ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ಹಾಗೂ ಪೂಜೆಗೆ ನಿರಾಕರಣೆ ಆರೋಪ ಹಿನ್ನೆಲೆ ಪ್ರಕರಣ ದಾಖಲು ಅರ್ಚಕನ ಬಂಧನ!
ಕುಣಿಗಲ್ ತಾಲ್ಲೂಕಿನ ಯಡಿಯೂರು ಹೋಬಳಿ ವ್ಯಾಪ್ತಿಯ ತಿಗಳರಪಾಳ್ಯ ಗ್ರಾಮದ ಮೂಡಲಗಿರಿ ವೆಂಕಟೇಶ್ವರ ದೇವಸ್ಥಾನಕ್ಕೆ ದಲಿತ ಜನಾಂಗದ ಮಹಿಳೆಗೆ ಪ್ರವೇಶ ನಿರಾಕರಣೆ ಮಾಡಿದ್ದಲ್ಲದೆ ಅವಾಚ್ಚ ಶಬ್ದಗಳಿಂದ ನಿಂದಿಸಿ ಮೋಬೈಲ್ ಪೋನ್ ಕಿತ್ತುಕೊಂಡು ಹಲ್ಲೆ ನಡೆಸಿ ದೇವಾಲಯದಿಂದ ಹೊರ ಹಾಕಿರುವ ಘಟನೆ ನಡೆದಿದ್ದು ಈ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ ಫೆಬ್ರವರಿ 23 ದೂರು ದಾರ ಯುವತಿ ರೋಜಾ ಎಂಬುವವರು ತನ್ನ ತಾಯಿ ಮತ್ತು ತಂಗಿ ರವರೊಂದಿಗೆ ಮಾರಮ್ಮ ದೇವಿಯ ಹಬ್ಬಕ್ಕೆಂದು ಬೆಂಗಳೂರಿನಿಂದ ತಿಗಳರಪಾಳ್ಯ ಗ್ರಾಮಕ್ಕೆ ಬಂದಿದ್ದರು ಮಾರಮ್ಮ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ನಂತರ ಗ್ರಾಮದ ವೆಂಕಟರಮಣಸ್ವಾಮಿ ಮೂಡಲಗಿಯಪ್ಪ ದೇವಾಲಯಕ್ಕೆ ಪೂಜೆಗೆಂದು ತಡರಾತ್ರಿ 10-30ಕ್ಕೆ ದೇವಾಲಯಕ್ಕೆ ತೆರಳಿದ್ದಾರೆ ಈ ವೇಳೆ ದೇವಸ್ಥಾನದ ಒಳಗೆ ಪೂಜೆಗೆ ಹೋಗುತ್ತಿದ್ದಾಗ ಇದೇ ಗ್ರಾಮದ ತಿಗಳರ ಜನಾಂಗಕ್ಕೆ ಸೇರಿದ ಜಯಲಕ್ಷ್ಮಮ್ಮ ಎಂಬುವವರು ಯುವತಿ ಹಾಗೂ ಕುಟುಂಬಸ್ಥರನ್ನು ನೋಡಿ ನೀನು ಯಾವ ಜಾತಿ ಎಂದು ತಿಳಿದಿಲ್ಲವಾ ಈ ದೇವಸ್ಥಾನದ ಒಳಗೆ ಹೋಗಬಾರದು ಎಂದು ಜಾತಿ ಹಿಡಿದು ನಿಂದಿಸಿ ಮಾತನಾಡಿದ್ದಾರೆ ನಾನು ಏಕೆ ಹೋಗಬಾರದು ಎಂದು ಯುವತಿ ಮರು ಪ್ರಶ್ನೆ ಮಾಡಿ ಒಳಗೆ ಹೋದಾಗ ದೇವಸ್ಥಾನದ ಪೂಜಾರಿ ಹನುಮಯ್ಯ ನೀನು ಕೆಳ ಜಾತಿಯವಳು ನಮ್ಮ ದೇವಸ್ಥಾನಕ್ಕೆ ಏಕೆ ಬಂದಿದ್ದೀಯಾ ಎಂದು ಜಾತಿ ನಿಂದನೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ ದೇವಾಲಯಕ್ಕೆ ತೆರಳಿದ್ದ ತಾಯಿ ಮತ್ತು ಮಕ್ಕಳ ತಲೆಕೂದಲು ಹಿಡಿದು ಎಳೆದಾಡಿ ಹಲ್ಲೆ ನಡೆಸಿ ಮೊಬೈಲ್ ಪೋನ್ ಕಿತ್ತುಕೊಂಡು ದೇವಾಲಯದಿಂದ ಹೊರಗೆ ತಳ್ಳಿರುವ ಆರೋಪ ಕೇಬಂದಿದೆ ಗಾಲಾಟೆ ವೇಳೆ ಯುವತಿಯ ಬಳಿಯಿದ್ದ ಮೊಬೈಲ್ ಪೋನ್ ಕಿತ್ತುಕೊಂಡಿದ್ದ ಗ್ರಾಮದ ಶ್ರೀನಿವಾಸ್ ಎಂಬಾತ ಮಂಗಳವಾರ ಬೆಳಗ್ಗೆ ಮೊಬೈಲ್ ಪೋನ್ ನಲ್ಲಿದ್ದ ದಾಖಲೆಗಳನ್ನು ನಾಶ ಪಡಿಸಿ ತಂದು ವಾಪಸ್ ಕೊಟ್ಟಿದ್ದಾನೆ ಬಳಿಕ ಯುವತಿ ಹಾಗೂ ಕುಟುಂಬಸ್ಥರು ಅಮೃತೂರು ಪೊಲೀಸ್ ಠಾಣೆಗೆ ತೆರಳಿ ದೂರು ಘಟನೆಯ ಬಗ್ಗೆ ದೂರು ದಾಖಲಿಸಿದ್ದು ಘಟನೆ ಸಂಬಂಧ ದೇವಾಲಯದ ಅರ್ಚಕನನ್ನು ಅಮೃತೂರು ಪೊಲೀಸರು ಬಂಧಿಸಿದ್ದಾರೆ @publicnewskunigal