೊಲೀಸ್ ಠಾಣೆಗೆ ಬೇಟಿ ನೀಡಿದ ಅವರು ಠಾಣೆಗೆ ಬರುವ ಮಹಿಳೆಯರಿಗೆ ಸಾಂತ್ವನದ ಜೋತೆಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ತಿವ್ರತರವಾದ ದೌರ್ಜನ್ಯ ಒಳಗಾದ ಮಹಿಳೆಯರಿಗೆ ತಕ್ಷಣ ಸ್ಪಂದಿಸಬೇಕು ನೀವು ಸರಿಯಾಗಿ ಸ್ಪಂದಿಸಿದರೆ ನಮ್ಮ ಬಳಿ ದೂರು ಯಾಕೆ ಬರುತ್ತವೆ ಎಂದರು, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಥಮ ದರ್ಜೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಸರಿಯಾದ ಶೌಚಾಲಯ ಇಲ್ಲ ನೀರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಹೆಣ್ಣು ಮಕ್ಕಳು ಶೌಚಾಲಯ ಸರಿ ಇಲ್ಲದ ಕಾರಣ ನೀರು ಕುಡಿಯುವುದನ್ನೆ ಬಿಟ್ಟಿದ್ದಾರೆ ಈ ಬಗ್ಗೆ ನನ್ನ ಗಮನಕ್ಕೆ ಇಗ ಬಂದಿದೆ ರಾಜ್ಯದ ಶಾಲಾ ಕಾಲೇಜಿನಲ್ಲಿ ಸರಿಯಾಗಿ ಶೌಚಾಲಯ ನಿರ್ವಹಣೆ ಮಾಡುವಂತೆ ಪತ್ರ ಬರೆಯುವುದಾಗಿ ಅಧ್ಯಕ್ಷರು ತಿಳಿಸಿದರು.ಈ ವೇಳೆ ಸಿಪಿಐ ಮಾಧ್ಯನಾಯಕ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದಿನೇಶ್,ಸಿಡಿಪಿಒ ಕಮಲ,ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಮರಿಯಪ್ಪ,ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್ ಬಾಬು, ಸೇರಿದಂತೆ ಹಲವರು ಉಪಸ್ಥಿತರಿದ್ದರು @publicnewskunigal