ನಿಗೂಢವಾಗಿ ಕಣ್ಮರೆಯಾಗಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋಗಿದ್ದ ಪ್ರಿಯಾಂಕಾ ಈಗ ಪ್ರಿಯಕರನ ಸಮೇತ ಲಾಕ್ ಆಗಿದ್ದಾಳೆ
ಕುಣಿಗಲ್ ತಾಲ್ಲೂಕಿನ ಯಲಿಯೂರು ಗ್ರಾಮದ ಪ್ರಿಯಾಂಕ (29) ಚಿಕ್ಕಮಗಳೂರಿನ ತನ್ನ ಚಿಕ್ಕಮ್ಮನ ಮಗಳ ಮದುವೆಗೆ ತೆರಳಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಕೆರೆಯ ಬಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು,ಆಕೆ ಇದೀಗ ಕುಣಿಗಲ್ ನಲ್ಲಿ ತನ್ನ ಪ್ರಿಯಕರನೊಂದಿಗೆ ಶನಿವಾರ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಬಿಹಾರ ಮೂಲದ ಡೇವಿಡ್ ಎಂಬಾತನ ಜತೆ ಕುಣಿಗಲ್ ಪಟ್ಟಣದ ಗೊಟ್ಟಿಕೆರೆಯ ಶಿವಣ್ಣ ಎಂಬುವವರಿಗೆ ಸೇರಿದ್ದ ಡೇವಿಡ್ ವಾಸವಿದ್ದ ಬಾಡಿಗೆ ಮನೆಯಲ್ಲಿ ಪೊಲೀಸರು ಪ್ರಿಯಾಂಕಳನ್ನು ಪತ್ತೆಹಚ್ಚಿದ್ದಾರೆ.ನಿಗೂಢವಾಗಿ ಕಣ್ಮರೆಯಾಗಿ ತನ್ನ ವಸ್ತು ಹಾಗೂ ಬಟ್ಟೆಗಳನ್ನು ಕೆರೆಯ ಬಳಿ ಎಸೆದು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋಗಿದ್ದ ಪ್ರಿಯಾಂಕ ಈಗ ಪ್ರಿಯಕರನ ಸಮೇತ ಲಾಕ್ ಆಗಿದ್ದಾಳೆ.
ಬೇಲೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ ಕೊಂಡು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದರು.ಶನಿವಾರ ಬೆಳಗ್ಗೆ ಕಲ್ಕೆರೆ ಕೆರೆಯ ತೀರದಲ್ಲಿ ಮಹಿಳೆಯ ಉಡುಪುಗಳು ಮತ್ತು ಕೆಲವು ವೈಯಕ್ತಿಕ ವಸ್ತುಗಳು ಪತ್ತೆಯಾಗಿದ್ದವು. ಇದರಿಂದಾಗಿ ಆತಂಕ ಸೃಷ್ಟಿಯಾಗಿತ್ತು. ಮಹಿಳೆ ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿದ್ದ ಹಿನ್ನೆಲೆಯಲ್ಲಿ, ಆಕೆಯನ್ನು ಅತ್ಯಾಚಾರ ಮಾಡಿ ಹತ್ಯೆಗೈದು, ಚಿನ್ನಾಭರಣ ದೋಚಿ ಶವವನ್ನು ಕೆರೆಗೆ ಎಸೆದಿರುವ ಶಂಕೆಯನ್ನು ಸಂಬಂಧಿಕರು ವ್ಯಕ್ತಪಡಿಸಿದ್ದರು.ಈ ಕಾರಣಕ್ಕೆ ಪ್ರಿಯಾಂಕ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ವಿಶೇಷ ಮೂರು ತಂಡಗಳನ್ನು ರಚಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ಲೊಕೇಶನ್ ಹಾಗೂ ಇತರೆ ತಾಂತ್ರಿಕ ಮಾಹಿತಿ ಆಧರಿಸಿ ಹುಡುಕಾಟ ನಡೆಸಿದ ಪರಿಣಾಮ,ಪ್ರಿಯಾಂಕ ಕುಣಿಗಲ್ ನಲ್ಲಿ ಪ್ರಿಯಕರನೊಂದಿಗೆ ಮನೆಯಲ್ಲಿ ಇರುವುದನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಗಂಡನ ಸ್ನೇಹಿತನಾಗಿದ್ದ ಪ್ರಿಯಕರ ಡೇವಿಡ್ ನೊಂದಿಗೆ ಸೇರಿ ಹೊರ ರಾಜ್ಯಕ್ಕೆ ಪರಾರಿಯಾಗುವ ಸಲುವಾಗಿ ಈ ನಾಪತ್ತೆ ಅತ್ಯಾಚಾರ ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬ ಕಟ್ಟುಕಥೆ ಸೃಷ್ಟಿಸಲು ಹೊಗಿ ಪತಿ ಹಾಗೂ ಮಗುವನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಲು ಯತ್ನಿಸಿದಾಕೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ,@publicnewskunigal