ಚಿರತೆ ದಾಳಿಯಿಂದ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು ಸ್ಥಳಕ್ಕೆ ಶಾಸಕ ಡಾ.ರಂಗನಾಥ ಬೇಟಿ ರೈತರಿಗೆ ಸಾಂತ್ವಾನ!
ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿ ವ್ಯಾಪ್ತಿಯ ಮಡಿಕೆಹಳ್ಳಿ ಗ್ರಾಮದಲ್ಲಿ ಕುರಿ ಕೊಟ್ಟಿಗೆಗೆ ನುಗ್ಗಿದ ಚಿರತೆ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವಿಗೆ ಕಾರಣವಾಗಿದೆ ಗ್ರಾಮದ ಚಿಕ್ಕಚಂದ್ರಯ್ಯ ಎಂಬುವವರ ಮನೆಯ ಪಕ್ಕದಲ್ಲಿ ಇದ್ದ ಕುರಿ ಕೊಟ್ಟಿಗೆಗೆ ಮಂಗಳವಾರ ತಡ ರಾತ್ರಿ ಚಿರತೆ ನುಗ್ಗಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕುರಿಗಳ ರಕ್ತ ಹಿರಿದೆ ಬೆಳಿಗ್ಗೆ ಎದ್ದು ಕೊಟ್ಟಿಗೆ ನೊಡಲಾಗಿ ಕುರಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ ಕುಟುಂಬಕ್ಕೆ ಆಸರೆಯಾಗಿದ್ದ ಕುರಿಗಳನ್ನು ಚಿರತೆ ದಾಳಿಯಿಂದ ಕಳೆದುಕೊಂಡ ಕುಟುಂಬಸ್ಥರು ಅತಂಕ ವ್ಯಕ್ತಪಡಿಸಿದ್ದು ಚಿರತೆ ಸೆರೆ ಹಿಡಿಯುವಂತೆ ಹಾಗೂ ಪರಿಹಾರಕ್ಕೆ ಒತ್ತಾಯಿಸಿದ್ದಾರೆ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಪಿ.ಜಗದೀಶ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಚಿರತೆ ದಾಳಿಯಿಂದ ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಅರಣ್ಯ ಇಲಾಖೆಯಿಂದ ಸಿಗುವ ಪರಿಹಾರ ಕೊಡಿಸುವುದಾಗಿ ತಿಳಿಸಿದ್ದಾರೆ ಇನ್ನೂ ಚಿರತೆ ದಾಳಿಯ ಮಾಹಿತಿ ಪಡೆದ ಶಾಸಕ ಡಾ.ರಂಗನಾಥ್ ಮಡಿಕೆಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ರೈತ ಚಿಕ್ಕಚಂದ್ರಯ್ಯ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಿರತೆ ಸೇರೆಗೆ ಸೂಚಿಸಿದ್ದಾರೆ ತಾಲ್ಲೂಕಿನಲ್ಲಿ ಇತ್ತಿಚೇಗೆ ಚಿರತೆ ಉಪಟಳ ಹೆಚ್ಚುತ್ತಿದ್ದರು ಅರಣ್ಯ ಇಲಾಖೆಯಿಂದ ಯಾವುದೆ ಕ್ರಮವಿಲ್ಲ. ಮೂಲಗಳ ಪ್ರಕಾರ ಅರಣ್ಯ ಇಲಾಖೆಯಲ್ಲಿ ಬೋನುಗಳ ಹಾಗೂ ಸಿಬ್ಬಂದಿಗಳ ಮತ್ತು ಪರಿಕರಗಳ ಕೊರತೆಯ ಕಾರಣದಿಂದ ಚಿರತೆ ದಾಳಿ ಪ್ರಕರಣಗಳ ವೇಳೆ ಚಿರತೆ ಸೆರೆಗೆ ಸಮಸ್ಯೆಯಾಗುತ್ತಿದೆ ಎಂಬ ವಿಷಯವು ಕೇಳಿಬಂದಿದೆ ಇನ್ನಾದರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ @publicnewskunigal