ತೋಟದಲ್ಲಿ ನೀರು ಹಾಯಿಸುವ ವೇಳೆ ವಿದ್ಯುತ್ ಪ್ರವಹಿಸಿ ರೈತ ಸಾವು ಪ್ರಕರಣ ದಾಖಲು!
ಕುಣಿಗಲ್ ತಾಲ್ಲೂಕು ಕಸಬಾ ಹೋಬಳಿ ವ್ಯಾಪ್ತಿಯ ಮುತುಗದಹಳ್ಳಿ ಗ್ರಾಮದ ಬಳಿ ಇರುವ ರಾಮಬಾಣ ಹಂತದಲ್ಲಿರುವ ತೊಟಕ್ಕೆ ನೀರು ಹಾಯಿಸುವ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೆ ರೈತ ಸಾವನ್ನಪ್ಪಿರುವ ಘಟನೆ ಮುತುಗದಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ ಚೌದರಿ ಪಾಳ್ಯ ಗ್ರಾಮದ ತಿಮ್ಮಪ್ಪ (55) ಮೃತ ದುರ್ದೈವಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದ ರೈತ ತಿಮ್ಮಪ್ಪ ತೋಟಕ್ಕೆ ಹೊಗಿದ್ದಾನೆ ಈ ವೇಳೆ ಅವಘಡ ಸಂಭವಿಸಿದೆ ಇನ್ನೂ ಘಟನೆಯ ಸ್ಥಳಕ್ಕೆ ಕುಣಿಗಲ್ ಪೊಲೀಸ್ ಠಾಣೆಯ ಸಿಪಿಐ ಮಾಧ್ಯನಾಯಕ್ ಬೆಸ್ಕಾಂ ಸಹಾಯಕ ಅಭಿಯಂತರ ಸಿಂಧೂರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಕಾರಣದಿಂದ ಈ ಘಟನೆ ಸಂಭವಿಸಿದೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ ಬೆಸಿಗೆ ಸಮಿಪಿಸುತ್ತಿರು ಸಂದರ್ಭ ದಲ್ಲಿ ವಿದ್ಯುತ್ ತಂತಿಗಳು ಜೊತು ಬಿಳಲಿದ್ದು ಎಚ್ಚರಿಕೆ ವಹಿಸಬೇಕಿದ್ದ ಅಧಿಕಾರಿಗಳು ಪೋನ್ ಕರೆ ಮಾಡಿದರು ಕರೆ ಸ್ವೀಕರಿಸುವುದಿಲ್ಲ ತ್ರಿಫೇಸ್ ವಿದ್ಯುತ್ ಸರಬರಾಜಿನಲ್ಲು ಇತ್ತಿಚೇಗೆ ವ್ಯತ್ಯಯ ಉಂಟಾಗುತ್ತಿದ್ದು ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹೆಚ್ಚುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ @publicnewskunigal